For Quick Alerts
  ALLOW NOTIFICATIONS  
  For Daily Alerts

  ತನ್ನದೆ ಶೈಲಿಯ ಡೈಲಾಗ್ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ನಟ ಧ್ರುವ ಸರ್ಜಾ

  |

  ಕೊರೊನಾ ಎರಡನೇ ಅಲೆಯಿಂದ ಭಾರತ ತತ್ತರಿಸಿ ಹೋಗಿದೆ. ಸೋಂಕಿತರು ಆಸ್ಪತ್ರೆ, ಬೆಡ್, ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದಾರೆ. ಸಾವಿರಾರು ಜನರನ್ನು ಕೊರೊನಾ ಬಲಿ ಪಡೆಯುತ್ತಿದೆ. ಜನರು ಆತಂಕದಲ್ಲೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

  ಇಂಥ ಸಂಕಷ್ಟದ ಸಮಯದಲ್ಲಿ ಅನೇಕರು ಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಸಿನಿ ಸೆಲೆಬ್ರಿಟಿಗಳು ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಭಯವನ್ನು ಮೊದಲು ಬಿಡಿ ಎಂದು ಧೈರ್ಯ ತುಂಬುವ ಮಾತುಗಳನ್ನು ಹೇಳುತ್ತಿದ್ದಾರೆ. ಈ ಸಮಯದಲ್ಲಿ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಕೂಡ ತನ್ನದೆ ಶೈಲಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

  ಧ್ರುವ ಸರ್ಜಾ 'ದುಬಾರಿ'ಗೆ ತಾತ್ಕಾಲಿಕ ಬ್ರೇಕ್: ಆಕ್ಷನ್ ಪ್ರಿನ್ಸ್ ಮುಂದಿನ ಸಿನಿಮಾ ಯಾವುದು?ಧ್ರುವ ಸರ್ಜಾ 'ದುಬಾರಿ'ಗೆ ತಾತ್ಕಾಲಿಕ ಬ್ರೇಕ್: ಆಕ್ಷನ್ ಪ್ರಿನ್ಸ್ ಮುಂದಿನ ಸಿನಿಮಾ ಯಾವುದು?

  ಡೈಲಾಗ್ ಹೇಳುವುದಲ್ಲಿ ನಟ ಧ್ರುವ ಸರ್ಜಾ ಎತ್ತಿದ ಕೈ. ಕೊರೊನಾ ಬಗ್ಗೆ ವಿಭಿನ್ನವಾಗಿ ಡೈಲಾಗ್ ಹೇಳುವ ಮೂಲಕ ಮಾಸ್ಕ್ ಧರಿಸಿ ಎನ್ನುವುದನ್ನು ಹೇಳಿದ್ದಾರೆ.

  'ಅಪ್ಪ-ಅಮ್ಮ ಕೊಟ್ಟಿರುವ ಅದ್ದೂರಿ ಬದುಕನ್ನು ಟಚ್ ಮಾಡೋಕೆ ಜವರಾಯನ ಏಜೆಂಟ್ ಕೊರೊನಾ ನಮ್ಮತ್ರಾನೆ ಐಸ್ ಪೈಸ್ ಆಟ ಆಡುತ್ತಿದೆ. ಆದರೆ ಅದಕ್ಕೆ ಗೊತ್ತಿಲ್ಲ, ನಾವು ಮಾಸ್ಕ್ ಹಾಕಿಕೊಂಡು ಅದಕ್ಕೆ ದಿನ ನಾಳೆ ಬಾ ನಾಳೆ ಬಾ ಅಂತ ಚೆಟ್ ಇಟ್ಟಿದ್ದೀವಿ ಅಂತ. ಅಣ್ಣಂದಿರ ಅಕ್ಕಂದಿರ ಭೂಮಿ ಮೇಲೆ ಹುಟ್ಟೋದೆ ಭಾಗ್ಯ ಅದರಲ್ಲೂ ಮನುಷ್ಯನ ಜನ್ಮ ಸಿಗುವುದು ಸೌಭಾಗ್ಯ ಸಿಕ್ಕಿದನ್ನು ಇವತ್ತು ಕಾಪಾಡಿಕೊಳ್ಳಬೇಕು ಎಂದರೆ ಉಳಿಕೊಳ್ಳಬೇಕು ನಮ್ಮ ಆರೋಗ್ಯ' ಎಂದು ತನ್ನದೇ ಶೈಲಿಯಲ್ಲಿ ಹೇಳಿದ್ದಾರೆ.

  ಎಲ್ಲದಕ್ಕೂ ರೊಚ್ಚಿಗೇಳುವ ಕಂಗನಾ ರಣಾವತ್ ಗೆ ನೆಟ್ಟಿಗರಿಂದ ತರಾಟೆ | Filmibeat Kannada

  ಅಂದಹಾಗೆ ನಟ ಧ್ರುವ ಸರ್ಜಾ ಕಳೆದ ವರ್ಷ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೂ ಕೊರೊನಾ ಸೋಂಕು ತಗುಲಿತ್ತು. ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ಧ್ರುವ ದಂಪತಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

  English summary
  Actor Dhruva Sarja creates awareness about Corona in his own style.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X