Just In
Don't Miss!
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೆಜಿಎಫ್ನಲ್ಲಿ ಮಹದೇವಪುರ ಸಬ್ ಇನ್ಸ್ಪೆಕ್ಟರ್ಗೆ ಚಾಕು ಇರಿತ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪೊಗರು' ಸಿನಿಮಾವನ್ನು ಅಣ್ಣ ಚಿರುಗೆ ಅರ್ಪಿಸಿದ ಧ್ರುವ ಸರ್ಜಾ
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷೆಯ ಪೊಗರು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಫೆಬ್ರವರಿ 19ಕ್ಕೆ ಪೊಗರು ಸಿನಿಮಾ ಅಭಿಮಾನಿಗಳ ಮುಂದೆ ಬರ್ತಿದೆ. ಸದ್ಯ ಪ್ರಮೋಷನ್ ನಲ್ಲಿ ನಿರತರಾಗಿರುವ ಪೊಗರು ಸಿನಿಮಾತಂಡ ಇತ್ತೀಚಿಗಷ್ಟೆ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಧ್ರುವ ಸರ್ಜಾ ಸಿನಿಮಾ ಯಾಕೆ ತಡವಾಗಿದೆ ಎಂದು ವಿವರಿಸಿದರು. ನಂಬಿಕೆ ಉಳಿಸಿಕೊಳ್ಳುವುದು ತುಂಬಾ ಕಷ್ಟ. ಅದಕ್ಕೆ ತುಂಬಾ ಶ್ರಮಿಸಬೇಕು. ಹಾಗಾಗಿ ತುಂಬಾ ತಡವಾಗಿದೆ ಎನ್ನುತಾ ಖುಷಿಯಾಗೆ ಮಾತು ಪ್ರಾರಂಭಿಸಿದ ಧ್ರುವ ಕೊನೆಯಲ್ಲಿ ಅಣ್ಣನನ್ನು ನೆನೆದು ಭಾವುಕರಾದರು.
ಬಂದೇ ಬರ್ತಾರೆ ರಶ್ಮಿಕಾ ಮಂದಣ್ಣ: ನಂದ ಕಿಶೋರ್
ಈ ಸಿನಿಮಾದ ಎಡಿಟಿಂಗ್ ಸಮಯದಲ್ಲಿ ಅಣ್ಣ ಸಿನಿಮಾ ನೋಡಿದ್ದ, ಹಾಗೆ ಮಾಡು ಹೀಗೆ ಮಾಡು ಎಂದು ಚಿರು ಹೇಳಿರುವುದನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ನಾನು ಇಬ್ಬರನ್ನು ನೆನಪಿಸಿಕೊಳ್ಳುತ್ತೇನೆ. ಅರ್ಜುನ್ ಸರ್ಜಾ ಅಂಕಲ್ ಮತ್ತು ನಮ್ಮ ಅಣ್ಣ. ಈ ಸಿನಿಮಾವನ್ನು ಅಣ್ಣ ಎಡಿಟಿಂಗ್ ನಲ್ಲಿ ನೋಡಿದ್ದ, ನೋಡುವಾಗ ಹೇಳಿದ್ದ, ಈ ದೃಶ್ಯ ತುಂಬಾ ಲ್ಯಾಗ್ ಆಗುತ್ತೆ ತೆಗಿ, ಇದು ಹೀಗೆ ಮಾಡಬೇಕು, ಹಾಗೆ ಮಾಡು ಅಂತ ಹೇಳುತ್ತಿದ್ದ' ಎಂದು ಅಣ್ಣ ಬಗ್ಗೆ ಮಾತನಾಡಿದ್ದಾರೆ.
ಇನ್ನು 'ಫಸ್ಟ್ ಡೇ ಫಸ್ಟ್ ಶೋ ಯಾವಾಗಲು ನಾನು ಅವನ ಜೊತೆ ನೋಡುತ್ತಿದೆ. ಆದರೀಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಸಿನಿಮಾವನ್ನು ನಾನು ನಮ್ಮ ಅಣ್ಣನಿಗೆ ಅರ್ಪಿಸುತ್ತಿದ್ದೀನಿ' ಎಂದು ಹೇಳುತ್ತಾ ಧ್ರುವ ಭಾವುಕರಾದರು.
ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊಗರು ಸಿನಿಮಾಗಾಗಿ ಇಡೀ ಸುಮಾರು ವರ್ಷಗಳಿಂದ ಶ್ರಮಿಸಿದೆ. ಪಾತ್ರಕ್ಕಾಗಿ ಧ್ರುವ ಸರ್ಜಾ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡುಗಳು ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಧ್ರುವ ಪೊಗರು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ, ನಿರೀಕ್ಷೆ ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಕುತೂಹಲಕ್ಕೆ ಫೆಬ್ರವರಿ 19ಕ್ಕೆ ತೆರೆಬೀಳಲಿದೆ.