ಇನ್ಸ್ಟಾಗ್ರಾಮ್ ನಲ್ಲಿ ಭಾವಿ ಪತ್ನಿ ಜೊತೆ ಧ್ರುವ ಮೊದಲ ಟಿಕ್ ಟಾಕ್
Recommended Video
ಇತ್ತೀಚಿಗಷ್ಟೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದರು. ಇದೀಗ ತಮ್ಮ ಖಾತೆಗೆ ಮೊದಲ ಟಿಕ್ ಟಾಕ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್, ಟಿಕ್ ಟಾಕ್ ಇದೆಲ್ಲದರಿಂದ ದೂರ ಇದ್ದ ಧ್ರುವ ಸರ್ಜಾ ಭಾವಿ ಪತ್ನಿ ಪ್ರೇರಣ ಜೊತೆಗೆ ಟಿಕ್ ಟಾಕ್ ಮಾಡಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲ ಟಿಕ್ ಟಾಕ್ ನಲ್ಲಿಯೂ ಧ್ರುವ ನಟನೆ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
'ಒರಟ ಐ ಲವ್ ಯು' ಸಿನಿಮಾದ 'ಯಾರೋ ಕಣ್ಣಲ್ಲಿ ಕಣ್ಣನಿಟ್ಟು..' ಹಾಡಿಗೆ ಧ್ರುವ ಟಿಕ್ ಟಾಕ್ ಮಾಡಿದ್ದಾರೆ. ಧ್ರುವ ವಿಡಿಯೋಗೆ ಫ್ಯಾನ್ಸ್ ಗಳ ಲೈಕ್, ಕಾಮೆಂಟ್ಸ್ ಗಳು ಸಿಕ್ಕಿದೆ.

ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ನಿರ್ಧಾರವನ್ನು ಧ್ರುವ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆ ತೆರೆದ ನಾಲ್ಕೇ ದಿನದಲ್ಲಿ 1 ಲಕ್ಷದ 71 ಸಾವಿರ ಫಾಲೋಹರ್ಸ್ ಅನ್ನು ಪಡೆದಿದ್ದಾರೆ.
ಧ್ರುವಗೆ ಇರುವ ಕ್ರೇಜ್ ಸೋಷಿಯಲ್ ಮೀಡಿಯದಲ್ಲಿಯೂ ಮುಂದುವರೆದಿದೆ.
ಸದ್ಯ, 'ಪೊಗರು' ಸಿನಿಮಾದಲ್ಲಿ ಧ್ರುವ ಸರ್ಜಾ ಅಭಿನಯಿಸುತ್ತಿದ್ದಾರೆ. ಇದೇ ವರ್ಷ ಈ ಸಿನಿಮಾ ಬಿಡುಗಡೆ ಆಗುತ್ತಿದೆ.
ವಿಡಿಯೋ ನೋಡಲು


Click it and Unblock the Notifications