For Quick Alerts
  ALLOW NOTIFICATIONS  
  For Daily Alerts

  'ಕೌಂಟರ್ ಡೈಲಾಗ್' ವಿವಾದದ ಬಗ್ಗೆ 'ಭರ್ಜರಿ' ಉತ್ತರ ಕೊಟ್ಟ ಧ್ರುವ ಸರ್ಜಾ.!

  By Naveen
  |

  ''ಹವಾ'' ಎನ್ನುವ ಒಂದು ಪದಕ್ಕೆ ಅದೇನು ಪವರ್ ಇದೆಯೋ ಏನೋ. ಈ ಒಂದು ಪದ, ಪದೇ ಪದೇ ಸ್ಯಾಂಡಲ್ ವುಡ್ ದೊಡ್ಡ ಸುದ್ದಿ ಮಾಡುತ್ತಿದೆ. ಇತ್ತೀಚೆಗಷ್ಟೆ 'ಭರ್ಜರಿ' ಸಿನಿಮಾದ ಮೂಲಕ ಮತ್ತೆ 'ಹವಾ' ದೊಡ್ಡ ಚರ್ಚೆಗೆ ಕಾರಣವಾಗಿದೆ.

  ಸಿನಿಮಾಗಳಲ್ಲಿ ಬರುವ ಈ 'ಕೌಂಟರ್ ಡೈಲಾಗ್'ಗಳ ಬಗ್ಗೆ ಇತ್ತೀಚೆಗಷ್ಟೆ ನಟ ದರ್ಶನ್ ಮಾತನಾಡಿದ್ದರು. ಅದರ ಬಳಿಕ ಈಗ ನಟ ಧ್ರುವ ಸರ್ಜಾ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ಮಾಧ್ಯಮಗಳ ಮುಂದೆ ಮಾತನಾಡುತ್ತ 'ಕೌಂಟರ್ ಡೈಲಾಗ್' ಬಗ್ಗೆ ಧ್ರುವ ಹೇಳಿಕೆ ನೀಡಿದರು. ಮುಂದೆ ಓದಿ...

  'ಹವಾ' ಎನ್ನುವುದು ಒಂದು ಪದ ಅಷ್ಟೆ.!

  'ಹವಾ' ಎನ್ನುವುದು ಒಂದು ಪದ ಅಷ್ಟೆ.!

  'ಭರ್ಜರಿ' ಚಿತ್ರದ 'ಹವಾ' ಡೈಲಾಗ್ ಬಗ್ಗೆ ಮಾತನಾಡಿದ ಧ್ರುವ ಸರ್ಜಾ 'ಹವಾ' ಎನ್ನುವುದು ಒಂದು ಪದ ಅಷ್ಟೆ.'' ಎಂದು ಹೇಳಿ ಎಲ್ಲ ಗಾಸಿಪ್ ಗಳಿಗೆ ಕೊನೆ ಹಾಡಿದ್ದಾರೆ.

  'ಬಹದ್ದೂರ್' ಚಿತ್ರದಲ್ಲಿಯೂ ಇತ್ತು

  'ಬಹದ್ದೂರ್' ಚಿತ್ರದಲ್ಲಿಯೂ ಇತ್ತು

  ''ಎಲ್ಲರೂ 'ಭರ್ಜರಿ' ಚಿತ್ರದ ಹವಾ ಡೈಲಾಗ್ ಬಗ್ಗೆಯೇ ಹೇಳುತ್ತಾರೆ. 'ಬಹದ್ದೂರ್' ಸಿನಿಮಾದಲ್ಲಿಯೂ ಹವಾ ಡೈಲಾಗ್ ಇತ್ತು. ಅಲ್ಲಿ ನಟ ಜಹಂಗೀರ್ ಮತ್ತು ನನ್ನ ನಡುವೆ ಆ ಡೈಲಾಗ್ ಇದೆ.'' - ಧ್ರುವ ಸರ್ಜಾ, ನಟ

  ಯಾರನ್ನು ಟಾರ್ಗೆಟ್ ಮಾಡಿಲ್ಲ

  ಯಾರನ್ನು ಟಾರ್ಗೆಟ್ ಮಾಡಿಲ್ಲ

  ''ನಾನು ಯಾವುದೇ ಸಿನಿಮಾ ಬಗ್ಗೆ ಅಥವಾ ಯಾರನ್ನು ಟಾರ್ಗೆಟ್ ಮಾಡಿ ಮಾತನಾಡುವುದಿಲ್ಲ. ಬೇರೆ ಯಾರು ಕೂಡ ಆ ರೀತಿ ಮಾತನಾಡುವುದಿಲ್ಲ. ಎಲ್ಲರೂ ನಿಜವಾಗಿಯೂ ಸಿನಿಮಾಗಾಗಿ ಮತ್ತು ಕಥೆಗಾಗಿ ಈ ರೀತಿ ಮಾಡಿರುತ್ತಾರೆ.'' - ಧ್ರುವ ಸರ್ಜಾ, ನಟ

  ನಾವು ಹೇಳುವುದು ಅಷ್ಟೆ

  ನಾವು ಹೇಳುವುದು ಅಷ್ಟೆ

  ''ದರ್ಶನ್ ಸರ್ ಹೇಳಿದ ಹಾಗೆ ಆ ಡೈಲಾಗ್ ಗಳನ್ನು ಯಾರೋ ಬರೆದಿರುತ್ತಾರೆ. ಡೈರೆಕ್ಟರ್ ಗಳು ಸಿನಿಮಾಗಾಗಿ ಮಾಡಿಸಿರುತ್ತಾರೆ. ಅದನ್ನು ನಾವು ಹೇಳುತ್ತೀವಿ ಅಷ್ಟೆ.'' - ಧ್ರುವ ಸರ್ಜಾ, ನಟ

  'ಲಿಂಕ್ ಮಾಡಬೇಡಿ' ಎಂದಿದ್ದರು ದರ್ಶನ್

  'ಲಿಂಕ್ ಮಾಡಬೇಡಿ' ಎಂದಿದ್ದರು ದರ್ಶನ್

  ಇದೇ ಕೌಂಟರ್ ಡೈಲಾಗ್ ಗಳ ಬಗ್ಗೆ ದರ್ಶನ್ ಸಹ ಮಾತನಾಡಿದ್ದರು. ''ನಾವು ಕಲಾವಿದರಾಗಿ ಮಾತ್ರ ಡೈಲಾಗ್ ಹೇಳ್ತಿವಿ. ಆಮೇಲೆ, ಅದನ್ನು ಕೌಂಟರ್ ಕೊಟ್ರು ಅಂತ ಲಿಂಕ್ ಮಾಡ್ತಾರೆ. ಖಂಡಿತಾ ಯಾರಿಗೂ ಯಾರೂ ಕೌಂಟರ್ ಕೊಡ್ತಿಲ್ಲ. ಎಲ್ಲರೂ ಅವರವರ ಹೊಟ್ಟೆ ಪಾಡಿಗೆ ಮಾಡ್ತಿದ್ದಾರೆ. ಎಲ್ಲರು ಅವರವರ ದಾರಿ ನೋಡ್ಕೊಂಡು ಹೋಗ್ತಿದ್ದಾರೆ ಅಷ್ಟೇ'' ಎಂದು ದರ್ಶನ್ ಹೇಳಿದ್ದರು.

  'ಕೌಂಟರ್ ಡೈಲಾಗ್'ಗಳ ಸಮರಕ್ಕೆ ಚಾಲೆಂಜಿಂಗ್ ಸ್ಟಾರ್ ಬ್ರೇಕ್.!

  ಏನಿದು ಡೈಲಾಗ್ ಸಮರ..?

  ಏನಿದು ಡೈಲಾಗ್ ಸಮರ..?

  'ನಂದೆ ಹವಾ, ನಂದೇ ಹವಾ' ಎಂದು ಧ್ರುವ 'ಭರ್ಜರಿ' ಚಿತ್ರದಲ್ಲಿ ಒಂದು ಡೈಲಾಗ್ ಹೇಳಿದ್ದರು. ಅದು ಬೇರೆ ನಟರಿಗೆ ಕೌಂಟರ್ ಕೊಟ್ಟಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಆಗಿತ್ತು. ಆದರೆ ಈಗ ಈ ಬಗ್ಗೆ ಧ್ರುವ ತಮ್ಮ ಸ್ಪಷ್ಟನೆ ನೀಡಿದ್ದಾರೆ.

  ಧ್ರುವ ಸರ್ಜಾ ಹೊಡೆದ ಈ ಡೈಲಾಗ್ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ?

  ಇದು ಸಿನಿಮಾಗೆ ಸೀಮಿತವಾಗಿರಲಿ

  ಇದು ಸಿನಿಮಾಗೆ ಸೀಮಿತವಾಗಿರಲಿ

  ಒಂದಂತೂ ನಿಜಾ. ಈ ರೀತಿಯ ಡೈಲಾಗ್ ಗಳು ಸಿನಿಮಾಗೆ ಸಂಬಂಧಿಸಿದಂತೆ ಆ ಪಾತ್ರಗಳಿಗೆ ಅನ್ವಯವಾಗಿ ಮೂಡಿ ಬಂದಿರೋದು. ಅದನ್ನ ಫ್ಯಾನ್ಸ್ ಸಿನಿಮಾದಲ್ಲಿ ನೋಡಿ ಎಂಜಾಯ್ ಮಾಡಿ ಬಿಟ್ಟು ಬಿಡಿ. ಇದರಲ್ಲಿ ಯಾರು, ಯಾರಿಗೂ ಟಾಂಗ್, ಕೌಂಟರ್ ಕೊಟ್ಟರು ಎಂದು ಹೋಲಿಸದೇ ಹೋದರೆ, ಅದೇ ಒಳ್ಳೆಯ ಬೆಳವಣಿಗೆ.

  English summary
  Actor Dhruva Sarja gave clarification about 'Bharjari' movie dialogue controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X