For Quick Alerts
  ALLOW NOTIFICATIONS  
  For Daily Alerts

  ಚಿರು ನಿಧನ ಹೊಂದುವ ಹಿಂದಿನ ದಿನ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡ ಧ್ರುವ ಸರ್ಜಾ

  By ಫಿಲ್ಮ್ ಡೆಸ್ಕ್
  |

  ಚಿರಂಜೀವಿ ಸರ್ಜಾ ಈಗ ನೆನಪು ಮಾತ್ರ. ಇರುವಷ್ಟು ದಿನ ಕುಟುಂಬದ ಜೊತೆ ಸಂತೋಷವಾಗಿ, ಖುಷಿ ಖುಷಿಯಾಗಿ ಇದ್ದು ಮರೆಯಲಾಗದಷ್ಟು ನೆನಪನ್ನು ಬಿಟ್ಟುಹೋಗಿದ್ದಾರೆ. ಅದರಲ್ಲೂ ಚಿರು ಸಹೋದರ ಧ್ರುವ ಸರ್ಜಾಗೆ ಅಣ್ಣ ನಿಲ್ಲದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿರು ಮತ್ತು ಧ್ರುವ ಇಬ್ಬರು ಸಹೋದರರು ಎನ್ನುವುದಕ್ಕಿಂತ ಹೆಚ್ಚಾಗಿ ಉತ್ತಮ ಸ್ನೇಹಿತರಾಗಿದ್ದರು. ಚಿರು ತಮ್ಮನನ್ನು ಮಗುವಿನ ಹಾಗೆ ನೋಡಿಕೊಳ್ಳುತ್ತಿದ್ದರು. ಅಣ್ಣ-ತಮ್ಮನ ಬಾಂಧವ್ಯ ಸಾರುವ ಸಾಕಷ್ಟು ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ.

  Dhruva Sarja has Shared the last photo with his brother Chiranjeevi Sarja | Filmibeat Kannada

  ಸದಾ ಜೊತೆಯಲ್ಲಿಯೆ ಇರುತ್ತಿದ್ದ ಅಣ್ಣನ ಅಗಲುವಿಕೆ ಅರಗಿಸಿಕೊಳ್ಳು ಸಾಧ್ಯವಾಗುತ್ತಿಲ್ಲ. ಅಣ್ಣ ನಿಧನಹೊಂದಿ ಐದು ದಿನದ ಬಳಿಕ ಧ್ರುವ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಧ್ರುವ ಸರ್ಜಾ ಭಾವುಕ ಮಾತು ಎಂತವರಿಗಾದರು ಹೃದಯ ಹಿಂಡುವಂತಿದೆ. ಪದೇ ಪದೇ ಕಾಡುವ ಅಣ್ಣನ ನೆನಪು ಕಣ್ಣೀರು ತರಿಸುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಧ್ರುವ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಮುಂದೆ ಓದಿ..

  'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ

  ಅಣ್ಣನ ಜೊತೆ ಇದ್ದ ಕೊನೆಯ ಫೋಟೋ ಹಂಚಿಕೊಂಡ ಧ್ರುವ

  ಅಣ್ಣನ ಜೊತೆ ಇದ್ದ ಕೊನೆಯ ಫೋಟೋ ಹಂಚಿಕೊಂಡ ಧ್ರುವ

  ಚಿರಂಜೀವಿ ಸರ್ಜಾ ನಿಧನ ಹೊಂದುವ ಹಿಂದಿನ ದಿನ ಕ್ಲಿಕ್ಕಿಸಿದ ಫೋಟೋವನ್ನು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿರು ಜೂನ್ 7 ಮಧ್ಯಾಹ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಿಂದಿನ ದಿನ ಅಂದರೆ ಜೂನ್ 6ರಂದು ಧ್ರುವ ಮತ್ತು ಚಿರು ಕ್ಲಿಕ್ಕಿಸಿಕೊಂಡ ಫೋಟೋ ಇದಾಗಿದೆ. ಇದೆ ಕೊನೆಯ ಫೋಟೋ. ಈ ಫೋಟೋವನ್ನು ಧ್ರುವ ಶೇರ್ ಮಾಡಿ ದಿನಾಂಕವನ್ನು ಹಾಕಿದ್ದಾರೆ.

  ನನ್ನ ಅಣ್ಣ, ನನ್ನ ಪ್ರಪಂಚ

  ನನ್ನ ಅಣ್ಣ, ನನ್ನ ಪ್ರಪಂಚ

  ಕೊನೊಯ ಬಾರಿ ಕ್ಲಿಕ್ಕಿಸಿಕೊಂಡ ಫೋಟೋ ಹಂಚಿಕೊಳ್ಳುವ ಜೊತೆಗೆ ಅಣ್ಣನ ಜೊತೆ ಕಳೆದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರು ಒಟ್ಟಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋಗೆ ಹಾಕಿ ನನ್ನ ಅಣ್ಣ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಧ್ರುವ ಸರ್ಜಾ ಮದುವೆಯ ಮೆಹಂದಿ ಶಾಸ್ತ್ರದ ಫೋಟೋ ಹಾಕಿ ನನ್ನ ಪ್ರಪಂಚ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಜೊತೆಗೆ ಇಡೀ ಕುಟುಂಬದ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

  ಚಿರು ಸರ್ಜಾ ಮೇಲೆ ಬಂಡವಾಳ ಹೂಡಿದವರ ನೆರವಿಗೆ ಧ್ರುವ ಸರ್ಜಾ?ಚಿರು ಸರ್ಜಾ ಮೇಲೆ ಬಂಡವಾಳ ಹೂಡಿದವರ ನೆರವಿಗೆ ಧ್ರುವ ಸರ್ಜಾ?

  ನೀನು ನನಗೆ ವಾಪಸ್ ಬೇಕು

  ನೀನು ನನಗೆ ವಾಪಸ್ ಬೇಕು

  ಅಣ್ಣನ ಅಗಲಿಕೆಯ ನಂತರ ಮೊದಲ ಬಾರಿಗೆ ಧ್ರುವ ಸರ್ಜಾ ಇನ್‌ಸ್ಟಾಗ್ರಾಂ ಸ್ಟೋರೀಸ್ ‌ನಲ್ಲಿ ಅಣ್ಣ ಮತ್ತೆ ಬಾ ಎಂದು ಬರೆದುಕೊಂಡಿದ್ದರು. ಐದು ದಿನದ ಬಳಿಕ ಅವರು ಸಾಮಾಜಿಕ ಜಾಲತಾಣದಲ್ಲಿ ಮೊದಲ ಪೋಸ್ಟ್ ಹಾಕಿದ್ದರು. 'ನೀನು ನನಗೆ ವಾಪಸ್ ಬೇಕು. ನೀನಿಲ್ಲದೆ ನನಗೆ ಇರಲು ಸಾಧ್ಯವೇ ಆಗುತ್ತಿಲ್ಲ' ಎಂದು ಧ್ರುವ ಬರೆದುಕೊಂಡಿದ್ದರು. ಇಂದು ಅಣ್ಣನ ಜೊತೆ ಇರುವ ಮತ್ತೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಚಿರು ಸರ್ಜಾ ಕೊನೆಯ ಪೋಸ್ಟ್

  ಚಿರು ಸರ್ಜಾ ಕೊನೆಯ ಪೋಸ್ಟ್

  ಚಿರಂಜೀವಿ ಸರ್ಜಾ ಕೊನೆಯ ಬಾರಿಗೆ ಇನ್ಸ್ಟಾಗ್ರಾಮ್ ನಲ್ಲಿ ಸಹೋದರ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. "ಆಗ ಮತ್ತು ಈಗ ನಾವು ಈಗಲೂ ಹೀಗೆ ಇದ್ದೇವೆ. ನೀವೇನು ಹೇಳುತ್ತೀರಿ?" ಎಂದು ಚಿರು ಅಭಿಮಾನಿಗಳ ಜೊತೆ ಫೋಟೋ ಹಂಚಿಕೊಂಡಿದ್ದರು. ಚಿರು ನಿಧನಹೊಂದಿರುವ ಹಿಂದಿನ ದಿನವಷ್ಟೆ ಹಂಚಿಕೊಂಡಿದ್ದ ಫೋಟೋ ವೈರಲ್ ಆಗಿತ್ತು.

  English summary
  Actor Dhruva Sarja has Shared the last photo with his brother Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X