For Quick Alerts
  ALLOW NOTIFICATIONS  
  For Daily Alerts

  ಸಿದ್ದರಾಮಯ್ಯರನ್ನು ಭೇಟಿಯಾದ ನಟ ಧ್ರುವ ಸರ್ಜಾ, ಪ್ರಥಮ್

  |

  ನಟ ಧ್ರುವ ಸರ್ಜಾ ಅವರು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ಸಮಯದಲ್ಲಿ ಬಿಗ್‌ಬಾಸ್ ಖ್ಯಾತಿಯ ಪ್ರಥಮ್, ನಿರ್ದೇಶಕ ನಂದ ಕಿಶೋರ್ ಜೊತೆಗಿದ್ದರು.

  ಸಿದ್ದರಾಮಯ್ಯ ಅವರನ್ನು 'ಪೊಗರು' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಆಹ್ವಾನಿಸಿದ್ದಾರೆ. ಈ ಸಮಯ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಸಹ ಜೊತೆಯಿದ್ದರು.

  ದಾವಣಗೆರೆಯಲ್ಲಿ ಫೆಬ್ರವರಿ 14 ರಂದು 'ಪೊಗರು' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಬಹು ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ರಾಜಕಾರಣಿಗಳು ಸಹ ಜೊತೆಯಾಗಲಿದ್ದಾರೆ.

  ಸಿದ್ದರಾಮಯ್ಯ ಅವರು ಹಲವು ಬಾರಿ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕೆಲವು ತಿಂಗಳ ಹಿಂದೆ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಸಿನಿಮಾರಂಗದೊಂದಿಗೆ ಸಿದ್ದರಾಮಯ್ಯ ಅವರದ್ದು ಹಳೆಯ ನಂಟು.

  ಪೊಗರು ಸಿನಿಮಾ ಫೆಬ್ರವರಿ 19 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಅದಕ್ಕೆ ಮುನ್ನಾ ಅದ್ಧೂರಿಯಾಗಿ ಪ್ರಚಾರ ಕಾರ್ಯಕ್ರಮ ಮಾಡುವ ಸಲುವಾಗಿ ಆಡಿಯೋ ಕಾರ್ಯಕ್ರಮ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ.

  Sudeep ಜೊತೆ ಭಾರತದಲ್ಲಿ ಯಾರು ಮಾಡದ ಸಿನಿಮಾ ಮಾಡ್ತೀನಿ ಅಂದ್ರು ಪ್ರೇಮ್..!? | Filmibeat Kannada

  ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ನಿರ್ದೇಶನವನ್ನು ನಂದ ಕಿಶೋರ್ ಮಾಡಿದ್ದು, ಕೆಲವು ವಿದೇಶಿ ನಟರು ಸಹ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  English summary
  Actor Dhruva Sarja invite Siddaramaiah to pogaru audio release function which is on February 14 in Davangere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X