For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಮತ್ತು ದುನಿಯ ವಿಜಿ ಕೈ ಸೇರಿದ ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಸಂಭ್ರಮದಲ್ಲಿ ಇದ್ದಾರೆ. ಇದೇ ತಿಂಗಳು 24ರಂದು ಧ್ರುವ ಬಹುಕಾಲದ ಗೆಳತಿ ಪ್ರೇರಣ ಶಂಕರ್ ಜೊತೆ ಹಸೆಮಣೆ ಏರಲಿದ್ದಾರೆ. ಧ್ರುವ ಸರ್ಜಾ ಸದ್ಯ ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

  ಈಗಾಗಲೆ ಧ್ರುವ ಸಾಕಷ್ಟು ಗಣ್ಯರಿಗೆ ಆಮಂತ್ರಣ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ನೀನಾಸಂ ಸತೀಶ್, ಧನಂಜಯ್, ಪ್ರಜ್ವಲ್, ನಟಿ ಸುಧಾರಾಣಿ, ಅರುಂಧತಿ ರಾವ್ ಸಹೋದರಿಯರು ಸೇರಿದಂತೆ ಅನೇಕರಿಗೆ ಮದುವೆಗೆ ಆಹ್ವಾನ ಮಾಡಿದ್ದಾರೆ. ನಿನ್ನೆ ಧ್ರುವ ರಿಯಲ್ ಸ್ಟಾರ್ ಉಪೇಂದ್ರ, ಭಾರತಿ ವಿಷ್ಣುವರ್ಧನ್, ದುನಿಯ ವಿಜಯ್, ಭರ್ಜರಿ ಚೇತನ್ ಸೇರಿದಂತೆ ಅನೇಕರಿಗೆ ಮದುವೆ ಮಮತೆಯ ಕರೆಯೋಲೆ ನೀಡಿದ್ದಾರೆ.

  ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆಯ ವಿಶೇಷತೆ ಏನು ಗೊತ್ತಾ?ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆಯ ವಿಶೇಷತೆ ಏನು ಗೊತ್ತಾ?

  ವಿಜಿ ಮನೆಯಲ್ಲಿ ಧ್ರುವ ಸರ್ಜಾ

  ವಿಜಿ ಮನೆಯಲ್ಲಿ ಧ್ರುವ ಸರ್ಜಾ

  ನಟ ಧ್ರುವ ಸರ್ಜಾ ಮದುವೆ ತಯಾರಿಯ ನಡುವೆಯು ಚಿತ್ರರಂಗದ ಗಣ್ಯರ ಮನೆಗೆ ಭೇಟಿ ನೀಡಿ ಮದುವೆ ಆಮಂತ್ರಣ ನೀಡುತ್ತಿದ್ದಾರೆ. ಇಂದು ಧ್ರುವ ದುನಿಯಾ ವಿಜಯ್ ಮನೆಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಧ್ರುವ ಪ್ರೀತಿಯಿಂದ ಮದುವೆಗೆ ಆಹ್ವಾನ ಮಾಡುತ್ತಿರುವ ಫೋಟೋವನ್ನು ವಿಜಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮುಂಗಡವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

  ರಿಯಲ್ ಸ್ಟಾರ್ ಕೈ ತಲುಪಿದ ಆಮಂತ್ರಣ

  ರಿಯಲ್ ಸ್ಟಾರ್ ಕೈ ತಲುಪಿದ ಆಮಂತ್ರಣ

  ಧ್ರುವ ಸರ್ಜಾ ಇಂದು ರಿಯಲ್ ಸ್ಟಾರ್ ಉಪೇಂದ್ರ ಮನೆಗೂ ಭೇಟಿ ನೀಡಿದ್ದಾರೆ. ಮದುವೆ ಬರುವಂತೆ ರಿಯಲ್ ಸ್ಟಾರ್ ಕುಟುಂಬದವರಿಗೂ ಆಹ್ವಾನ ನೀಡಿದ್ದಾರೆ ಧ್ರುವ. ಆಕ್ಷನ್ ಪ್ರಿನ್ಸ್ ರಿಯಲ್ ಸ್ಟಾರ್ ಗೆ ಮದುವೆಯ ಕರೆಯೋಲೆ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಗಣೇಶ್ ಗೆ ತಲುಪಿದ ಧ್ರುವ ಸರ್ಜಾ ಮದುವೆ ಕರೆಯೋಲೆಗಣೇಶ್ ಗೆ ತಲುಪಿದ ಧ್ರುವ ಸರ್ಜಾ ಮದುವೆ ಕರೆಯೋಲೆ

  ಭರ್ಜರಿ ಚೇತನ್ ಗೆ ಧ್ರುವ ಮದುವೆ ಆಮಂತ್ರಣ

  ಭರ್ಜರಿ ಚೇತನ್ ಗೆ ಧ್ರುವ ಮದುವೆ ಆಮಂತ್ರಣ

  ಧ್ರುವ ಸರ್ಜಾ ಮತ್ತು ನಿರ್ದೇಶಕ ಚೇತನ್ ಕಾಂಬಿನೇಶನ್ ನಲ್ಲಿ ಎರಡು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಭರ್ಜರಿ ಮೂಲಕ ಸದ್ದು ಮಾಡಿದ್ದ ನಿರ್ದೇಶಕ ಚೇತನ್ ಕುಮಾರ್ ಗೆ ಧ್ರುವ ಸರ್ಜಾ ಮದುವೆ ಆಮಂತ್ರಣ ನೀಡಿದ್ದಾರೆ. ಚೇತನ್ ಮನೆಗೆ ಭೇಟಿ ನೀಡಿ ಮದುವೆಯ ಕರೆಯೋಲೆ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಶಂಕರ್ ನಾಗ್ ಪತ್ನಿಗೆ ಧ್ರುವ ಸರ್ಜಾ ಮದುವೆಯ ಮಮತೆಯ ಕರೆಯೋಲೆಶಂಕರ್ ನಾಗ್ ಪತ್ನಿಗೆ ಧ್ರುವ ಸರ್ಜಾ ಮದುವೆಯ ಮಮತೆಯ ಕರೆಯೋಲೆ

  ಭಾರತಿ ವಿಷ್ಣುವರ್ಧನ್ ಗೆ ಆಮಂತ್ರಣ

  ಭಾರತಿ ವಿಷ್ಣುವರ್ಧನ್ ಗೆ ಆಮಂತ್ರಣ

  ಧ್ರುವ ಸರ್ಜಾ ಮದುವೆಯ ಆಮಂತ್ರಣ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಗೆ ಮದುವೆ ಆಹ್ವಾನ ನೀಡಿದ್ದಾರೆ. ಭಾರತಿ ವಿಷ್ಣುವರ್ಧನ್ ನಿವಾಸಕ್ಕೆ ಭೇಟಿ ನೀಡಿ ಧ್ರುವ ಮದುವೆ ಮಮತೆಯ ಕರೆಯೋಲೆ ನೀಡಿದ್ದಾರೆ. ಜೊತೆಗೆ ನಿರ್ದೇಶಕ ನಂದಕಿಶೋನ್ ಮನೆಗೂ ಭೇಟಿ ನೀಡಿ ಮದುವೆ ಆಮಂತ್ರಣ ನೀಡಿದ್ದಾರೆ.

  English summary
  Kannada actor Dhruva Sarja invited Upendra, Bharjari Chethan and other actress for his wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X