'ಧ್ರುವ ಸರ್ಜಾ ಮುಂದಿನ ದರ್ಶನ್' ಅಂದಿದ್ದಕ್ಕೆ ಆಕ್ಷನ್ ಪ್ರಿನ್ಸ್ ಹೇಳಿದ್ದೇನು.?
Recommended Video

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸತತ ಮೂರು ಹಿಟ್ ಸಿನಿಮಾ ನೀಡುವ ಮೂಲಕ ಸ್ಯಾಂಡಲ್ ವುಡ್ ನೂತನ 'ಸ್ಟಾರ್' ಎನಿಸಿಕೊಂಡಿದ್ದಾರೆ. ದರ್ಶನ್, ಸುದೀಪ್, ಯಶ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಅವರಂತೆ ದೊಡ್ಡ ಸಿನಿಮಾಗಳನ್ನ ಮತ್ತು ದೊಡ್ಡ ಅಭಿಮಾನಿ ಬಳಗವನ್ನ ಸಂಪಾದನೆ ಮಾಡುವತ್ತಾ ಹೆಜ್ಜೆ ಇಟ್ಟಿದ್ದಾರೆ.
ಈ ನಡವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಧ್ರುವ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿ ಕುತೂಹಲ ಮೂಡಿಸುತ್ತಿದೆ. ದರ್ಶನ್ ಅವರ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ಧ್ರುವ ಸರ್ಜಾ ಮುಂದಿನ ದರ್ಶನ್ ಎಂದು ಬಿಂಬಿತವಾಗ್ತಿದ್ದೀರಾ ಎಂಬ ಪ್ರಶ್ನೆ ಕಾಡುತ್ತಿದೆ.
ಇದಕ್ಕೆ ಹಲವು ಕಾರಣಗಳು ಕೂಡ ಇವೆ. ಈ ಬಗ್ಗೆ ಸ್ವತಃ ಧ್ರುವ ಸರ್ಜಾ ಅವರನ್ನ ಪ್ರಶ್ನಿಸಿದ್ದಕ್ಕೆ ಜಾಣ್ಮೆಯ ಉತ್ತರ ನೀಡಿದ್ದಾರೆ. ಅಷ್ಟಕ್ಕೂ, ಧ್ರುವ ಸರ್ಜಾ ಏನಂದ್ರು.? ನಿಜಕ್ಕೂ ಮುಂದಿನ ದರ್ಶನ್ ಎಂಬಂತೆ ನಡೆದುಕೊಳ್ಳುತ್ತಿದ್ದಾರಾ.? ಮುಂದೆ ಓದಿ..

ಡಿ-ಬಾಸ್ ಹಾದಿಯಲ್ಲಿ ಡಿ-ಹುಡುಗ
ಡಿ-ಬಾಸ್ ಅಂದ್ರೆ ಇಂಡಸ್ಟ್ರಿಯಲ್ಲಿ ನೆನಪಾಗುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗ ಧ್ರುವ ಸರ್ಜಾ ಅಭಿಮಾನಿಗಳು ಕೂಡ ಧ್ರುವ ಅವರನ್ನ ಡಿ-ಬಾಸ್ ಎಂದು ಕರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಹುಟ್ಟುಹಬ್ಬದ ವೇಳೆ ಕೇಕ್ ಮೇಲೆ 'ಡಿ-ಬಾಸ್' ಎಂದು ಬರೆಸಿದ್ದು ಗಮನ ಸೆಳೆಯಿತು.

ನೀವು ಮುಂದಿನ ದರ್ಶನ್ ಅಂತೆ ಹೌದಾ.?
ನೀವು ಮುಂದಿನ ದರ್ಶನ್ ಅಂತೆ ಹೌದಾ.? ಎಂದು ಮಾಧ್ಯಮದವರು ಕೇಳಿದ್ದಕ್ಕೆ ಧ್ರುವ ಕೊಟ್ಟ ಉತ್ತರ ನೋಡಿ. ''ದರ್ಶನ್ ಸರ್ ಓರ್ವ ಹಿರಿಯ ಕಲಾವಿದರು. ಅವರ ಜೊತೆ ಹೋಲಿಕೆ ಸರಿಯಲ್ಲ. ಅವರ ಅಭಿಮಾನಿಗಳಲ್ಲಿ ನಾನೂ ಒಬ್ಬ'' ಎಂದು ಜಾಣ್ಮೆಯ ಉತ್ತರ ನೀಡಿ ಅಭಿಮಾನಿಗಳ ಮನಗೆದ್ದಿದ್ದಾರೆ.

'ಬಾಸ್' ಬಗ್ಗೆ ನಿಮ್ಮ ಅಭಿಪ್ರಾಯ
ಕೇಕ್ ಗಳ ಮೇಲೆ ಹಲವರು ಡಿ-ಬಾಸ್ ಎಂದು ಬರೆಸಿದ್ದಾರೆ. ಡಿ-ಬಾಸ್ ಅಂದ್ರೆ ದರ್ಶನ್ ಅವರು ಎಂಬುದು ಗೊತ್ತಿದೆ ಎಂದು ಕೇಳಿದಕ್ಕೆ, ''ನನಗೆ ಬಾಸ್ ಅಂದ್ರೆ ಆಂಜನೇಯ. ಇದೆಲ್ಲ ನನಗೆ ಇಷ್ಟ ಇಲ್ಲ, ನಾನು ಇನ್ನು ಸಾಧನೆ ಮಾಡಬೇಕಿರುವುದು ಹೆಚ್ಚಿದೆ'' ಎಂದು ಉತ್ತರಿಸಿದ್ದಾರೆ.

ಧ್ರುವ ಜೊತೆ ದರ್ಶನ್ ಇದ್ದಾರೆ
ಇನ್ನು ಧ್ರುವ ಸರ್ಜಾ ಅವರ ಜೊತೆ ದರ್ಶನ್ ಬೆಂಬಲವಾಗಿದ್ದಾರೆ ಎನ್ನುವುದು ವಾಸ್ತವ. ಹಲವು ವಿಷ್ಯಗಳಲ್ಲಿ ಧ್ರುವ ಸಿನಿಮಾಗಳಿಗೆ ದರ್ಶನ್ ಪ್ರೋತ್ಸಾಹ ನೀಡಿದ್ದಾರೆ. ಧ್ರುವ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಧ್ರುವ ಕೂಡ ದರ್ಶನ್ ಆಪ್ತವಲಯದಲ್ಲಿ ಹೆಚ್ಚು ಕಾಣಿಸಿಕೊಳ್ತಾರೆ.

'ಯಜಮಾನ'ನಿಗೆ ಧ್ವನಿ ನೀಡಿದ್ದ ಧ್ರುವ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 'ಯಜಮಾನ' ಚಿತ್ರದ ಟೈಟಲ್ ಟೀಸರ್ ಗೆ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದರು. ದರ್ಶನ್ ಅಂತಹ ದೊಡ್ಡ ಸ್ಟಾರ್ ನಟನ ಚಿತ್ರಕ್ಕೆ ಧ್ರುವ ಸರ್ಜಾ ಅಂತಹ ಯುವ ನಟ ಧ್ವನಿ ನೀಡಿದ್ದರ ಬಗ್ಗೆ ಸಣ್ಣದೊಂದು ಕುತೂಹಲವಿತ್ತು. ಬಹುಶಃ ಇದಲ್ಲವೂ ಅದಕ್ಕೆ ಕಾರಣವಾಗಬಹುದು.


Click it and Unblock the Notifications











