ಅಂತೂ ಬದಲಾದ್ರು ಧ್ರುವ ಸರ್ಜಾ; ಇನ್ಮುಂದೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ!

ಸ್ಟಾರ್ ನಟರ ಸಿನಿಮಾಗಳು ತಡವಾಗುತ್ತಿದೆ ಎನ್ನುವ ಆರೋಪ ಬಹಳ ದಿನಗಳಿಂದ ಕೇಳಿಬರುತ್ತಿದೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಮುಂದಿಡುತ್ತಿದ್ದಾರೆ. ಇನ್ನು ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ಪ್ರೀ ಪ್ರೊಡಕ್ಷನ್, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್‌ಗೆ ಬಹಳ ಸಮಯ ಹಿಡಿಯುತ್ತಿದೆ.

ನಟ ಧ್ರುವ ಸರ್ಜಾ ಮೊದಲಿನಿಂದಲೂ ಸಿನಿಮಾಗಳನ್ನು ಮಾಡುವುದನ್ನು ತಡ ಮಾಡುತ್ತಿದ್ದಾರೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಈ ರೀತಿ ಆಗಿದ್ದು ಇದೆ. ಆದರೂ ಆಕ್ಷನ್ ಪ್ರಿನ್ಸ್ ಸಿನಿಮಾ ಮಾಡೋ ಸ್ಪೀಡ್ ಕಮ್ಮಿ ಎನ್ನುವುದು ಅವರ ಫಿಲ್ಮೋಗ್ರಫಿ ನೋಡಿದರೆ ಅರ್ಥವಾಗುತ್ತದೆ. ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು ಎಂದು ನಿರ್ಮಾಪಕರು, ಥಿಯೇಟರ್ ಮಾಲೀಕರು ಕೇಳುತ್ತಲೇ ಇದ್ದಾರೆ.

Dhruva sarja Keeping Himself Busy With Back-to-back Projects

2012ರಲ್ಲಿ 'ಅದ್ಧೂರಿ' ಸಿನಿಮಾ ಮೂಲಕ ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದರು. ಕಳೆದ ಈ 11 ವರ್ಷದಲ್ಲಿ ಧ್ರುವ ನಟಿಸಿದ 4 ಸಿನಿಮಾಗಳು ಮಾತ್ರ ಬಿಡುಗಡೆ ಆಗಿದೆ. ನಡುವೆ ಕೋರೊನಾ ಹಾವಳಿಯಿಂದ 'ಪೊಗರು' ಸಿನಿಮಾ ತಡವಾಯಿತು. ಇದೀಗ 'ಮಾರ್ಟಿನ್' ಆಗಿ ಅಬ್ಬರಿಸಲು ಧ್ರುವ ಸಜ್ಜಾಗಿದ್ದಾರೆ. ಅಕ್ಟೋಬರ್ 11ಕ್ಕೆ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರಲಿದೆ.

ಈಗಾಗಲೇ 'ಮಾರ್ಟಿನ್' ಟ್ರೈಲರ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಶೀಘ್ರದಲ್ಲೇ ಟ್ರೈಲರ್‌ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಲಿದೆ. ಸದ್ಯ ಟ್ರೈಲರ್ ನೋಡಿದವರು ಮೆಚ್ಚಿಕೊಂಡಿದ್ದಾರೆ. ಇನ್ನು ಧ್ರುವ ಸರ್ಜಾ ಕೂಡ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಸಾಕಷ್ಟು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

'ಮಾರ್ಟಿನ್' ಬಗ್ಗೆ ಎಷ್ಟು ಭರವಸೆಯಿಂದ ಇದ್ದಾರೆ ಎನ್ನುವುದನ್ನು ಹೇಳುತ್ತಿದ್ದಾರೆ. ಸಿನಿಮಾ ಯಾಕೆ ತಡವಾಯಿತು ಎನ್ನುವ ಬಗ್ಗೆಯೂ ಮಾತನಾಡಿದ್ದಾರೆ. ಇದು ಯೂನಿವರ್ಸಲ್ ಸಬ್ಜೆಕ್ಟ್. ಅದಕ್ಕೆ ತಕ್ಕಂತೆ ಮೇಕಿಂಗ್, ಪೋಸ್ಟ್ ಪ್ರೊಡಕ್ಷನ್ ತಡವಾಯಿತು ಎಂದಿದ್ದಾರೆ. ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

Dhruva sarja Keeping Himself Busy With Back-to-back Projects

'ಮಾರ್ಟಿನ್' ತೆರೆಕಂಡ ಎರಡು ತಿಂಗಳ ಅಂತದಲ್ಲಿ 'ಕೆಡಿ' ಸಿನಿಮಾ ತೆರೆಗೆ ಬರಲಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ ಕೂಡ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಡಿಸೆಂಬರ್‌ನಲ್ಲಿ ಕಾಳೀದಾಸನ ಆರ್ಭಟ ಫಿಕ್ಸ್ ಆಗಿದೆ. ಅಚ್ಚರಿ ಸಂಗತಿ ಅಂದರೆ ಮುಂದಿನ ವರ್ಷವೇ 'ಕೆಡಿ'-2 ಕೂಡ ತೆರೆಗಪ್ಪಳಿಸಿದೆ. ಸ್ವತಃ ಧ್ರುವ ಸರ್ಜಾ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಕೆಡಿ' ಸರಣಿ ಸಿನಿಮಾ ಅದ್ಧೂರಿಯಾಗಿ ಮೂಡ ಬರ್ತಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಹಿಂದೆ ಟೀಸರ್ ರಿಲೀಸ್ ಮಾಡಿ ಪ್ರೇಮ್ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ್ದರು.

ಹೆಚ್ಚು ಕಮ್ಮಿ ಒಂದು ವರ್ಷದ ಅಂತರದಲ್ಲಿ 'ಮಾರ್ಟಿನ್', 'ಕೆಡಿ-1' ಹಾಗೂ 'ಕೆಡಿ-2' ಸಿನಿಮಾಗಳು ಬಿಡುಗಡೆ ಆಗಲಿದೆ. ಧ್ರುವ ಸರ್ಜಾ ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಎನ್ನುವ ಆರೋಪವನ್ನು ಮರೆಸಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಕನ್ನಡದಲ್ಲಿ ಸ್ಟಾರ್ ನಟರ ಸಂಖ್ಯೆ ಕಮ್ಮಿ ಇದೆ. ಹಾಗಾಗಿ ದೊಡ್ಡ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಧ್ರುವ ಸರ್ಜಾ ಕೂಡ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡಿದರೆ ಚಿತ್ರರಂಗಕ್ಕೆ ಅದು ಸಹಕಾರಿ ಆಗಲಿದೆ.

ಈಗಾಗಲೇ 'ಮಾರ್ಟಿನ್' ಜೊತೆ ಜೊತೆಗೆ 'ಕೆಡಿ-1' ಸಿನಿಮಾ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ಮುಂದಿನ ವರ್ಷವೇ ಸೀಕ್ವೆಲ್ ಬರಲಿದೆ. ಹಾಗಾಗಿ ಇನ್ನೊಂದು ವರ್ಷದಲ್ಲಿ ಮತ್ತೊಂದು ಹೊಸ ಸಿನಿಮಾವನ್ನು ಧ್ರುವ ಮುಗಿಸಬಹುದು. ಆ ಲೆಕ್ಕದಲ್ಲಿ 2026ಕ್ಕೆ ಧ್ರುವ ನಟನೆಯ ಮತ್ತೊಂದು ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Martin Actor Dhruva Sarja decided to give 2 films for year;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X