ಅಣ್ಣ 'ಸಂಹಾರ' ಮಾಡಿದ್ದನ್ನ ನೋಡಿ ಧ್ರುವ ಸರ್ಜಾ ಮಾಡಿದ ಕಾಮೆಂಟ್ ಏನು.?
ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯ ಶೆಟ್ಟಿ ಅಭಿನಯದ 'ಸಂಹಾರ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲೆಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ 'ಸಂಹಾರ' ಸಿನಿಮಾ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ.
ರೀಮೇಕ್ ಸಿನಿಮಾ ಆದರೂ, ಕನ್ನಡದ ನೇಟಿವಿಟಿಗೆ ತಕ್ಕಂತೆ ನಿರ್ದೇಶಕ ಗುರು ದೇಶಪಾಂಡೆ ಚಿತ್ರಕಥೆ ಹೆಣೆದಿರುವ ರೀತಿಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದಾರೆ. 'ಸಂಹಾರ' ಚಿತ್ರಕ್ಕೆ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಎಲ್ಲ ಕಡೆಯಿಂದಲೂ 'ಸಂಹಾರ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿರುವ ಕಾರಣ ನಿನ್ನೆ 'ಸಂಹಾರ' ಚಿತ್ರವನ್ನ ನೋಡಲು ಧ್ರುವ ಸರ್ಜಾ ಮನಸ್ಸು ಮಾಡಿದರು. ಬೆಂಗಳೂರಿನ ತ್ರಿವೇಣಿ ಥಿಯೇಟರ್ ನಲ್ಲಿ ಪ್ರೇಕ್ಷಕರ ಮಧ್ಯೆ ಕುಳಿತು 'ಸಂಹಾರ' ಚಿತ್ರವನ್ನ ನಿನ್ನೆ ಧ್ರುವ ಸರ್ಜಾ ವೀಕ್ಷಿಸಿದರು.

'ಸಂಹಾರ' ನೋಡಿದ ಬಳಿಕ ಟ್ವಿಟ್ಟರ್ ನಲ್ಲಿ ಧ್ರುವ ಸರ್ಜಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ - ''ಸಂಹಾರ' ನಿಜಕ್ಕೂ ಒಂದು ಒಳ್ಳೆಯ ಅನುಭವ ನೀಡ್ತು. ಎಲ್ಲರೂ ಒಮ್ಮೆ ನೋಡಲೇಬೇಕಾದ ಸಿನಿಮಾ 'ಸಂಹಾರ'. ಅಣ್ಣ ಚಿರಂಜೀವಿ ಸರ್ಜಾ ಹಾಗೂ ಹರಿಪ್ರಿಯಾ ಪರ್ಫಾಮೆನ್ಸ್ ನೋಡಿ ನಾನು ನಿಬ್ಬೆರಗಾದೆ. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು''
ಅಂದ್ಹಾಗೆ, ನೀವು 'ಸಂಹಾರ' ಸಿನಿಮಾ ನೋಡಿದ್ರಾ.? ನೋಡಿದ್ರೆ, ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...


Click it and Unblock the Notifications











