'ಮಾರ್ಟಿನ್' ಆ್ಯಕ್ಷನ್‌ಗೆ ಧ್ರುವ ಸರ್ಜಾ ಫುಲ್ ರೆಡಿ!

ನಿರ್ದೇಶಕ ಎ.ಪಿ.ಅರ್ಜುನ್ ಹಾಗೂ ಧ್ರುವ ಸರ್ಜಾ ಜೋಡಿ ಈಗಾಗಲೇ 'ಅದ್ಧೂರಿ' ಸಿನಿಮಾ ಗೆದ್ದಿದೆ. ಈಗ ಮತ್ತೆ 'ಮಾರ್ಟಿನ್' ಸಿನಿಮಾ ಮೂಲಕ ಈ ಜೋಡಿ ಒಂದಾಗಿದೆ. ಈಗಾಗಲೇ ಸಿನಿಮಾದಲ್ಲಿನ ಧ್ರುವ ಸರ್ಜಾ ಲುಕ್ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟು ಹಾಕಿದೆ.

ಧ್ರುವ ಸರ್ಜಾ ಮೊದಲ ಸಿನಿಮಾ ಅದ್ಧೂರಿಯನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದರು. ಆ ಸಿನಿಮಾದಿಂದಲೇ ಧ್ರುವ ಸರ್ಜಾ ಸ್ಯಾಂಡಲ್​ವುಡ್​ನಲ್ಲಿ ಆ್ಯಕ್ಷನ್ ಪ್ರಿನ್ಸ್ ಆಗಿ ಮೆರೆಯುತ್ತಿದ್ದಾರೆ. ಈಗ ಮತ್ತೇ ಜಾದು ಮಾಡಲು ಈ ಜೋಡಿ ಬರ್ತಿದೆ.

ಇಷ್ಟು ದಿನ 'ಮಾರ್ಟಿನ್' ಸಿನಿಮಾದ ಬಗ್ಗೆ ಯಾವುದೇ ಅಪ್ಡೇಟ್ ಬಂದಿರಲಿಲ್ಲ. ಧ್ರುವ ಅಭಿಮಾನಿಗಳು 'ಮಾರ್ಟಿನ್' ಅಪ್ಡೇಟ್‌ಗಾಗಿ ಕಾಯ್ತಿದ್ದಾರೆ. ಸದ್ಯ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದೆ. ಇನ್ನೂ ಆ್ಯಕ್ಷನ್ ದೃಶ್ಯಗಳು ಮಾತ್ರವೇ ಬಾಕಿ ಇದೆ. ಇದಕ್ಕಾಗಿ ಧೃವ ಕಸರತ್ತು ಮಾಡುತ್ತಿದ್ದಾರೆ.

Dhruva Sarja Martin Movie Action Scenes Starts Soon he is Getting Ready for it.

ಸದ್ಯ 'ಮಾರ್ಟಿನ್' ಬಹುತೇಕ ಶೂಟಿಂಗ್ ಮುಗಿದಿದ್ದು, ಆಕ್ಷನ್​ ಸೀನ್​ಗಳು ಮಾತ್ರ ಬಾಕಿ ಇದೆ. ಸ್ಟಂಟ್ ಮಾಸ್ಟರ್ ರವಿ ವರ್ಮಾ ಈ ಆಕ್ಷನ್​ ಸೀನ್​ಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಸ್ಟಂಟ್ ಮಾಸ್ಟರ್ಸ್‌ ರಾಮ ಲಕ್ಷ್ಮಣ ಕೂಡ ಚಿತ್ರತಂಡಕ್ಕೆ ಸಾಥ್​ ಕೊಡುತ್ತಿದ್ದಾರೆ.

ಆ್ಯಕ್ಷನ್ ಸೀಕ್ವೆಸ್‌ಗಾಗಿ ನಟ ಧ್ರುವ ಸರ್ಜಾ ಭರ್ಜರಿ ತಯಾರಿ ನಡೆಸಿದ್ದಾರೆ. ಸದ್ಯದಲ್ಲಿಯೇ ಸಿನಿಮಾದ ಆ್ಯಕ್ಷನ್ ಚಿತ್ರೀಕರಣ ಶುರುವಾಗಲಿದೆ. ಇನ್ನು ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ಮಸ್ತ್ ಆ್ಯಕ್ಷನ್ ಉಣಬಡಿಸುವಲ್ಲಿ ನೋ ಡೌಟ್. ಇನ್ನು ನಿರ್ದೇಶಕ ಅರ್ಜುನ್‌ಗೂ ಕೂಡ ಇದು ಹೊಸ ರೀತಿಯ ಸಿನಿಮಾ ಆಗಿರಲಿದೆ.

ಸಿನಿಮಾದ ನಾಯಕಿಯಾಗಿ ವೈಭವಿ ನಟಿಸುತ್ತಿದ್ದು, ಬಾಲಿವುಡ್ ನಟ ನಿಕಿತ್, ಅನ್‌ವೇಷಿ ಜೈನ್ ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Dhruva Sarja Martin Movie Action Scenes Starts Soon he is Getting Ready for it.

ಇನ್ನು ಈ ಸಿನಿಮಾದ ನಂತರ ಧ್ರುವ ಸರ್ಜಾ ಮುಂದಿನ ಸಿನಿಮಾ ನಿರ್ದೇಶಕ ಜೋಗಿ ಪ್ರೇಮ್ ​ ಜೊತೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ಸಿನಿಮಾದಲ್ಲಿ ಭೂಗತಲೋಕದ ದೊರೆ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಶೀಘ್ರದಲ್ಲಿಯೇ ಆರಂಭ ಆಗಲಿದೆ. ಅದಕ್ಕೆ ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ.

More from Filmibeat

English summary
Dhruva Sarja Martin Movie Action Scenes Starts Soon he is Getting Ready for it, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X