Exclusive: ಅಬ್ಬಾ, ಕೊನೆಗೂ ಚುನಾವಣೆ ಮುಗೀತು.. ಎಲ್ಲಿಗೆ ಬಂತು 'ಮಾರ್ಟಿನ್' ಕಥೆ..? ರಿಲೀಸ್ ಯಾವಾಗ?

ಕರ್ನಾಟಕದಲ್ಲಿ ಚುನಾವಣೆ ಹಾಗೂ ಐಪಿಎಲ್‌ ಭರಾಟೆಯಿಂದ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಆಗ್ತಿಲ್ಲ. ಸದ್ಯ ವಿಧಾನಸಭೆ ಚುನಾವಣೆ ಮುಗಿದಿದ್ದು ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸದ್ಯ ರಿಲೀಸ್‌ಗೆ ರೆಡಿ ಆಗುತ್ತಿರುವ ದೊಡ್ಡ ಸಿನಿಮಾಗಳಲ್ಲಿ ಧ್ರುವ ನಟನೆಯ 'ಮಾರ್ಟಿನ್' ಮೊದಲ ಸಾಲಿನಲ್ಲಿದೆ.

ಫೆಬ್ರವರಿಯಲ್ಲಿ ಟೀಸರ್ ರಿಲೀಸ್ ಮಾಡಿ ಚಿತ್ರತಂಡ ಗಮನ ಸೆಳೆದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಏಕಕಾಲಕ್ಕೆ 5 ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರೀ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಎ. ಪಿ ಅರ್ಜುನ್ ನಿರ್ದೇಶನದ ಈ ಚಿತ್ರಕ್ಕೆ ಉದಯ್ ಕೆ. ಮೆಹ್ತಾ ಬಂಡವಾಳ ಹೂಡಿದ್ದಾರೆ. ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ.

Dhruva Sarja Martin update: team completed talkie portions, only 4 songs left to shoot

ಆಕ್ಷನ್ ಪ್ಯಾಕ್ಡ್ ಟೀಸರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಧ್ರುವ ಸಿಕ್ಕಾಪಟ್ಟೆ ಖಡಕ್ ರೋಲ್‌ನಲ್ಲಿ ಮಿಂಚಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ. ಚುನಾವಣೆ ನಂತರ ಸಿನಿಮಾ ರಿಲೀಸ್‌ ಬಗ್ಗೆ ಪ್ಲ್ಯಾನ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಈಗ ಸಿನಿಮಾ ಯಾವ ಹಂತದಲ್ಲಿದೆ ಅನ್ನೋದರ ಬಗ್ಗೆ ನಿರ್ದೇಶಕ ಎ. ಪಿ ಅರ್ಜುನ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

4 ಹಾಡುಗಳ ಚಿತ್ರೀಕರಣ ಬಾಕಿ

'ಮಾರ್ಟಿನ್' ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. 4 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ ಧ್ರುವ ಸರ್ಜಾ 'ಕೆಡಿ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 15 ದಿನಗಳಲ್ಲಿ ಆ ಶೂಟಿಂಗ್ ಮುಗಿಸಿ ಬರ್ತಾರೆ. ನಂತರ ಮತ್ತೆ 'ಮಾರ್ಟಿನ್' ಕೆಲಸ ಆರಂಭ ಆಗುತ್ತದೆ ಎಂದು ಎ. ಪಿ ಅರ್ಜುನ್ ಹೇಳಿದ್ದಾರೆ.

ಡಬ್ಬಿಂಗ್ ಕೆಲಸ ಕೂಡ ಪೂರ್ಣ

3 ಹಾಡುಗಳನ್ನು ಸೆಟ್‌ಗಳಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿದ್ದು ಒಂದನ್ನು ಮಾತ್ರ ಔಟ್‌ ಡೋರ್‌ ಪ್ಲ್ಯಾನ್ ಮಾಡಲಾಗ್ತಿದೆ. ಇನ್ನು ಧ್ರುವ ಬಿಟ್ಟು ಉಳಿದ ಎಲ್ಲರ ಡಬ್ಬಿಂಗ್ ಕಂಪ್ಲೀಟ್ ಆಗಿದೆ. 15 ದಿನಗಳಲ್ಲಿ ಸಾಂಗ್ಸ್ ಶೂಟಿಂಗ್ ಮುಗಿಯುತ್ತೆ. ಆಮೇಲೆ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡುತ್ತೇವೆ ಎಂದಿದ್ದಾರೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಕೂಡ ಬಹುತೇಕ ಮುಕ್ತಾಯವಾಗಿದೆ. ಸಾಂಗ್ ಶೂಟಿಂಗ್ ಮುಗಿದ ಕೂಡಲೇ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Dhruva Sarja Martin update: team completed talkie portions, only 4 songs left to shoot

ಪ್ಯಾನ್ ಇಂಡಿಯಾ ರಿಲೀಸ್

ಕನ್ನಡದ ನಟರು ಒಬ್ಬೊಬ್ಬರಾಗಿ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗುತ್ತಿದ್ದಾರೆ. ಇದೀಗ ಧ್ರುವ ಸರ್ಜಾ ಸರದಿ. ಏಕಕಾಲಕ್ಕೆ 5 ಭಾಷೆಗಳಲ್ಲಿ 'ಮಾರ್ಟಿನ್' ದರ್ಬಾರ್ ಶುರುವಾಗಲಿದೆ. ದೊಡ್ಡ ಮಟ್ಟದಲ್ಲಿ ಹೊಸರಾಜ್ಯಗಳಲ್ಲೂ ಸಿನಿಮಾ ಪ್ರಮೋಷನ್ ನಡೆಯಲಿದೆ. ಈಗಾಗಲೇ ಟೀಸರ್‌ಗೆ ಪರಭಾಷಾ ಪ್ರೇಕ್ಷರಿಂದಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಬಗ್ಗೆ ಹೊಸ ರಾಜ್ಯಗಳಲ್ಲೂ ಬಝ್ ಕ್ರಿಯೇಟ್ ಆಗ್ತಿದೆ.

ಟೀಸರ್‌ಗೆ ಅದ್ಭುತ ರೆಸ್ಪಾನ್ಸ್

ಧ್ರುವ ಸರ್ಜಾ ಜಬರ್ದಸ್ತ್ ಪರ್ಫಾರ್ಮೆನ್ಸ್ ಇರುವ 'ಮಾರ್ಟಿನ್' ಟೀಸರ್ ಹಿಟ್ ಆಗಿದೆ. 4 ದಿನಕ್ಕೆ 70 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡಿತ್ತು. ಕಳೆದ ತಿಂಗಳು ಲಹರಿ ಸಂಸ್ಥೆಯ ಯೂಟ್ಯೂಬ್ ಚಾನಲ್ ಹ್ಯಾಕ್ ಮಾಡಿ ರಷ್ಯಾದ ಕಿಡಿಗೇಡಿಗಳು ಟೀಸರ್‌ ಡಿಲೀಟ್ ಮಾಡಿದ್ದಾಗಿ ಹೇಳಲಾಗಿತ್ತು. 4 ದಿನಗಳ ನಂತರ ಟೀಸರ್ ವಾಪಸ್ ಬಂದಿತ್ತು. ಆಗಸ್ಟ್ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಬಹುದು.

More from Filmibeat

English summary
Dhruva Sarja Martin update: team completed talkie portions, only 4 songs left to shoot. Martin will be released in five languages. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X