ಧ್ರುವ ಸರ್ಜಾ ಹೆಸರಲ್ಲಿ ಜಿಮ್.. ಇಳಕಲ್ ಫ್ಯಾನ್ಸ್‌ಗೆ ನೆರವಾದ ನಟ: ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದ ಪ್ರಿನ್ಸ್

By ಫಿಲ್ಮಿಬೀಟ್ ಡೆಸ್ಕ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳ ನಡುವಿನ ಸಂಬಂಧದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಧ್ರುವ ಸರ್ಜಾ ಅದೆಷ್ಟೇ ಬ್ಯುಸಿಯಾಗಿದ್ದರೂ, ವೀಕೆಂಡ್‌ನಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ.

ವಿಐಪಿಗಳಿಗಾಗಿ ಅಂತ ಒಂದಿಷ್ಟು ಹೊತ್ತು ಅವರಿಗಾಗಿ ಮೀಸಲಿಡುತ್ತಾರೆ. ಅವರೊಂದಿಗೆ ಮಾತುಕತೆ ನಡೆಸುತ್ತಾರೆ. ಅವರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಇದು ಹಲವು ವರ್ಷಗಳಿಂದ ನಡೆದು ಬಂದಿದೆ. ನಿನ್ನೆ(ಜೂನ್ 13)ಯಷ್ಟೇ ಬಾಗಲಕೋಟೆ ಜಿಲ್ಲೆಯ ಇಳಕಲ್ ಅಭಿಮಾನಿಯನ್ನು ಅವರ ಕುಟುಂಬದೊಂದಿಗೆ ಭೇಟಿಯಾಗಿದ್ದಾರೆ.

Dhruva Sarja Meets a Fan, Who Built A Gym in His Name in Bagalkot

ಧ್ರುವ ಸರ್ಜಾ ಈಗ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಮಾರ್ಟಿನ್' ಸಿನಿಮಾ ಈಗಾಗಲೇ ರೆಡಿಯಾಗಿದ್ದು, ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಜೊತೆ ಜೊತೆಗೆ 'ಕೆಡಿ' ಸಿನಿಮಾದ ಶೂಟಿಂಗ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. ಈ ನಡುವೆ ತಮ್ಮ ಅಪರೂಪದ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. ಈ ಅಭಿಮಾನದ ಹಿಂದೊಂದು ಅದ್ಭುತ ಕಥೆಯಿದೆ.

ಅಭಿಮಾನಕ್ಕಾಗಿ ಜಿಮ್ ಕಟ್ಟಿದ ಧ್ರುವ ಅಭಿಮಾನಿ

ಧ್ರುವ ಸರ್ಜಾಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಆಕ್ಷನ್ ಪ್ರಿನ್ ಭೇಟಿ ಮಾಡುವುದಕ್ಕೆ ಆಗಾಗ ಬೆಂಗಳೂರಿಗೆ ಬರುತ್ತಾರೆ. ಆದರೆ, ನಿನ್ನೆ ಭೇಟಿಯಾಗಿರುವ ಅಭಿಮಾನಿಯ ಅಭಿಮಾನವೇ ಬೇರೆ. ಮನೆಯಲ್ಲಿ ಕಡು ಬಡತನವಿದ್ದರೂ ಧ್ರುವ ಸರ್ಜಾ ಹೆಸರಿನಿಂದಲೇ ಬದುಕು ಕಂಡು ಅಭಿಮಾನಿಯ ಕಥೆ.

Dhruva Sarja Meets a Fan, Who Built A Gym in His Name in Bagalkot

ಈ ಅಭಿಮಾನಿಯ ಹೆಸರು ದರ್ಶನ್. ಬಾಗಲಕೋಟೆ ಜಿಲ್ಲೆಯ ಇಳಕಲ್‌ನವರು. ಇದೇ ಒಂದು ವರ್ಷದ ಹಿಂದಷ್ಟೇ ಧ್ರುವ ಸರ್ಜಾ ಹೆಸರಲ್ಲಿ ಜಿಮ್ ಓಪನ್ ಮಾಡಿದ್ದರು. ಇಳಕಲ್‌ನಲ್ಲಿರುವ ಆ ಜಿಮ್ಮಿನ ಹೆಸರು 'ಧ್ರುವ ಸರ್ಜಾ ಜಿಮ್ನಾಷಿಯಂ'. ಅದೇ ಆಕ್ಷನ್ ಪ್ರಿನ್ಸ್ ಅಭಿಮಾನಿಯ ಜೀವನಕ್ಕೆ ಆಧಾರವಾಗಿದೆ.

ಧ್ರುವ ಸರ್ಜಾ ಭೇಟಿಯಾದ ಇಳಕಲ್ ಅಭಿಮಾನಿ

ಈ 'ಧ್ರುವ ಸರ್ಜಾ ಜಿಮ್ನಾಷಿಯಂ' ಇತ್ತೀಚೆಗೆ ಒಂದು ವರ್ಷದ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ತನ್ನ ಬದುಕಿಗೆ ನೆರವಾದ ನೆಚ್ಚಿನ ನಟನನ್ನು ಭೇಟಿ ಮಾಡಬೇಕು ಅಂತ ದರ್ಶನ್ ಆಸೆ ಪಟ್ಟಿದ್ದರು. ಅದರಂತೆ ನಿನ್ನೆ (ಜೂನ್ 23) ಕುಟುಂಬ ಸಮೇತ ಇಳಕಲ್‌ನಿಂದ ಬೆಂಗಳೂರಿಗೆ ಬಂದು ಧ್ರುವ ಸರ್ಜಾರನ್ನು ಭೇಟಿ ಮಾಡಿದ್ದಾರೆ.

ಇದೇ ವೇಳೆ ದರ್ಶನ್ ಮಗನ ಹುಟ್ಟಿದ ಹಬ್ಬ ಕೂಡ. ಹೀಗಾಗಿ ದರ್ಶನ್ ಅವರ ಅಮ್ಮನೊಂದಿಗೆ ಧ್ರುವ ಸರ್ಜಾರನ್ನು ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಧ್ರುವ ಸರ್ಜಾ ತನ್ನ ಡೈ ಹಾರ್ಟ್ ಫ್ಯಾನ್ ಅನ್ನು ಭೇಟಿ ಮಾಡಿ, ಅವರ ಅಮ್ಮನಿಂದ ಆಶೀರ್ವಾದವನ್ನು ಪಡೆದಿದ್ದಾರೆ.

ಅಭಿಮಾನಿಗೆ ಸಹಾಯ ಹಸ್ತ

ಇದೇ ಧ್ರುವ ಸರ್ಜಾ ತನ್ನ ಹೈ ಹಾರ್ಡ್ ಫ್ಯಾನ್‌ಗೆ ಸಹಾಯ ಮಾಡಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಯಾವ ರೀತಿ ಸಹಾಯ ಹಸ್ತ ಚಾಚಿದ್ದಾರೆ ಅನ್ನೋದು ರಿವೀಲ್ ಮಾಡಿಲ್ಲ. ಹೀಗಾಗಿ ಧ್ರುವ ಮತ್ತೊಮ್ಮೆ ತನ್ನ ಅಭಿಮಾನಿ ಕಷ್ಟ ನೆರವಾಗಿದ್ದು, ಅವರ ಆಪ್ತವಲಯದಲ್ಲಿ ಚರ್ಚೆಯಾಗುತ್ತಿದೆ.

ಇನ್ನೊಂದು ಕಡೆ ಧ್ರುವ ಸರ್ಜಾ ತಮ್ಮ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಗಮನ ಹರಿಸುತ್ತಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನ 'ಮಾರ್ಟಿನ್' ಸಿನಿಮಾ ರಿಲೀಸ್ ಅನ್ನು ಎದುರು ನೋಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಚಿತ್ರದ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ.

More from Filmibeat

English summary
Dhruva Sarja Meets a Fan, Who Built A Gym in His Name in Bagalkot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X