ಎಪಿ ಅರ್ಜುನ್ ಚಿತ್ರಕ್ಕೂ ಮುಂಚೆ 5ನೇ ಪ್ರಾಜೆಕ್ಟ್ ಘೋಷಣೆ ಮಾಡಿದ ಧ್ರುವ ಸರ್ಜಾ
ಸುಮಾರು 8 ವರ್ಷದ ನಂತರ 'ಅದ್ಧೂರಿ' ಕಾಂಬಿನೇಷನ್ ಮತ್ತೆ ಒಟ್ಟಿಗೆ ಬರ್ತಿದೆ. ಎಪಿ ಅರ್ಜುನ್ ಜೊತೆ ಧ್ರುವ ಸರ್ಜಾ ಮತ್ತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಧ್ರುವ ಅವರ ಚೊಚ್ಚಲ ಸಿನಿಮಾ ಅದ್ಧೂರಿ ಸೂಪರ್ ಹಿಟ್ ಆದ ಬಳಿಕ ಆ ಕಾಂಬಿನೇಷನ್ ಮತ್ತೆ ಬಂದಿಲ್ಲ.
ಇಂದು ಧ್ರುವ ಸರ್ಜಾ ಬರ್ತಡೇ ಹಿನ್ನೆಲೆ ಎಪಿ ಅರ್ಜುನ್ ಹೊಸ ಪ್ರಾಜೆಕ್ಟ್ ಪ್ರಕಟಿಸಿದ್ದಾರೆ. ಈ ಚಿತ್ರಕ್ಕೂ ಮುಂಚೆ ಮತ್ತೊಂದು ದೊಡ್ಡ ಚಿತ್ರಕ್ಕೆ ಧ್ರುವ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಷ್ಟು ದಿನ ಅಂತ ಕಂತೆ ಆಗಿದ್ದ ಈ ಚಿತ್ರದ ಅಧಿಕೃತವಾಗಿದೆ. ಮುಂದೆ ಓದಿ...

ಉದಯ್ ಮೆಹ್ತಾ-ಧ್ರುವ ಚಿತ್ರ ಅಧಿಕೃತ
'ಬಚ್ಚನ್' ಚಿತ್ರದ ಖ್ಯಾತಿಯ ನಿರ್ಮಾಪಕ ಉದಯ್ ಮೆಹ್ತಾ ಅವರ ಜೊತೆ ಧ್ರುವ ಸರ್ಜಾ ಹೊಸ ಸಿನಿಮಾ ಮಾಡಲಿದ್ದಾರೆ ಎಂದು ಕಳೆದ ಎರಡು ವರ್ಷದಿಂದ ಸುದ್ದಿ ಹರಿದಾಡುತ್ತಲೇ ಇದೆ. ಇಂದು ಧ್ರುವ ಹುಟ್ಟುಹಬ್ಬ ಹಿನ್ನೆಲೆ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.

ಮತ್ತೆ ನಂದ ಕಿಶೋರ್ ಆಕ್ಷನ್ ಕಟ್
'ಪೊಗರು' ಚಿತ್ರವನ್ನು ನಿರ್ದೇಶನ ಮಾಡಿರುವ ನಂದ ಕಿಶೋರ್ ಅವರು ಮತ್ತೊಮ್ಮೆ ಧ್ರುವ ಸರ್ಜಾ ಜೊತೆ ಕೆಲಸ ಮಾಡಲಿದ್ದಾರೆ. ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ನಂದ ಕಿಶೋರ್ ಡೈರೆಕ್ಟರ್ ಆಗಿ ಕೆಲಸ ಮಾಡಲಿದ್ದಾರೆ.

ಡಿಎಸ್ 5 ಪೋಸ್ಟರ್ ಬಿಡುಗಡೆ
ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ನಿರ್ಮಾಪಕ ಉದಯ್ ಮೆಹ್ತಾ ಅವರು ಡಿಎಸ್ 5 ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಅಪ್‌ಡೇಟ್ ಸದ್ಯಕ್ಕಿಲ್ಲ. ಆದರೆ, ಐದನೇ ಸಿನಿಮಾ ಇದೇ ಎನ್ನುವುದು ಪಕ್ಕಾ.
Recommended Video

ಪೋಸ್ಟರ್ ರಿಲೀಸ್ ಮಾಡಿದ ಎಪಿ ಅರ್ಜುನ್
ಅದ್ಧೂರಿ ಬಳಿಕ ಮತ್ತೊಮ್ಮೆ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುವುದಾಗಿ ಎಪಿ ಅರ್ಜುನ್ ಘೋಷಣೆ ಮಾಡಿದ್ದು, ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ. ಪ್ರೊಡಕ್ಷನ್ ನಂ 3 ಎಂದು ಹೇಳಿರುವ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.


Click it and Unblock the Notifications











