For Quick Alerts
  ALLOW NOTIFICATIONS  
  For Daily Alerts

  ಮುಂದಿನ ಸಿನಿಮಾ ತಯಾರಿ ಆರಂಭ: ರೀಮೇಕ್‌ ಗೆ ಹೊರಳಿದ ಧ್ರುವ ಸರ್ಜಾ

  |

  ಧ್ರುವ ಸರ್ಜಾ ಪೊಗರು ಬಿಡುಗಡೆ ತಯಾರಿಯಲ್ಲಿದ್ದಾರೆ. ಪಕ್ಕಾ ಆಕ್ಷನ್ ಸಿನಿಮಾ ಭರಾಟೆ, ಖ್ಯಾತ ನಾಮ ವಿಲನ್‌ಗಳ ಎಂಟ್ರಿಯಿಂದ ಭಾರಿ ಕುತೂಹಲ ಮೂಡಿಸಿದೆ.

  ಧ್ರುವ ಸರ್ಜಾ ಅವರ ಪೊಗರು ಸಿನಿಮಾ ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ಬಿಡುಗಡೆ ಆಗುವ ಸಂಭವ ಇದೆ. ಆದರೆ ಸಿನಿಮಾ ಬಿಡುಗಡೆಗೆ ಮುನ್ನವೇ ಧ್ರುವ ಸರ್ಜಾ ಮತ್ತೊಂದು ಸಿನಿಮಾಕ್ಕೆ ಕೈ ಹಾಕಿದ್ದಾರೆ.

  ಪೊಗರು ಸೇರಿದಂತೆ ಧ್ರುವ ಸರ್ಜಾ ಈ ವರೆಗೆ ಮಾಡಿರುವ ನಾಲ್ಕೂ ಸಿನಿಮಾಗಳು ಸ್ವಮೇಕ್ ಆಗಿದ್ದವು. ಆದರೆ ಮೊದಲ ಬಾರಿಗೆ ಧ್ರುವ ಸರ್ಜಾ ರೀಮೇಕ್ ಸಿನಿಮಾದತ್ತ ಹೊರಳಿದ್ದಾರೆ. ತೆಲುಗಿನ ಕನ್ನಡ ರೀಮೇಕ್ ಸಿನಿಮಾದಲ್ಲಿ ಧ್ರುವ ಸರ್ಜಾ ಪಾತ್ರ ನಿರ್ವಹಿಸಲಿದ್ದಾರೆ.

  ನಂದ ಕಿಶೋರ್ ನಿರ್ದೇಶಿಸಲಿದ್ದಾರೆ ಧ್ರುವ ಸರ್ಜಾ ಮುಂದಿನ ಸಿನಿಮಾ

  ನಂದ ಕಿಶೋರ್ ನಿರ್ದೇಶಿಸಲಿದ್ದಾರೆ ಧ್ರುವ ಸರ್ಜಾ ಮುಂದಿನ ಸಿನಿಮಾ

  ಪೊಗರು ಸಿನಿಮಾ ನಿರ್ದೇಶಿಸಿರುವ ನಂದ ಕಿಶೋರ್ ಅವರೇ ಧ್ರುವ ಸರ್ಜಾ ಮುಂದಿನ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟೆರಿ ಈ ಸಿನಿಮಾವನ್ನು ನಿರ್ಮಿಸಲಿದೆ. ಚಿತ್ರದ ಮಾತುಕತೆ ಹಂತ ಈಗಾಗಲೇ ಮುಗಿದಿದೆ ಎನ್ನಲಾಗಿದೆ.

  ಅಧ್ಯಕ್ಷ ಇನ್ ಅಮೆರಿಕ ನಿರ್ಮಿಸಿದ್ದ ಸಂಸ್ಥೆ

  ಅಧ್ಯಕ್ಷ ಇನ್ ಅಮೆರಿಕ ನಿರ್ಮಿಸಿದ್ದ ಸಂಸ್ಥೆ

  ಪೀಪಲ್ಸ್ ಮೀಡಿಯಾ ಫ್ಯಾಕ್ಟೆರಿ ಸಂಸ್ಥೆಯು ಕನ್ನಡದಲ್ಲಿ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ನಿರ್ಮಿಸಿತ್ತು. ತೆಲುಗಿನಲ್ಲಿ 'ನಿನ್ನು ಕೋರಿ' ಸಿನಿಮಾ ನಿರ್ಮಿಸಿತ್ತು. ಇದು ಹಿಟ್ ಆಗಿತ್ತು. ಇದೇ ಸಿನಿಮಾವನ್ನು ಕನ್ನಡಕ್ಕೆ ತರುತ್ತಿದ್ದಾರಾ ಎಂಬ ಅನುಮಾನವೂ ಇದೆ.

  ರೀಮೇಕ್ ಸಿನಿಮಾದಲ್ಲಿ ನಟಿಸುತ್ತಿರುವ ಧ್ರುವ ಸರ್ಜಾ

  ರೀಮೇಕ್ ಸಿನಿಮಾದಲ್ಲಿ ನಟಿಸುತ್ತಿರುವ ಧ್ರುವ ಸರ್ಜಾ

  ರೀಮೇಕ್ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಧ್ರುವ ಸರ್ಜಾ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಪೀಪಲ್ಸ್ ಮೀಡಿಯಾ ಫ್ಯಾಕ್ಟೆರಿ ಸಂಸ್ಥೆ ಸಹ ಈ ಬಗ್ಗೆ ಹೇಳಿಲ್ಲ. ಆದರೆ ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

  ಪೊಗರಿನೊಂದಿಗೆ ಬರಲು ಧ್ರುವ ತಯಾರು

  ಪೊಗರಿನೊಂದಿಗೆ ಬರಲು ಧ್ರುವ ತಯಾರು

  ಧ್ರುವ ಸರ್ಜಾ ಅವರ ಪೊಗರು ಸಿನಿಮಾ ಭಾರಿ ಕುತೂಹಲ ಮೂಡಿಸಿದ್ದು, ಮಾರ್ಚ್ 27 ಕ್ಕೆ ಮೊದಲ ಹಾಡು 'ಖರಾಬ್' ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ.

  English summary
  Actor Dhruva Sarja ready to hit theater with his Pogaru movie. His next movie will be a remake of Telugu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X