twitter
    For Quick Alerts
    ALLOW NOTIFICATIONS  
    For Daily Alerts

    ಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾ

    |

    ಚಿರಂಜೀವಿ ಸರ್ಜಾ-ಧ್ರುವ ಸರ್ಜಾ ನಡುವೆ ಇದ್ದ ಪ್ರೀತಿ ಪದಗಳಿಗೆ ಸಿಕ್ಕುವುದಲ್ಲ. ಬಹಳ ಅನ್ಯೋನ್ಯತೆ ಇಬ್ಬರ ನಡುವೆ ಇತ್ತು.

    ಆದರೆ ಚಿರಂಜೀವಿ ಸರ್ಜಾ ಈಗ ಎಲ್ಲರನ್ನೂ ಅಗಲಿದ್ದಾರೆ. ಅಣ್ಣ ಮಣ್ಣಾದರೂ ನನ್ನ ಬಳಿಯೇ ಇರಬೇಕೆಂದು ತನ್ನ ಒಡೆತನದ ಫಾರಂ ಹೌನ್‌ನಲ್ಲಿಯೇ ಹಠ ಹಿಡಿದು ಅಂತಿಮಸಂಸ್ಕಾರ ಆಗುವಂತೆ ಮಾಡಿದರು ತಮ್ಮ ಧ್ರುವ ಸರ್ಜಾ.

    ಪ್ರೀತಿಯ ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಮಣ್ಣು ಮಾಡಿರುವ ಜಾಗದಲ್ಲಿ ಬೃಹತ್ ಆದ, ಭವ್ಯವಾದ ಮಂಟಪವೊಂದನ್ನು ಕಟ್ಟಲು ಹೊರಟಿದ್ದಾರೆ ಚಿರು ಸರ್ಜಾ.

    ಬೃಂದಾವನ ಫಾರಂ ಹೌಸ್‌ನಲ್ಲಿ ಅಂತಿಮಕ್ರಿಯೆ

    ಬೃಂದಾವನ ಫಾರಂ ಹೌಸ್‌ನಲ್ಲಿ ಅಂತಿಮಕ್ರಿಯೆ

    ಚಿರಂಜೀವಿ ಸರ್ಜಾ ಅವರನ್ನು ರಾಮನಗರ ಬಳಿಯ ಬೃಂದಾವನ ಫಾರಂ ಹೌಸ್‌ನಲ್ಲಿ ಮಣ್ಣುಮಾಡಲಾಗಿದೆ. ಈ ಫಾರಂ ಹೌಸ್ ಧ್ರುವ ಸರ್ಜಾ ಅವರಿಗೆ ಸೇರಿದ್ದು, ಈ ಫಾರಂ ಹೌಸ್ ಚಿರು ಸರ್ಜಾ ಗೆ ಸಾಕಷ್ಟು ಇಷ್ಟವಂತೆ.

    ಕೆಲವೇ ದಿನಗಳಲ್ಲಿ ಕೆಲಸ ಪ್ರಾಂಭವಾಗಲಿದೆ

    ಕೆಲವೇ ದಿನಗಳಲ್ಲಿ ಕೆಲಸ ಪ್ರಾಂಭವಾಗಲಿದೆ

    ಮಣ್ಣಾದವರ ನೆನಪಲ್ಲಿ ಬೃಂದಾವನ ಕಟ್ಟುವುದು ಮಂಟಪದ ಮಾದರಿ ಕಟ್ಟುವುದು ಸಾಮಾನ್ಯ ಹಾಗೆಯೇ ಚಿರು ಸರ್ಜಾ ಸಮಾಧಿ ಸ್ಥಳದಲ್ಲಿ ದೊಡ್ಡದಾದ ಮಂಟಪವನ್ನು ಧ್ರುವ ಸರ್ಜಾ ಕಟ್ಟಲಿದ್ದಾರಂತೆ. ಮಂಟಪದ ಕಾರ್ಯ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆಯಂತೆ.

    ಚಿತ್ರಗಳನ್ನು ಹಂಚಿಕೊಂಡಿದ್ದ ಧ್ರುವ ಸರ್ಜಾ

    ಚಿತ್ರಗಳನ್ನು ಹಂಚಿಕೊಂಡಿದ್ದ ಧ್ರುವ ಸರ್ಜಾ

    ಚಿರು ಸರ್ಜಾ ಅವರ ನೆನಪಲ್ಲಿ ಭಾವುಕ ಪೋಸ್ಟ್ ಹಾಕಿದ್ದ ಧ್ರುವ ಸರ್ಜಾ ಬರೆದ ಸಾಲುಗಳು ಹೃದಯ ಹಿಂಡುವಂತಿದೆ. 'ನೀನು ನನಗೆ ವಾಪಸ್ ಬೇಕು. ನೀನಿಲ್ಲದೆ ನನಗೆ ಇರಲು ಸಾಧ್ಯವೇ ಆಗುತ್ತಿಲ್ಲ' ಎಂದು ಧ್ರುವ ಬರೆದುಕೊಂಡಿದ್ದಾರೆ.

    ಧ್ರುವ-ಚಿರು ಬಹಳ ಆತ್ಮೀಯವಾಗಿದ್ದರು

    ಧ್ರುವ-ಚಿರು ಬಹಳ ಆತ್ಮೀಯವಾಗಿದ್ದರು

    ಧ್ರುವ ಸರ್ಜಾ ಹಾಗೂ ಚಿರು ಸರ್ಜಾ ಬಹಳಾ ಆತ್ಮೀಯವಾಗಿದ್ದರು. ಅವರ ಆತ್ಮೀಯತೆ ಸಾರುವ ಹಲವು ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    English summary
    Dhruva Sarja planing to build grand Mantapa in Brundavana farm where Chiranjeevi Sarja cremated.
    Tuesday, June 16, 2020, 8:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X