ಬಿಡುಗಡೆಯಾದ 51 ನಿಮಿಷದಲ್ಲಿ ರೆಕಾರ್ಡ್ ಮಾಡಿದ 'ಪೊಗರು' ಟ್ರೈಲರ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾದ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡ್ತಿದೆ.
ಅದರಲ್ಲೂ 'ಮಾತೃಭಾಷೆ ಬಿಟ್ಟೋರು ಮೂರು ಬಿಟ್ಟೋರಿಗಿಂತ ಮೂರ್ಖರು' ಡೈಲಾಗ್ ಹೆಚ್ಚು ಸೌಂಡು ಮಾಡ್ತಿದೆ. ಪರೋಕ್ಷವಾಗಿ ನಟಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.

ಪೊಗರು ಡೈಲಾಗ್ ಟ್ರೈಲರ್ ರಿಲೀಸ್ ಆಗಿ 51 ನಿಮಿಷದಲ್ಲಿ ಒಂದು ಮಿಲಿಯನ್ ವೀಕ್ಷಣೆ ಕಂಡಿದ್ದು, ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಇದು ಹೊಸ ದಾಖಲೆ ಎಂದು ಹೇಳಲಾಗುತ್ತಿದೆ.
ಸಂಜೆ 6.17 ನಿಮಷಕ್ಕೆ ಸರಿಯಾಗಿ 13 ಲಕ್ಷದ 56 ಸಾವಿರ ವೀಕ್ಷಣೆ ಕಂಡಿದೆ. ರಿಯಲ್ ಟೈಂನಲ್ಲಿ ವೀಕ್ಷಣೆ ಇನ್ನು ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆಯನ್ನ ಅಲ್ಲೆಗಳೆಯುವಂತಿಲ್ಲ.
ಇನ್ನುಳಿದಂತೆ ಪೊಗರು ಸಿನಿಮಾದ ಡೈಲಾಗ್ ಗೆ ಭಾರಿ ಮೆಚ್ಚುಗೆ ಸಿಕ್ಕಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಮುಕುಂದ ಮುರಾರಿ ಸಿನಿಮಾ ಬಳಿಕ ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚಂದನ್ ಶೆಟ್ಟಿ ಸಂಗೀತವಿದೆ. ಎಲ್ಲ ಅಂದುಕೊಂಡಂತೆ ಆದರೆ ಈ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆಯಂತೆ.


Click it and Unblock the Notifications










