For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಕಾರ್ ನಂಬರ್ ನಲ್ಲಿ ಇಷ್ಟೊಂದು ವಿಶೇಷ

  |

  ನಟ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಳೆದ ತಿಂಗಳ ಹೊಸ ಕಾರ್ ಖರೀದಿ ಮಾಡಿದ್ದರು. ಈಗ ಆ ಕಾರ್ ನಂಬರ್ ಎಲ್ಲರ ಗಮನ ಸಳೆದಿದೆ.

  ಸಾಮಾನ್ಯವಾಗಿ ಸ್ಟಾರ್ ಗಳು ತಮ್ಮ ಮೆಚ್ಚಿನ ಕಾರ್ ಗೆ ಫ್ಯಾನ್ಸಿ ನಂಬರ್ ಆಯ್ಕೆ ಮಾಡುತ್ತಾರೆ. ಯೋಚನೆ ಮಾಡಿ ಕಾರ್ ಕೊಂಡುಕೊಳ್ಳುವ ಅವರು, ಅಷ್ಟೇ ಯೋಚನೆ ಮಾಡಿ ಅದಕ್ಕೆ ನಂಬರ್ ಹುಡುಕುತ್ತಾರೆ. ಇದೀಗ ಧ್ರುವ ಸರ್ಜಾ ತಮ್ಮ ಜೀವನದ ಮರೆಯಲಾಗದ ಘಟನೆಗಳ ದಿನಾಂಕವನ್ನು ಕಾರ್ ನಂಬರ್ ನಲ್ಲಿ ಜೊತೆಯಾಗಿಸಿದ್ದಾರೆ.

  ಹನುಮ ಜಯಂತಿಗೆ ಹೊಸ ಕಾರ್ ಖರೀದಿ ಮಾಡಿದ ಧ್ರುವ ಸರ್ಜಾಹನುಮ ಜಯಂತಿಗೆ ಹೊಸ ಕಾರ್ ಖರೀದಿ ಮಾಡಿದ ಧ್ರುವ ಸರ್ಜಾ

  ಅಂದಹಾಗೆ, ಧ್ರುವ ಸರ್ಜಾ ಪೋರ್ಷೆ ಕಾರ್‌ ನಂಬರ್ ಹಾಗೂ ಅವರ ವಿಶೇಷತೆ ಇಲ್ಲಿದೆ.

  KA 18 MM 0006

  KA 18 MM 0006

  KA 18 MM 0006 ಧ್ರುವ ಸರ್ಜಾ ಹೊಸ ಕಾರ್ ನಂಬರ್. ದಿನಾಂಕ 18 ಧ್ರುವ ಸರ್ಜಾ ಪತ್ನಿ ಪ್ರೇರಣಾ ಹುಟ್ಟಿದ ದಿನ. ದಿನಾಂಕ 6 ಧ್ರುವ ಸರ್ಜಾ ಹುಟ್ಟಿದ ದಿನ. ಈ ಎರಡು ಸಂಖ್ಯೆಗಳು ಕೂಡ ಕಾರ್ ಮೇಲೆ ಇದೆ. ಈ ಎರಡು ಸಂಖ್ಯೆಯನ್ನು ಕೂಡಿದರೆ, 24 ಆಗುತ್ತದೆ. 24 ಧ್ರುವ ಹಾಗೂ ಪ್ರೇರಣಾ ಮದುವೆಯಾದ ದಿನವಾಗಿದೆ. ಈ ರೀತಿ ಕಾರ್ ನಂಬರ್ ಅವರ ಜೀವನದ ಘಟನೆಗಳನ್ನು ನೆನಪಿಸುತ್ತಿದೆ. ಅಂದಹಾಗೆ, ಚಿಕ್ಕಮಗಳೂರಿನಲ್ಲಿ ಕಾರ್ ರಿಜಿಸ್ಟ್ರೆಷನ್ ಆಗಿದೆ.

  ಕನ್ನಡ ಸಂಖ್ಯೆಗಳಲ್ಲಿ ಕಾರ್ ನಂಬರ್

  ಕನ್ನಡ ಸಂಖ್ಯೆಗಳಲ್ಲಿ ಕಾರ್ ನಂಬರ್

  ಧ್ರುವ ಸರ್ಜಾ ತಮ್ಮ ಕಾರ್ ಮೇಲೆ ಕನ್ನಡ ಸಂಖ್ಯೆಗಳನ್ನು ಬಳಸಿದ್ದಾರೆ. ಅದರ ಜೊತೆಗೆ ಕರ್ನಾಟಕ ಭೂಪಟವೂ ಇದೆ. ಧ್ರುವ ಸರ್ಜಾ ಕನ್ನಡದ ಅಭಿಮಾನ ನಿಜಕ್ಕೂ ಮೆಚ್ಚುವಂತದ್ದು. ಆದರೆ, ಈ ರೀತಿ ಪ್ರಾದೇಶಿಕ ಭಾಷೆಗಳಲ್ಲಿ ವಾಹನಗಳ ಮೇಲೆ ಸಂಖ್ಯೆ ಬರೆಸುವುದು ಕಾನೂನು ಬಾಹಿರವಾಗಿದೆ. ಕಾರ್ ಮುಂಭಾಗ ಕನ್ನಡದಲ್ಲಿ ಸಂಖ್ಯೆ ಇದ್ದು, ಹಿಂದೆ ಇಂಗ್ಲೀಷ್ ನಲ್ಲಿ ಇದ್ದರೂ ಇರಬಹುದು. ಆದರೆ, ಅವರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

  ಧನಂಜಯ್ ರೇಂಜ್ ರೋವರ್ ಕಾರ್ ನಂಬರ್ ನಲ್ಲೊಂದು ವಿಶೇಷಧನಂಜಯ್ ರೇಂಜ್ ರೋವರ್ ಕಾರ್ ನಂಬರ್ ನಲ್ಲೊಂದು ವಿಶೇಷ

  ಪತ್ನಿ ಜೊತೆಗೆ ಬೈಕ್ ಸವಾರಿ

  ಪತ್ನಿ ಜೊತೆಗೆ ಬೈಕ್ ಸವಾರಿ

  ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಜೊತೆಗೆ ಜಾಲಿ ರೈಡ್ ಹೋಗಿದ್ದಾರೆ. ಕಾರ್ ಬಿಟ್ಟು ಬೈಕ್ ನಲ್ಲಿ ಹೆಂಡತಿಯನ್ನು ಕೂರಿಸಿಕೊಂಡು ಊರು ಸುತ್ತಿಸಿದ್ದಾರೆ. ಅವರನ್ನು ಕಾರ್ ಹಿಂಬಾಲಿಸುತ್ತಿದೆ. ಈ ವಿಡಿಯೋ ಸೋಷಿಯಲ್ ಮೀಡಯಾದಲ್ಲಿ ಅಭಿಮಾನಿಗಳ ಹಂಚಿಕೊಂಡಿದ್ದಾರೆ.

  ಮತ್ತೆ ಮುಂದಕ್ಕೆ ಹೋದ ಪೊಗರು

  ಮತ್ತೆ ಮುಂದಕ್ಕೆ ಹೋದ ಪೊಗರು

  ಮತ್ತೊಂದು ಕಡೆ ಅಭಿಮಾನಿಗಳಿಗೆ ಮತ್ತೆ 'ಪೊಗರು' ಸಿನಿಮಾ ನಿರಾಸೆ ಮೂಡಿಸಿದೆ. ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಎಂದು ನಿರ್ದೇಶಕ ನಂದ ಕಿಶೋರ್ ಘೋಷಣೆ ಮಾಡಿದ್ದರು. ಆದರೆ, ಕಾರಣಾಂತರಗಳಿಂದ ಸಿನಿಮಾ ಬರುವುದು ತಡ ಆಗಿದೆ. ರಶ್ಮಿಕಾ ಮಂದಣ್ಣ ಈ ಸಿನಿಮಾದ ನಾಯಕಿಯಾಗಿದ್ದಾರೆ.

  English summary
  Kannada Actor Dhruva Sarja porsche car number specialty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X