ಚಿರು ಹುಟ್ಟುಹಬ್ಬಕ್ಕೆ ಶುಭಕೋರಿದ ಧ್ರುವ ಸರ್ಜಾ: ಜೂನಿಯರ್ ಚಿರು ಸುಳಿವು ನೀಡಿದ ಆಕ್ಷನ್ ಪ್ರಿನ್ಸ್
ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದು, ಸದ್ಯದಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರೆ. ಚಿರು ಸರ್ಜಾ ಅವರನ್ನು ಕಳೆದುಕೊಂಡು ನೋವಿನಲ್ಲಿ ಕೈ ತೊಳೆಯುತ್ತಿರುವ ಸರ್ಜಾ ಕುಟುಂಬಕ್ಕೆ ಈ ಮಗು ಸಂತಸ ನೀಡಲಿದೆ.
ಮೇಘನಾ ಅವರಿಗೆ ಗಂಡು ಮಗು ಆಗಬಹುದು ಎಂದು ಊಹಿಸುತ್ತಿದ್ದಾರೆ. ಚಿರು ಸರ್ಜಾ ಮತ್ತೆ ಮೇಘನಾ ಅವರ ಹೊಟ್ಟೆಯಲ್ಲಿ ಮಗುವಾಗಿ ಜನಿಸಲಿದ್ದಾರೆ ಎಂಬ ನಂಬಿಕೆಯಲ್ಲಿ ಕುಟುಂಬ ಹಾಗೂ ಅಭಿಮಾನಿಗಳು ಇದ್ದಾರೆ. ಇಂತಹ ನಿರೀಕ್ಷೆಯ ನಡುವೆ ಧ್ರುವ ಸರ್ಜಾ ಸಹ ಅಂತಹದ್ದೇ ಸುಳಿವು ನೀಡಿದ್ದಾರೆ. ಮುಂದೆ ಓದಿ...

ಚಿರು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಧ್ರುವ
ಅಕ್ಟೋಬರ್ 17 ರಂದು ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ ಇದೆ. ಒಂದು ದಿನ ಮುಂಚಿತವಾಗಿ ಸಹೋದರನಿಗೆ ಶುಭಕೋರಿರುವ ಧ್ರುವ ಸರ್ಜಾ, ಮೇಘನಾ ರಾಜ್ ಅವರ ಸೀಮಂತದ ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದಾರೆ.

ಜೂನಿಯರ್ ಚಿರು ಬರ್ತಿದ್ದಾನೆ
ಮೇಘನಾ ರಾಜ್ ಅವರಿಗೆ ಜೂನಿಯರ್ ಚಿರಂಜೀವಿ ಸರ್ಜಾ ಬರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಈಗ ಧ್ರುವ ಸರ್ಜಾ ಸಹ ಜೂನಿಯರ್ ಚಿರು ಬರ್ತಿದ್ದಾನೆ ಎಂದು ಇನ್ಸ್ಸಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಸಹಜವಾಗಿ ಕುತೂಹಲ ಹೆಚ್ಚಿಸಿದೆ.

ಹ್ಯಾಪಿ ವೆಲ್‌ಕಮ್ ಜೂನಿಯರ್ ಚಿರು
ಸರ್ಜಾ ಕುಟುಂಬಕ್ಕೆ ಹೊಸ ಜೀವವನ್ನು ಸ್ವಾಗತಿಸುವ ಸಲುವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಇಡೀ ಕುಟುಂಬ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೂಲಕ ಮೇಘನಾ ರಾಜ್ ಜೂನಿಯರ್ ಚಿರುಗೆ ಸ್ವಾಗತ ಕೋರಿದ್ದಾರೆ. ಅರ್ಜುನ್ ಸರ್ಜಾ ಸಹ ಹ್ಯಾಪಿ ವೆಲ್‌ಕಮ್ ಚಿರು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Recommended Video

ನವೆಂಬರ್‌ನಲ್ಲಿ ಮಗುವಿಗೆ ಜನ್ಮ
ಅಕ್ಟೋಬರ್ 4 ರಂದು ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮ ನಡೆದಿತ್ತು. ಸದ್ಯದ ಮಾಹಿತಿ ಪ್ರಕಾರ ಮೇಘನಾ ರಾಜ್ ಅವರು ಇದೇ ತಿಂಗಳಲ್ಲಿ ಮಗವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ಚಿರು ಸರ್ಜಾ ಹುಟ್ಟಿದ ದಿನದಂದೆ ಮಗು ಸಹ ಜನ್ಮಿಸಲಿದೆ ಎಂಬ ನಿರೀಕ್ಷೆ ಕುಟುಂಬಕ್ಕಿದೆ.


Click it and Unblock the Notifications











