ಸರ್ಜಾ ಕುಟುಂಬಕ್ಕೆ ಬರಲಿರುವ ಹೊಸ ಸದಸ್ಯ: ಸಂತಸದ ವಿಷಯ ಹಂಚಿಕೊಂಡ ಧ್ರುವ ಸರ್ಜಾ

ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ. ನಟ ಧ್ರುವ ಸರ್ಜಾ ಶೀಘ್ರದಲ್ಲಿಯೇ ತಂದೆಯಾಗಲಿದ್ದಾರೆ.

ಧ್ರುವ ಸರ್ಜಾ ಪತ್ನಿ ಗರ್ಭಿಣಿಯಾಗಿದ್ದು, ಗರ್ಭಿಣಿ ಪತ್ನಿಯೊಡನೆ ಧ್ರುವ ಸರ್ಜಾ ಫೊಟೊಶೂಟ್ ಮಾಡಿಸಿಕೊಂಡಿದ್ದು, ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಗರ್ಭಿಣಿ ಪತ್ನಿ ಪ್ರೇರಣಾ ಜೊತೆಗೆ ಮಗುವಿನ ಅಲ್ಟ್ರಾ ಸೌಂಡ್‌ ಚಿತ್ರವನ್ನು ಹಿಡಿದು ಕಾಣಿಸಿಕೊಂಡಿದ್ದಾರೆ ಧ್ರುವ ಸರ್ಜಾ.

ಪತ್ನಿಯೊಟ್ಟಿಗಿನ ಚಿತ್ರಗಳನ್ನು ಕೊಲ್ಯಾಜ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ಧ್ರುವ ಸರ್ಜಾ, ''ಜೀವನದ ಹೊಸ ಹಂತಕ್ಕೆ ಹೋಗುತ್ತಿದ್ದೇವೆ. ಈ ಹಂತ ಬಹಳ ದಿವ್ಯವಾದ ಹಂತವಾಗಿದೆ. ಶೀಘ್ರದಲ್ಲಿ ಪುಟ್ಟ ಮಗುವಿನ ಆಗಮನವಾಗಲಿದ್ದು, ಮಗುವನ್ನು ಹರಸಿ, ಜೈ ಆಂಜನೇಯ'' ಎಂದಿದ್ದಾರೆ ಧ್ರುವ ಸರ್ಜಾ.

Dhruva Sarja - Prerana Shankar to become parents soon; announce good news


ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ 2019 ರ ನವೆಂಬರ್‌ ನಲ್ಲಿ ವಿವಾಹವಾದರು. ಈ ಜೋಡಿ ವಿವಾಹವಾದ ಕೆಲವೇ ತಿಂಗಳಲ್ಲಿ ಕೋವಿಡ್ ಬಂತು. ಆ ಬಳಿಕ ಧ್ರುವ ಸರ್ಜಾರ ಸಹೋದರ ಚಿರಂಜೀವಿ ಸರ್ಜಾ ನಿಧನ ಹೊಂದಿದರು. ಆ ನಂತರ ಚಿರಂಜೀವಿ ಸರ್ಜಾರ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದರು. ಇದೀಗ ಪ್ರೇರಣಾ ಮಗುವಿಗೆ ಜನ್ಮ ನೀಡಲು ತಯಾರಾಗಿದ್ದಾರೆ.

ಧ್ರುವ ಸರ್ಜಾರ ಅತ್ತಿಗೆ ಮೇಘನಾ ರಾಜ್ 2020ರ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಣ್ಣನ ಮಗನನ್ನು ಅದ್ಧೂರಿಯಾಗಿ ಧ್ರುವ ಸರ್ಜಾ ಸ್ವಾಗತಿಸಿದ್ದರು. ದುಬಾರಿ ತೊಟ್ಟಿಲು ಅವನಿಗಾಗಿ ಉಡುಗೊರೆ ನೀಡಿದ್ದರು. ಇದೀಗ ಸ್ವಂತ ಮಗುವನ್ನು ಸ್ವಾಗತಿಸಲು ಧ್ರುವ ಸರ್ಜಾ ತಯಾರಾಗಿದ್ದಾರೆ.

ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಆ ಸಿನಿಮಾದ ಬಳಿಕ ಪ್ರೇಮ್ ಜೊತೆಗಿನ ಸಿನಿಮಾಕ್ಕೆ ಧ್ರುವ ಸರ್ಜಾ ಬಣ್ಣ ಹಚ್ಚಲಿದ್ದಾರೆ.

More from Filmibeat

English summary
Dhruva Sarja - Prerana Shankar to become parents soon; announce good news. Both married in 2019, November.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X