For Quick Alerts
  ALLOW NOTIFICATIONS  
  For Daily Alerts

  ಸರ್ಜಾ ಕುಟುಂಬಕ್ಕೆ ಬರಲಿರುವ ಹೊಸ ಸದಸ್ಯ: ಸಂತಸದ ವಿಷಯ ಹಂಚಿಕೊಂಡ ಧ್ರುವ ಸರ್ಜಾ

  |

  ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ. ನಟ ಧ್ರುವ ಸರ್ಜಾ ಶೀಘ್ರದಲ್ಲಿಯೇ ತಂದೆಯಾಗಲಿದ್ದಾರೆ.

  ಧ್ರುವ ಸರ್ಜಾ ಪತ್ನಿ ಗರ್ಭಿಣಿಯಾಗಿದ್ದು, ಗರ್ಭಿಣಿ ಪತ್ನಿಯೊಡನೆ ಧ್ರುವ ಸರ್ಜಾ ಫೊಟೊಶೂಟ್ ಮಾಡಿಸಿಕೊಂಡಿದ್ದು, ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಗರ್ಭಿಣಿ ಪತ್ನಿ ಪ್ರೇರಣಾ ಜೊತೆಗೆ ಮಗುವಿನ ಅಲ್ಟ್ರಾ ಸೌಂಡ್‌ ಚಿತ್ರವನ್ನು ಹಿಡಿದು ಕಾಣಿಸಿಕೊಂಡಿದ್ದಾರೆ ಧ್ರುವ ಸರ್ಜಾ.

  ಪತ್ನಿಯೊಟ್ಟಿಗಿನ ಚಿತ್ರಗಳನ್ನು ಕೊಲ್ಯಾಜ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ಧ್ರುವ ಸರ್ಜಾ, ''ಜೀವನದ ಹೊಸ ಹಂತಕ್ಕೆ ಹೋಗುತ್ತಿದ್ದೇವೆ. ಈ ಹಂತ ಬಹಳ ದಿವ್ಯವಾದ ಹಂತವಾಗಿದೆ. ಶೀಘ್ರದಲ್ಲಿ ಪುಟ್ಟ ಮಗುವಿನ ಆಗಮನವಾಗಲಿದ್ದು, ಮಗುವನ್ನು ಹರಸಿ, ಜೈ ಆಂಜನೇಯ'' ಎಂದಿದ್ದಾರೆ ಧ್ರುವ ಸರ್ಜಾ.  ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ 2019 ರ ನವೆಂಬರ್‌ ನಲ್ಲಿ ವಿವಾಹವಾದರು. ಈ ಜೋಡಿ ವಿವಾಹವಾದ ಕೆಲವೇ ತಿಂಗಳಲ್ಲಿ ಕೋವಿಡ್ ಬಂತು. ಆ ಬಳಿಕ ಧ್ರುವ ಸರ್ಜಾರ ಸಹೋದರ ಚಿರಂಜೀವಿ ಸರ್ಜಾ ನಿಧನ ಹೊಂದಿದರು. ಆ ನಂತರ ಚಿರಂಜೀವಿ ಸರ್ಜಾರ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದರು. ಇದೀಗ ಪ್ರೇರಣಾ ಮಗುವಿಗೆ ಜನ್ಮ ನೀಡಲು ತಯಾರಾಗಿದ್ದಾರೆ.

  ಧ್ರುವ ಸರ್ಜಾರ ಅತ್ತಿಗೆ ಮೇಘನಾ ರಾಜ್ 2020ರ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಣ್ಣನ ಮಗನನ್ನು ಅದ್ಧೂರಿಯಾಗಿ ಧ್ರುವ ಸರ್ಜಾ ಸ್ವಾಗತಿಸಿದ್ದರು. ದುಬಾರಿ ತೊಟ್ಟಿಲು ಅವನಿಗಾಗಿ ಉಡುಗೊರೆ ನೀಡಿದ್ದರು. ಇದೀಗ ಸ್ವಂತ ಮಗುವನ್ನು ಸ್ವಾಗತಿಸಲು ಧ್ರುವ ಸರ್ಜಾ ತಯಾರಾಗಿದ್ದಾರೆ.

  ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಆ ಸಿನಿಮಾದ ಬಳಿಕ ಪ್ರೇಮ್ ಜೊತೆಗಿನ ಸಿನಿಮಾಕ್ಕೆ ಧ್ರುವ ಸರ್ಜಾ ಬಣ್ಣ ಹಚ್ಚಲಿದ್ದಾರೆ.

  English summary
  Dhruva Sarja - Prerana Shankar to become parents soon; announce good news. Both married in 2019, November.
  Saturday, September 3, 2022, 15:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X