ನಾಲ್ಕು ನಿಮಿಷಕ್ಕಾಗಿ ಧ್ರುವ ಸರ್ಜಾ ತೆಗೆದುಕೊಂಡು ರಿಸ್ಕ್ ತುಂಬಾ ದೊಡ್ಡದು

By Pavithra

ಸ್ಯಾಂಡಲ್ ವುಡ್ ನ 'ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್' ಅಂತ ಫೇಮಸ್ ಆಗಿರುವ ನಟ ಧ್ರುವ ಸರ್ಜಾ ಸದ್ಯ ಕನ್ನಡದ ಯಂಗ್ ಸ್ಟಾರ್. ನಿನ್ನೆಯಷ್ಟೇ (ಡಿಸೆಂಬರ್ 19) ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಶತದಿನೋತ್ಸವ ಪೂರೈಸಿದೆ. ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಭರ್ಜರಿ' ಚಿತ್ರವನ್ನ ಮೆಚ್ಚಿಕೊಂಡಿದ್ದರು.

ಭರ್ಜರಿ ಶತದಿನೋತ್ಸವ ಪೂರೈಸುವ ಮುಂಚೆಯೇ ಧ್ರುವ ಸರ್ಜಾ ನಂದಕಿಶೋರ್ ನಿರ್ದೇಶನದ 'ಪೂಗರು' ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ. ಚಿತ್ರದ ಮಹೂರ್ತ ಈಗಾಗಲೇ ನಡೆದಿದ್ದು ಚಿತ್ರೀಕರಣ ಪ್ರಾರಂಭ ಮಾಡಲು ನಂದಕಿಶೋರ್ ಮತ್ತು ಚಿತ್ರತಂಡ ಪ್ಲಾನ್ ಮಾಡುತ್ತಿದೆ.

'ಪೂಗರು' ಚಿತ್ರದ ಪಾತ್ರಕ್ಕಾಗಿ ಧ್ರುವ ಸರ್ಜಾ ತೆಳ್ಳಗೆ ಆಗಿರುವ ವಿಚಾರ ಈಗ ಹಳೆಯದು. ಆದರೆ ಧ್ರುವ ಇಡೀ ಸಿನಿಮಾ ಶಾಲೆ ಹುಡುಗನಾಗಿಯೇ ಕಾಣಿಸಿಕೊಳ್ಳುತ್ತಾರಾ? ಚಿತ್ರದಲ್ಲೇ ಮತ್ತೊಂದು ಲುಕ್ ಇರುತ್ತಾ ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಮುಂದೆ ಓದಿ

ನಾಲ್ಕು ನಿಮಿಷಕ್ಕೆ 30 ಕೆ ಜಿ

ನಾಲ್ಕು ನಿಮಿಷಕ್ಕೆ 30 ಕೆ ಜಿ

'ಪೂಗರು' ಸಿನಿಮಾದಲ್ಲಿ ಧ್ರುವ ಸರ್ಜಾ ಶಾಲೆಗೆ ಹೋಗುವ ಹುಡುಗನಾಗಿ ಕಾಣಿಸಿಕೊಳ್ಳುತ್ತಾರೆ, ಅದಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ಇದಕ್ಕಾಗಿ ಧ್ರುವ ತೆಗೆದುಕೊಂಡಿರೋ ರಿಸ್ಕ್ ತುಂಬಾ ದೊಡ್ಡದು. ನಾಲ್ಕು ನಿಮಿಷ ಬಂದು ಹೋಗುವ ಪಾತ್ರಕ್ಕಾಗಿ ಮೂವತ್ತು ಕೆ ಜಿ ಇಳಿಸಿಕೊಂಡಿದ್ದಾರೆ.

ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಹೊಸ ಲುಕ್

ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಹೊಸ ಲುಕ್

ಧ್ರುವ ಸರ್ಜಾ ಅವರ ಫಿಟ್ನೆಸ್ ಮತ್ತು ಅವರ ಬಾಡಿ ಬಿಲ್ಡಿಂಗ್ ನೋಡಿ ಅದೆಷ್ಟೋ ಅಭಿಮಾನಿಗಳು ಹುಟ್ಟುಕೊಂಡಿದ್ದರು. ಆದರೆ ಧ್ರುವ 'ಪೂಗರು' ಸಿನಿಮಾಗಾಗಿ ತೂಕ ಇಳಿಸಿಕೊಂಡಿರುವುದು ಕೆಲವು ಫ್ಯಾನ್ಸ್ ಗಳಿಗೆ ಇಷ್ಟವಾಗಿಲ್ಲ. ಸಿನಿಮಾ ಪೂರ್ತಿ ಹೀಗೆ ಇದ್ದರೆ ಹೇಗೆ ಎಂದು ಕೇಳುತ್ತಿದ್ದವರಿಗೆ ಸಿಹಿ ಸುದ್ದಿ ಇದೆ. ಧ್ರುವ ಸರ್ಜಾ ಪೂಗರು ಸಿನಿಮಾದಲ್ಲಿ ಬೇರೆಯದ್ದೇ ಲುಕ್ ನಲ್ಲಿ ಎಂಟ್ರಿ ಕೊಡುತ್ತಾರೆ.

ಮೂರು ಚಿತ್ರಗಳು ನೂರು ದಿನ

ಮೂರು ಚಿತ್ರಗಳು ನೂರು ದಿನ

ಧ್ರುವ ಸರ್ಜಾ ಅಭಿನಯದ 'ಅದ್ದೂರಿ', 'ಬಹದ್ದೂರ್' ಎರಡು ಸಿನಿಮಾಗಳು ನೂರು ದಿನ ಪೂರೈಸಿವೆ. ಈಗ 'ಭರ್ಜರಿ' ಚಿತ್ರ ಕೂಡ ಶತದಿನೋತ್ಸವದ ಸಂಭ್ರಮ ಆಚರಣೆ ಮಾಡುತ್ತಿದೆ. ಧ್ರುವ ಅಭಿನಯಿಸಿದ ಚಿತ್ರಗಳು ನಿರ್ಮಾಪಕರ ಪಾಲಿಗೆ ಚಿನ್ನ ಅನ್ನೋದು ಸಾಬೀತಾಗಿದೆ.

ಸಾಲು ಸಾಲು ಸಿನಿಮಾಗಳಿಗೆ ಬೇಡಿಕೆ

ಸಾಲು ಸಾಲು ಸಿನಿಮಾಗಳಿಗೆ ಬೇಡಿಕೆ

ಧ್ರುವ ಸರ್ಜಾ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಬಹು ಬೇಡಿಕೆಯ ನಟ, ನಂದಕಿಶೋರ್ ನಿರ್ದೆಶನದ ಚಿತ್ರ ಆದ ನಂತರ 'ಉದಯ್ ಕೆ ಮೆಹ್ತಾ' ನಿರ್ಮಾಣದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಾದ ಮೇಲೆ 'ಜಯಣ್ಣ' , 'ಸಿ ಆರ್ ಮನೋಹರ್' ಹಾಗೂ 'ವಿಜಯ ಕಿರಗಂದೂರು' ನಿರ್ಮಾಣದ ಸಿನಿಮಾಗಳಲ್ಲಿ ಧ್ರುವ ಬ್ಯುಸಿ ಆಗಲಿದ್ದಾರೆ.

More from Filmibeat

English summary
Kannada Actor Dhruv Sarja has loss his Weight 30 kg for role in the pogaru film. he reduced the weight of 30 kg to just four minutes scene .Nandakishore is directing pogaru kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X