»   »  'ಹ್ಯಾಟ್ರಿಕ್ ಹೀರೋ' ಬಿರುದು ಶಿವಣ್ಣನಿಗೆ ಮಾತ್ರ ಸೀಮಿತ.!

'ಹ್ಯಾಟ್ರಿಕ್ ಹೀರೋ' ಬಿರುದು ಶಿವಣ್ಣನಿಗೆ ಮಾತ್ರ ಸೀಮಿತ.!

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮೂರನೇ ಸಿನಿಮಾ 'ಭರ್ಜರಿ' ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. 'ಅದ್ಧೂರಿ', 'ಬಹುದ್ದೂರ್' ನಂತರ 'ಭರ್ಜರಿ' ಸಿನಿಮಾದ ಮೂಲಕ ಹ್ಯಾಟ್ರಿಕ್ ಜಯ ಕಂಡಿದ್ದಾರೆ ನಟ ಧ್ರುವ ಸರ್ಜಾ.

ಇದೇ ಸಂತಸದಲ್ಲಿ ಧ್ರುವ ಸರ್ಜಾ ಅವರ ಅಭಿಮಾನಿಗಳು ಧ್ರುವ ಅವರಿಗೆ 'ಹ್ಯಾಟ್ರಿಕ್ ಹೀರೋ' ಎಂದು ಹೊಸ ಬಿರುದು ನೀಡಲು ಅಣಿಯಾಗಿದ್ದಾರೆ. ಇದನ್ನ ಗಮನಿಸಿದ ಶಿವಣ್ಣನ ಅಭಿಮಾನಿಗಳು 'ಹ್ಯಾಟ್ರಿಕ್ ಹೀರೋ' ಯಾವತ್ತಿದ್ರೂ ಶಿವರಾಜ್ ಕುಮಾರ್ ಮಾತ್ರ ಎಂದಿದ್ದಾರೆ.

ಈ ಮಧ್ಯೆ ನಟ ಧ್ರುವ ಸರ್ಜಾ ಕೂಡ 'ಹ್ಯಾಟ್ರಿಕ್ ಹೀರೋ' ಟೈಟಲ್ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ರೆ, ಧ್ರುವ ಸರ್ಜಾ ಏನಂದ್ರು? ಮುಂದೆ ಓದಿ....

ಕನ್ನಡಕ್ಕೆ ಒಬ್ರೆ 'ಹ್ಯಾಟ್ರಿಕ್ ಹೀರೋ'

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನ 'ಹ್ಯಾಟ್ರಿಕ್ ಹೀರೋ' ಎಂದು ಕರೆಯಲಾಗುತ್ತಿದೆ. ಆದ್ರೀಗ, ಸತತ ಮೂರು ಹಿಟ್ ಸಿನಿಮಾಗಳನ್ನ ನೀಡಿರುವ ಧ್ರುವ ಸರ್ಜಾ ಅವರನ್ನ ಕೂಡ ಅವರ ಅಭಿಮಾನಿಗಳು 'ಹ್ಯಾಟ್ರಿಕ್ ಹೀರೋ' ಎಂದು ಸಂಬೋಧಿಸುತ್ತಿದ್ದಾರೆ. ಇದನ್ನ ಧ್ರುವ ನಿರಾಕರಿಸಿದ್ದಾರೆ.

ಧ್ರುವ ಸರ್ಜಾ ಹೊಡೆದ ಈ ಡೈಲಾಗ್ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ?

ಆ ಬಿರುದು ಶಿವಣ್ಣನಿಗೆ ಮೀಸಲು

ಕನ್ನಡಕ್ಕೆ ಒಬ್ರೆ 'ಹ್ಯಾಟ್ರಿಕ್ ಹೀರೋ' ಅದು, ಡಾ ಶಿವರಾಜ್ ಕುಮಾರ್ ಮಾತ್ರ ಎಂದು ಸ್ವತಃ 'ಭರ್ಜರಿ' ನಟ ಧ್ರುವ ಸರ್ಜಾ ಅವರು ಹೇಳಿದ್ದಾರೆ. ಭರ್ಜರಿ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಧ್ರುವ ಅವರ ಧ್ವನಿಯಾಗಿ, ನಿರ್ದೇಶಕ ಚೇತನ್ ಕುಮಾರ್ ಈ ಬಗ್ಗೆ ಹೇಳಿದ್ರು.

'ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್' ಧ್ರುವ

'ಹ್ಯಾಟ್ರಿಕ್ ಹೀರೋ' ಎಂದು ಶಿವರಾಜ್ ಕುಮಾರ್ ಅವರನ್ನ ಕರೆಯಿರಿ. ನನ್ನನ್ನ ಬೇಕಾದ್ರೆ, 'ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್' ಎಂದು ಕರೆಯಬಹುದು ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದರು.

'ಭರ್ಜರಿ' ಗೆದ್ರೂ, ಧ್ರುವ ಸರ್ಜಾ ಬೇಸರ ಆಗಿರುವುದೇಕೆ?

ನಾಲ್ಕನೇ ಸಿನಿಮಾ 'ಪೊಗರು'

ಮೂರು ಸ್ವಮೇಕ್ ಚಿತ್ರಗಳ ಮೂಲಕ ಅಭಿಮಾನಿಗಳನ್ನ ರಂಜಿಸಿದ ಧ್ರುವ ಸರ್ಜಾ, ಈಗ ನಾಲ್ಕನೇ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಹೆಸರು 'ಪೊಗರು'. ನಿರ್ದೇಶಕ ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಬಾಕ್ಸ್ ಅಫೀಸ್ ನಲ್ಲಿ 'ಭರ್ಜರಿ' ಸೌಂಡು: ಕಲೆಕ್ಷನ್ ಸೂಪರ್ರೋ ಸೂಪರ್ರು.!

English summary
Bharjari Actor Dhruva sarja rejects Hattrick Hero title.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada