For Quick Alerts
  ALLOW NOTIFICATIONS  
  For Daily Alerts

  ನಿನ್ನ ಬಿಟ್ಟು ಇರಲಾರೆ: ಅಣ್ಣ ಚಿರಂಜೀವಿ ಸರ್ಜಾನ ನೆನೆದ ಧ್ರುವ ಸರ್ಜಾ

  |

  ಚಿರಂಜೀವಿ ಸರ್ಜಾ ಅಗಲಿ ಒಂದು ವರ್ಷವಾಗಿದೆ. ಆದರೆ ಅವರ ನೆನಪು ಮಾಸಿಲ್ಲ. ಚಿರು ಸರ್ಜಾ ಅವರ ಅಭಿಮಾನಿಗಳಿಗೆ, ಸ್ನೇಹಿತರಿಗೆ ಎಷ್ಟು ದೊಡ್ಡ ಆಘಾತವೋ ಅದಕ್ಕಿಂತಲೂ ನೂರು ಪಟ್ಟು ಹೆಚ್ಚು ಆಘಾತವಾಗಿದೆ ಅವರ ಕುಟುಂಬದವರಿಗೆ.

  ನಟ ಧ್ರುವ ಸರ್ಜಾಗೆ ಅಣ್ಣನೆಂದರೆ ಜೀವ. ಅಣ್ಣ ತೀರಿಹೋಗಿ ವರ್ಷಕ್ಕೂ ಹೆಚ್ಚು ಸಮಯವಾಗಿದೆಯಾದರೂ ಇನ್ನೂ ಅಣ್ಣನ ನೆನಪಿನಿಂದ ಹೊರಗೆ ಬಂದಿಲ್ಲ ಧ್ರುವ.

  ನಿನ್ನೆ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಧ್ರುವ ಸರ್ಜಾ, 'ಅಣ್ಣ ನಿನ್ನ ಬಿಟ್ಟು ಬದುಕುವು ಕಷ್ಟವಾಗುತ್ತಿದೆ' ಎಂದು ಪೋಸ್ಟ್ ಹಾಕಿದ್ದರು. ''ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಚಿರು'' ಎಂದು ಧ್ರುವ ಹೇಳಿದ್ದಾರೆ.

  ಜೊತೆಗೆ ಚಿರುವಿನ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ ಧ್ರುವ ಸರ್ಜಾ. ವಿಡಿಯೋದಲ್ಲಿ ಚಿರು ಸರ್ಜಾನ ಸಣ್ಣ ವಯಸ್ಸಿನ ಚಿತ್ರಗಳು ಇವೆ. ಜೊತೆಗೆ ಚಿರು ಹಾಗೂ ಧ್ರುವ ಬಾಂಧವ್ಯಕ್ಕೆ ಸಾಕ್ಷಿಯಾದ ಕೆಲವು ಸನ್ನಿವೇಶಗಳು ಸಹ ಇವೆ. ಪರಸ್ಪರ ಊಟ ಮಾಡಿಸುತ್ತಿರುವ ವಿಡಿಯೋ, ಒಟ್ಟಿಗೆ ಆಟವಾಡುತ್ತಿರುವ ವಿಡಿಯೋ, ಧ್ರುವನ ತಲೆಗೆ ಚಿರು ಎಣ್ಣೆ ಹಚ್ಚಿ ಮಾಲಿಷ್ ಮಾಡುತ್ತಿರುವ ವಿಡಿಯೋ ಇನ್ನೂ ಹಲವು ವಿಡಿಯೋಗಳನ್ನು ಕೊಲ್ಯಾಜ್ ಮಾಡಿ ಒಳ್ಳೆಯ ಹಿನ್ನೆಲೆ ಸಂಗೀತದೊಂದಿಗೆ ಹಂಚಿಕೊಂಡಿದ್ದಾರೆ ಧ್ರುವ ಸರ್ಜಾ.

  ಚಿರಂಜೀವಿ ಸರ್ಜಾ 2020, ಜೂನ್ 7 ರಂದು ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಚಿರು ಸರ್ಜಾ ನಿಧನದ ವೇಳೆಗೆ ಪತ್ನಿ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ನಂತರ ಅವರು ಅಕ್ಟೋಬರ್ 22 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದರು.

  ಮೇಘನಾ-ಚಿರುವಿನ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ಮೇಘನಾ ರಾಜ್ ಹಾಗೂ ಚಿರು ಸರ್ಜಾ ಕುಟುಂಬದವರು ಸೇರಿ ನಾಮಕರಣ ಮಾಡಿದ್ದಾರೆ. ನಾಮಕರಣ ಸಂದರ್ಭದಲ್ಲಿಯೂ ಮೇಘನಾ ರಾಜ್, ಧ್ರುವ ಸರ್ಜಾ, ಸುಂದರ್ ರಾಜ್ ಇನ್ನೂ ಹಲವರು ಚಿರು ಸರ್ಜಾ ಅನ್ನು ನೆನಪಿಸಿಕೊಂಡರು.

  English summary
  Actor Dhruva Sarja remembered Chiranjeevi Sarja and posted a video on Instagram. Dhruva said not able be without you.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X