For Quick Alerts
  ALLOW NOTIFICATIONS  
  For Daily Alerts

  ಧ್ರುವ 'ಪೊಗರು' ಚಿತ್ರದಲ್ಲಿ ರೆಬೆಲ್ ಸ್ಟಾರ್ ಗೆ ವಿಶೇಷ ಸ್ಥಾನ

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈ ಚಿತ್ರದಲ್ಲಿ ಧ್ರುವ ಎರಡು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

  ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರದಲ್ಲಿ ಈಗ ಅಂಬರೀಶ್ ಅಭಿಮಾನಿಗಳು ಖುಷಿ ಕೊಡುವ ಅಂಶವೊಂದಿದೆ. ಹೌದು, ಪೊಗರು ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬಿ ನೆನಪು ಮಾಡುವಂತಹ ದೃಶ್ಯ ಒಂದಿದೆ.

  ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್.! ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್.!

  ಪೊಗರು ದೃಶ್ಯವೊಂದರಲ್ಲಿ ಅಂಬರೀಶ್ ಪುತ್ಥಳಿ ಕೂಡ ಇರಲಿದ್ದು, ಆ ಪುತ್ಥಳಿ ಜೊತೆ ಧ್ರುವ ಸರ್ಜಾ ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಂಬರೀಶ್ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ.

  ಧ್ರುವ ಸರ್ಜಾ ಮತ್ತು ಪ್ರೇರಣ ನಿಶ್ಚಿತಾರ್ಥದಲ್ಲಿ ಕಂಡು ಬಂದ ವಿಶೇಷಗಳು ಧ್ರುವ ಸರ್ಜಾ ಮತ್ತು ಪ್ರೇರಣ ನಿಶ್ಚಿತಾರ್ಥದಲ್ಲಿ ಕಂಡು ಬಂದ ವಿಶೇಷಗಳು

  ''"ಡಾ॥ ಅಂಬರೀಶ್" ಸರ್ ಅವರ ಪುತ್ಥಳಿ ಜೊತೆ "ಪೊಗರು" ಈ ಹಿಂದೆ "ಪೊಗರು" ಚಿತ್ರೀಕರಣದ ಸ್ಥಳಕ್ಕೆ "ಅಂಬರೀಶ್ ಮಾಮ" ಬಂದು ಆಶೀರ್ವದಿಸಿ, ಬೆಂಬಲಿಸಿದರು,.... ಈಗಲೂ "ಅಂಬರೀಷ್ ಮಾಮ" ಬಂದಿದ್ದಾರೆ ಎಂದು ನನಗೆ ಭಾಸವಾಗುತ್ತಿದೆ,.. "ಅಂಬರೀಷ್ ಮಾಮ" ಎಲ್ಲೂ ಹೋಗಿಲ್ಲ ಸದಾಕಾಲ ಜೊತೆ ಇದ್ದಾರೆ ಮಿಸ್ ಯು "ಕನ್ವರ್ ಲಾಲಾ" ಜೈ ಆಂಜನೇಯ'' ಎಂದಿದ್ದಾರೆ.

  ಇನ್ನುಳಿದಂತೆ ಹೈದ್ರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಪೊಗರು ಶೂಟಿಂಗ್ ನಡೆಯುತ್ತಿದ್ದು, ಈ ವರ್ಷದಲ್ಲೇ ಸಿನಿಮಾ ತೆರೆಗೆ ಬರಲಿದೆ. ನಂದ ಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ.

  English summary
  Nanda Kishore, Dhruva Sarja to pay tribute to Ambareesh in Pogaru In a fight sequence, Dhruva will stand next to a ‘statue’ of Ambareesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X