twitter
    For Quick Alerts
    ALLOW NOTIFICATIONS  
    For Daily Alerts

    ಮೇಘನಾ ರಾಜ್ 'ಸೀಮಂತ' ಬೆನ್ನಲ್ಲೆ ಅಭಿಮಾನಿಗಳಲ್ಲಿ ವಿನಂತಿ ಮಾಡಿದ ಧ್ರುವ ಸರ್ಜಾ

    |

    ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಸರ್ಜಾ ಕುಟುಂಬದಲ್ಲಿ ಇತ್ತೀಚಿಗಷ್ಟೆ ಸಂಭ್ರಮ ನಡೆದಿತ್ತು. ಭಾನುವಾರ ಚಿರು ಪತ್ನಿ ಮೇಘನಾ ರಾಜ್ ಅವರ 'ಸೀಮಂತ' ಕಾರ್ಯಕ್ರಮ ಮಾಡಲಾಗಿತ್ತು. ಈ ಸಡಗರದಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು.

    Recommended Video

    ಅತ್ತಿಗೆ ಸೀಮಂತ ಮುಗಿಸಿದ ದೊಡ್ಡ ಮನವಿಯೊಂದನ್ನು ಮಾಡಿಕೊಂಡ Dhruva Sarja | Filmibeat Kannada

    ಇದೀಗ, ನಟ ಧ್ರು ಸರ್ಜಾ ತಮ್ಮ ಅಭಿಮಾನಿಗಳಲ್ಲಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ಅಕ್ಟೋಬರ್ 6 ರಂದು ಧ್ರುವ ಅವರ ಹುಟ್ಟುಹಬ್ಬವಿದ್ದು, ತಮ್ಮ ನೆಚ್ಚಿನ ನಟನ ಜನುಮದಿನಕ್ಕೆ ಶುಭಕೋರಲು ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಮನೆ ಬಳಿ ಜಮಾಯಿಸುವ ಸಾಧ್ಯತೆ ಇದೆ. ಹಾಗಾಗಿ, ಒಂದು ದಿನ ಮುಂಚಿತವಾಗಿಯೇ ಧ್ರುವ ಸರ್ಜಾ ಅಭಿಮಾನಿಗಳಿಗೆ ''ದಯವಿಟ್ಟು ನೀವು ಇದ್ದ ಕಡೆಯಿಂದ ಶುಭಹಾರೈಸಿ'' ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ...

    ಅಭಿಮಾನಿಗಳೇ ನಮ್ ಅನ್ನದಾತರು

    ಅಭಿಮಾನಿಗಳೇ ನಮ್ ಅನ್ನದಾತರು

    ''ಅಭಿಮಾನಿಗಳೇ ನಮ್ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ'' ಎಂದು ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ.

    ತಿಂಗಳ ಬಳಿಕ ಚಿತ್ರೀಕರಣಕ್ಕೆ ಹೊರಟ ಧ್ರುವ ಸರ್ಜಾ: ದುಬಾರಿ ಸೆಟ್ ನಲ್ಲಿ 'ಪೊಗರು' ಟೈಟಲ್ ಸಾಂಗ್ ಶೂಟಿಂಗ್ತಿಂಗಳ ಬಳಿಕ ಚಿತ್ರೀಕರಣಕ್ಕೆ ಹೊರಟ ಧ್ರುವ ಸರ್ಜಾ: ದುಬಾರಿ ಸೆಟ್ ನಲ್ಲಿ 'ಪೊಗರು' ಟೈಟಲ್ ಸಾಂಗ್ ಶೂಟಿಂಗ್

    ನೀವು ಇದ್ದ ಕಡೆಯಿಂದಲೇ ಹಾರೈಸಿದ್ದಾರೆ

    ನೀವು ಇದ್ದ ಕಡೆಯಿಂದಲೇ ಹಾರೈಸಿದ್ದಾರೆ

    ''ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ'' ಎಂದು ಧ್ರುವ ಸರ್ಜಾ ವಿನಂತಿಸಿಕೊಂಡಿದ್ದಾರೆ. ಧ್ರುವ ಅವರ ವಿನಂತಿಯನ್ನು ಅಭಿಮಾನಿಗಳು ಸಹ ಸ್ವಾಗತಿಸಿದ್ದಾರೆ.

    ಚಿರು ಸರ್ಜಾ ಇಲ್ಲದ ನೋವು

    ಚಿರು ಸರ್ಜಾ ಇಲ್ಲದ ನೋವು

    ಧ್ರುವ ಸರ್ಜಾ ಅವರ ಸಹೋದರ ಚಿರಂಜೀವಿ ಸರ್ಜಾ ಜೂನ್ 7 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸ್ಟಾರ್ ನಟನ ಅಕಾಲಿಕ ಸಾವು ಇಡೀ ಕುಟುಂಬ ಹಾಗೂ ಇಂಡಸ್ಟ್ರಿಗೆ ನೋವು ತಂದಿತ್ತು. ಇನ್ನೂ ಈ ನೋವಿನಿಂದ ಹೊರಬಾರದ ಧ್ರುವ ಸರ್ಜಾ ಈ ಸಮಯದಲ್ಲಿ ಹುಟ್ಟುಹಬ್ಬ ಆಚರಿಸುವುದು ಸೂಕ್ತವಲ್ಲ ಎಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ.

    ಮತ್ತೆ ವರ್ಕೌಟ್ ಶುರು: ಸಹಜ ಜೀವನಕ್ಕೆ ಮರಳಿದ ನಟ ಧ್ರುವ ಸರ್ಜಾಮತ್ತೆ ವರ್ಕೌಟ್ ಶುರು: ಸಹಜ ಜೀವನಕ್ಕೆ ಮರಳಿದ ನಟ ಧ್ರುವ ಸರ್ಜಾ

    ಕೊರೊನಾ ಹಾವಳಿಯೂ ಕಮ್ಮಿ ಆಗಿಲ್ಲ

    ಕೊರೊನಾ ಹಾವಳಿಯೂ ಕಮ್ಮಿ ಆಗಿಲ್ಲ

    ಈ ನಡುವೆ ಕೊರೊನಾ ವೈರಸ್ ಭೀತಿ ಸಹ ಕಡಿಮೆ ಆಗಿಲ್ಲ. ಹುಟ್ಟುಹಬ್ಬದ ಕಾರಣಕ್ಕಾಗಿ ಮನೆ ಬಳಿ ಅಭಿಮಾನಿಗಳು ಜಮಾಯಿಸಿದರೆ, ಅವರನ್ನು ನಿಯಂತ್ರಿಸುವುದು ಕಷ್ಟ. ಹೀಗಾಗಿ, ಈ ವರ್ಷ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಇದ್ದಲ್ಲಿಯಿಂದಲೇ ಶುಭ ಕೋರುವುದು ಉತ್ತಮ.

    English summary
    Kannada actor Dhruva Sarja requests fans not to gather at his house to celebrate birthday on october 6th.
    Monday, October 5, 2020, 15:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X