For Quick Alerts
  ALLOW NOTIFICATIONS  
  For Daily Alerts

  'ನಾನೇನು ಸೆಲೆಬ್ರಿಟಿ ಅಲ್ಲ..' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇಕೆ ನಟ ಧ್ರುವ ಸರ್ಜಾ

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾನೇನು ಸೆಲೆಬ್ರಿಟಿ ಅಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಧ್ರುವ ಸರ್ಜಾ ದಿಢೀರ್ ಅಂತ ಹೀಗೆ ಹೇಳಿದ್ದೇಕೆ ಅಂತ ಅಚ್ಚರಿಯಾಗುತ್ತಿದ್ದೆಯಾ?. ಧ್ರುವ ಸರ್ಜಾ ಹುಟ್ಟುಹಬ್ಬ ಸಮೀಪಿಸುತ್ತಿದೆ. ಈಗಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ.

  ಅಂದಹಾಗೆ ಧ್ರುವ ಸರ್ಜಾ ಅಕ್ಟೋಬರ್ 6ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಆದರೆ ಧ್ರುವ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ ಧ್ರುವ ಕಳೆದ ವರ್ಷವೂ ಅದ್ದೂರಿ ಆಚರಣೆಯಿಂದ ದೂರ ಉಳಿದಿದ್ದ ಧ್ರುವ ಸರ್ಜಾ ಈ ಬಾರಿಯೂ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

  ಕಳೆದ ವರ್ಷ ಅಣ್ಣನ ಅಗಲಿಕೆಯ ನೋವಿನಲ್ಲಿದ್ದ ಧ್ರುವ ಯಾವುದೇ ಸಂಭ್ರಮದಲ್ಲಿ ಭಾಗಿಯಾಗುತ್ತಿರಲಿಲ್ಲ. ಅಲ್ಲದೆ ಕೊರೊನಾ ಹಾವಳಿ ಕೂಡ ಹೆಚ್ಚಾಗಿರುವುದರಿಂದ ಅಭಿಮಾನಿಗಳು ಒಟ್ಟಿಗೆ ಸೇರುವಹಾಗಿಲ್ಲ. ಹಾಗಾಗಿ ಸ್ಟಾರ್ ಕಲಾವಿದರು ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಇದೀಗ ಧ್ರುವ ಸರ್ಜಾ ಕೂಡ ಜನ್ಮದಿನವನ್ನು ಅಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.


  ಈ ಬಗ್ಗೆ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. "ಅಕ್ಟೋಬರ್ 6ನೇ ತಾರೀಕು ನನ್ನ ಜನ್ಮದಿನ. ನಾನೇನು ದೊಡ್ಡ ಸೆಲೆಬ್ರಿಟಿ ಅಲ್ಲ. ಆದರೂ ನನ್ನ ವಿಐಪಿಗಳಿಗೆ ಒಂದು ವಿನಂತಿ ಏನೆಂದರೆ, 6ರಂದು ಸೆಲೆಬ್ರೇಷನ್ ನ ಸೆಲೆಬ್ರೇಟ್ ಮಾಡುವ ಮನಸು ನನಗಿಲ್ಲ. ಎಲ್ಲರಿಗೂ ಅರ್ಥ ಆಗುತ್ತೆ ಅಂತ ಅನಿಸುತ್ತೆ" ಎಂದು ಹೇಳಿದ್ದಾರೆ.

  "ಎರಡು ದೊಡ್ಡ ಕಾರಣವೆಂದರೆ ಒಂದು, ಕೋವಿಡ್ , ಮತ್ತೊಂದು ನಾನು ಊರಲ್ಲಿ ಇರಲ್ಲ. ಶೂಟಿಂಗಾಗಿ ವೈಜಾಗ್ ನಲ್ಲಿರುತ್ತೇನೆ. ಪ್ರತಿವರ್ಷ ಹೇಗೆ ನಮ್ಮನೆ ಹುಡುಗ ಅಂತ ನನ್ನ ಎಲ್ಲಾ ಅಣ್ಣ ತಮ್ಮಂದಿರು, ಅಕ್ಕ-ತಂಗಿಯರು, ತಾಯಂದಿರು ಹೇಗೆ ಆಶೀರ್ವಾದ ಮಾಡುತ್ತಿದ್ದಿರೊ ಈ ಬಾರಿಯೂ ನನ್ನ ಹುಟ್ಟುಹಬ್ಬಕ್ಕೆ ಆಶೀರ್ವಾದ ಮಾಡಿ" ಎಂದು ಧ್ರುವ ಸರ್ಜಾ ವಿಡಿಯೋ ಮೂಲಕ ಹೇಳಿದ್ದಾರೆ.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಧ್ರುವ ಸರ್ಜಾ ಸದ್ಯ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾರ್ಟಿನ್ ಚಿತ್ರದಲ್ಲಿ ಕಾಲೇಜ್ ಲವ್ ಸ್ಟೋರಿ ಜೊತೆ ಆಕ್ಷನ್ ಮನರಂಜನೆ ನಿರೀಕ್ಷಿಸಬಹುದು. ಧ್ರುವ ಸರ್ಜಾ 'ಗ್ಯಾಂಗ್ ಸ್ಟರ್' ಪಾತ್ರದಲ್ಲಿ ನಟಿಸಲಿದ್ದಾರೆ.

  'ಮಾರ್ಟಿನ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಧ್ರುವ ಸರ್ಜಾ ಜೊತೆ 'ದುಬಾರಿ' ಮಾಡಬೇಕಿದ್ದ ಉದಯ್ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯದ ಲೆಕ್ಕಾಚಾರದಲ್ಲಿ ಡಿಸೆಂಬರ್‌ ವೇಳೆ ಈ ಸಿನಿಮಾ ಮುಗಿಸುವ ಚಿಂತನೆಯಲ್ಲಿದೆ ಚಿತ್ರತಂಡ. ಇನ್ನು ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

  English summary
  Actor Dhruva sarja requests his fans not to not celebrating his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X