"ಸದ್ಯಕ್ಕೆ ನನಗೆ ಎನಿಮೀಸ್ ಜಾಸ್ತಿ": ವೇದಿಕೆ ಮೇಲೆ ಡೈಲಾಗ್ ಹೊಡೆದ ಧ್ರುವ ಸರ್ಜಾ
ಇತ್ತೀಚೆಗೆಷ್ಟೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಬರೋಬ್ಬರಿ 240 ದಿನಗಳ ಕಾಲ ಈ ಚಿತ್ರಕ್ಕಾಗಿ ಚಿತ್ರತಂಡ ಶೂಟಿಂಗ್ ಮಾಡಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಮುಗಿಸಿದ್ದು ಸಾಧ್ಯವಾದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನದಲ್ಲಿದೆ ಚಿತ್ರತಂಡ.
ಆಕ್ಷನ್ ಪ್ರಿನ್ಸ್ ನಟನೆಯ 5ನೇ ಸಿನಿಮಾ 'ಮಾರ್ಟಿನ್'. ಅದ್ಯಾಕೋ ಗೊತ್ತಿಲ್ಲ, ಧ್ರುವ ನಟನೆಯ ಎಲ್ಲಾ ಸಿನಿಮಾಗಳು ಥಿಯೇಟರ್‌ಗೆ ಬರುವುದು ತಡವಾಗಿದೆ. 'ಮಾರ್ಟಿನ್' ಚಿತ್ರದ ವಿಚಾರದಲ್ಲೂ ಇದೇ ಮುಂದುವರೆದಿದೆ. ಚಿತ್ರರಂಗಕ್ಕೆ ಬಂದು 12 ವರ್ಷಗಳಾದರೂ ಈವರೆಗೆ ಧ್ರುವ ನಟಿಸಿರುವ 4 ಸಿನಿಮಾಗಳು ಮಾತ್ರ ತೆರೆಕಂಡಿವೆ. 'ಮಾರ್ಟಿನ್' ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

'ಮಾರ್ಟಿನ್' ಜೊತೆ ಜೊತೆಗೆ ಜೋಗಿ ಪ್ರೇಮ್ ನಿರ್ದೇಶನದ 'KD' ಚಿತ್ರದಲ್ಲೂ ಧ್ರುವ ಸರ್ಜಾ ನಟಿಸಿದ್ದಾರೆ. ಆದರೆ ಮೊದಲಿಗೆ 'ಮಾರ್ಟಿನ್' ತೆರೆಗೆ ಬರುವುದು ಖಚಿತವಾಗಿದೆ. ಇತ್ತೀಚೆಗೆ ಚಿತ್ರೀಕರಣಕ್ಕೆ ಹೋದಾಗ ಹವಾಮಾನ ವೈಪರಿತ್ಯದಿಂದ 'ಮಾರ್ಟಿನ್' ಚಿತ್ರತಂಡ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗುವ ಭಯ ಎದುರಿಸಿದ್ದರು. ತಾಂತ್ರಿಕ ಸಮಸ್ಯೆಯಿಂದ ವಿಮಾನ ನಡುಗಿದ ವಿಡಿಯೋಗಳು ವೈರಲ್ ಆಗಿತ್ತು.
ಅಂದೇ ಚಿತ್ರತಂಡ ಆ ಕಹಿ ಅನುಭವದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿತ್ತು. ಪೈಲೆಟ್ ಕಾರಣದಿಂದ ನಾವೆಲ್ಲಾ ಬದುಕಿ ಬಂದೆವು ಎಂದು ಹೇಳಿಕೊಂಡಿತ್ತು. ಅಂತೂ ಇಂತೂ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ಮುಗಿಸಿ ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ. ಚಿತ್ರದ ಪೋಸ್ಟರ್‌ಗಳು, ಟೀಸರ್ ಹಿಟ್ ಆಗಿ ಗಮನ ಸೆಳೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಾರ್ಟಿನ್' ಆರ್ಭಟ ನಡೆಯಲಿದೆ.
ಧ್ರುವ ಸರ್ಜಾ ಸಿನಿಮಾ ಅಂದ್ರೆ ಮಾಸ್ ಡೈಲಾಗ್‌ಗಳು ಇರಲೇಬೇಕು. ಈಗಾಗಲೇ ಟೀಸರ್‌ನಲ್ಲಿದ್ದ ಒಂದೆರಡು ಡೈಲಾಗ್ ಅಭಿಮಾನಿಗಳ ಮನಗೆದ್ದಿದೆ. ಇದೀಗ ಧ್ರುವ ಸರ್ಜಾ ಮತ್ತೊಂದು ಡೈಲಾಗ್ ರಿವೀಲ್ ಮಾಡಿದ್ದಾರೆ. ಇತ್ತೀಚಿಗೆ ಕೊಪ್ಪಳದಲ್ಲಿ ನಡೆದ ಆನೆಗುಂದಿ ಉತ್ಸವಕ್ಕೆ ಅತಿಥಿಯಾಗಿ ಧ್ರುವ ಸರ್ಜಾ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳ ಬೇಡಿಕೆಯಂತೆ 'ಮಾರ್ಟಿನ್' ಚಿತ್ರದ ಡೈಲಾಗ್ ಹೊಡೆದಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತಿದೆ.

"ಲೈಫ್ ಅಲ್ಲಿ ಸೋತವರ ಜೊತೆ ಫ್ರೆಂಡ್ಸ್ ಜಾಸ್ತಿ ಇರ್ತಾರೆ. ಗೆದ್ದವರ ಹಿಂದೆ ಎನಿಮೀಸ್ ಜಾಸ್ತಿ ಇರ್ತಾರೆ. ಸದ್ಯಕ್ಕೆ ನನಗೆ ಎನಿಮೀಸ್ ಜಾಸ್ತಿ" ಎಂದು ಖಡಕ್ ಆಗಿ ಧ್ರುವ ಡೈಲಾಗ್ ಹೇಳಿದ್ದಾರೆ. ಈ ಜಬರ್ದಸ್ತ್ ಡೈಲಾಗ್ ಕೇಳಿ ಆಕ್ಷನ್ ಪ್ರಿನ್ಸ್ ಫ್ಯಾನ್ಸ್ ಖುಷಿಯಾಗಿದ್ದಾರೆ. 'ಮಾರ್ಟಿನ್' ಚಿತ್ರಕ್ಕೆ ಎ. ಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉದಯ್ ಕೆ. ಮೆಹ್ತಾ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ.
ವೈಭವಿ ಶಾಂಡಿಲ್ಯ 'ಮಾರ್ಟಿನ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅನ್ವೇಷಿ ಜೈನ್, ಸುಕೃತಾ ವಾಗ್ಲೆ, ಚಿಕ್ಕಣ್ಣ, ಸಾಧುಕೋಕಿಲ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. 'ಮಾರ್ಟಿನ್' ಟೀಸರ್ ನೋಡಿ ಪರಭಾಷಿಕರು ಕೂಡ ಮೆಚ್ಚಿಕೊಂಡಿದ್ದರು.
ಛಾಯಾಗ್ರಾಹಕ ಸತ್ಯಾ ಹೆಗಡೆ 'ಮಾರ್ಟಿನ್' ಆರ್ಭಟವನ್ನು ಸೆರೆಹಿಡಿದಿದ್ದಾರೆ. ಮಣಿಶರ್ಮ ಚಿತ್ರದ ಹಾಡುಗಳಿಗೆ ಟ್ಯೂನ್ ಹಾಕಿದ್ದು ರವಿ ಬಸ್ರೂರು ಬ್ಯಾಕ್‌ಗ್ರೌಂಡ್ ಸ್ಕೋರ್ ಚಿತ್ರಕ್ಕಿರಲಿದೆ. ಸಾರೆಗಮ ಆಡಿಯೋ ಸಂಸ್ಥೆ 9 ಕೋಟಿ ರೂ.ಗೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ಅಂದಾಜು 80 ಕೋಟಿ ರೂ. ಬಜೆಟ್‌ನಲ್ಲಿ ಆ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ.


Click it and Unblock the Notifications











