»   » ಧ್ರುವ ಸರ್ಜಾ ಹೊಡೆದ ಈ ಡೈಲಾಗ್ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ?

ಧ್ರುವ ಸರ್ಜಾ ಹೊಡೆದ ಈ ಡೈಲಾಗ್ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ?

Posted By:
Subscribe to Filmibeat Kannada

ಅದ್ಯಾಕೋ... ಏನೋ... ಕನ್ನಡ ಇಂಡಸ್ಟ್ರಿಯಲ್ಲಿ ಡೈಲಾಗ್ ಕಾಂಟ್ರವರ್ಸಿಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ, ಬಿಗ್ ಸ್ಟಾರ್ ಗಳ ಸಿನಿಮಾಗಳಲ್ಲಿ ಇರುವ ಕೆಲ ಡೈಲಾಗ್ ಗಳು ಹೆಡ್ ಲೈನ್ಸ್ ಮಾಡುತ್ತಿವೆ.

ಹವಾ, ಗಾಳಿ, ಬ್ಯಾಟು, ವಿಕೆಟ್ಟು.....ಕುರಿತ ಡೈಲಾಗ್ ಗಳನ್ನ ನೀವು ಇಲ್ಲಿಯವರೆಗೂ ಕೇಳಿರಬಹುದು. ಇದೀಗ ಇದಕ್ಕೆಲ್ಲ 'ಭರ್ಜರಿ' ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಡೆದಿರುವ ಒಂದು ಕೌಂಟರ್ ಡೈಲಾಗ್ ಮತ್ತೆ ಸ್ಟಾರ್ ನಟರ ಅಭಿಮಾನಿಗಳನ್ನ ಕೆರಳಿಸಿದೆ.

ಅಷ್ಟಕ್ಕೂ, ಧ್ರುವ ಸರ್ಜಾ ಬಾಯಿಂದ ಬಂದಿರುವ ಆ ಕೌಂಟರ್ ಡೈಲಾಗ್ ಏನು? ಯಾವ ನಟನಿಗೆ ಈ ಡೈಲಾಗ್ ಮೂಲಕ ಕೌಂಟರ್ ನೀಡಲಾಗಿದೆ? ಮುಂದೆ ಓದಿ.....

ಹವಾ ಎಬ್ಬಿಸಿದ್ದ 'ರಾಮಾಚಾರಿ'

''ನಾನು ಬರೋ ತನಕ ಬೇರೆಯವರ ಹವಾ, ಬಂದ ಮೇಲೆ ನನ್ನದೇ ಹವಾ'' ಎಂದು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಹೇಳಿದ್ದ ಈ ಡೈಲಾಗ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು.

ಬಾಕ್ಸ್ ಅಫೀಸ್ ನಲ್ಲಿ 'ಭರ್ಜರಿ' ಸೌಂಡು: ಕಲೆಕ್ಷನ್ ಸೂಪರ್ರೋ ಸೂಪರ್ರು.!

ಹವಾಗೆ ಟಾಂಗ್ ಕೊಟ್ಟ 'ಡಿ-ಬಾಸ್'

''ಹವಾ ಹೀಟ್ ಇರುವವರೆಗೂ ಮಾತ್ರ ಇರುತ್ತೆ... ಉಸಿರು ನಿಂತ್ ಮೇಲೂ ಹೆಸರ್ ಇರ್ಬೇಕು ಅಂದ್ರೆ ಧಮ್ ಬೇಕಲೇ...'' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಜಗ್ಗುದಾದಾ' ಚಿತ್ರದಲ್ಲಿ ಅಬ್ಬರಿಸಿದ್ರು. ಇದು ರಾಮಾಚಾರಿಗೆ ಕೌಂಟರ್ ಕೊಟ್ಟಿರೋದು ಎಂದು ಜನ ಮಾತಾಡಿಕೊಂಡಿದ್ದೂ ಉಂಟು.

ಭರ್ಜರಿ ಹುಡುಗನ ಕೌಂಟರ್ ಡೈಲಾಗ್

ಇದೀಗ, ''ಬೇಡ....ಈ ಹೊಡೆದಾಟ ಬೇಡ. ಈ ಜಗಳ ನಿಲ್ಲಿಸು, ಈ ದ್ವೇಷ ಸಾಕು ಅಂತೀನಿ. ಆದ್ರೆ, ನೀವು ಇಲ್ಲ 'ನಂದೆ ಹವಾ, ನಂದೇ ಹವಾ' ಅಂತೀರಾ.....'' ಎಂದು ನಟ ಧ್ರುವ ಸರ್ಜಾ ವಿಲನ್ ಗಳ ಎದುರು 'ಭರ್ಜರಿ' ಚಿತ್ರದಲ್ಲಿ ಘರ್ಜಿಸಿದ್ದಾರೆ.

ಧ್ರುವ ಕೌಂಟರ್ ಕೊಟ್ಟಿದ್ದು ಯಾರಿಗೆ?

'ನಂದೆ ಹವಾ, ನಂದೇ ಹವಾ' ಎಂದು ಧ್ರುವ ಕೌಂಟರ್ ಕೊಟ್ಟಿದ್ದು ಯಾರಿಗೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಸ್ಟಾರ್ ನಟರ ಅಭಿಮಾನಿಗಳು, ಧ್ರುವ ಡೈಲಾಗ್ ಗೆ ಟ್ರೋಲ್ ಮಾಡ್ತಿದ್ದಾರೆ.

ಮೊದಲ ದಿನವೇ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ 'ಭರ್ಜರಿ' ಹುಡುಗ !

ಬ್ಯಾಟ್-ವಿಕೆಟ್ ಡೈಲಾಗ್.!

''ತಲ್ವಾರ್ ಹಿಡ್ಕೊಂಡು ತಲೆ ತೆಗಿತೀನಿ ಅಂತ ಬಂದೋರ ಬಗ್ಗೆನೇ ತಲೆಕಡೆಸಿಕೊಂಡಿಲ್ಲ. ಯಾವುದ್ರೋ ಇದು ಚಿಕ್ಕ ಮಕ್ಕಳ ತರ ವಿಕೆಟ್, ಬ್ಯಾಟ್ ಹಿಡ್ಕೊಂಡು ಬಂದಿದ್ದೀರಾ'' ಎಂದು 'ಸಂತು ಸ್ಟ್ರೈಟ್ ಫಾರ್ವಾಡ್' ಚಿತ್ರದಲ್ಲಿ ಯಶ್ ಮತ್ತೊಮ್ಮೆ ಪಂಚ್ ಕೊಟ್ಟಿದ್ದರು. ಈ ಡೈಲಾಗ್ ನಂತರ 'ಮುಕುಂದ ಮುರಾ'ರಿ ಚಿತ್ರದ ಪ್ರಮೋಷನ್ ವೇಳೆ ಸುದೀಪ್ ಮತ್ತು ಉಪೇಂದ್ರ ಟ್ವಿಟ್ಟರ್ ನಲ್ಲಿ ಈ ಬ್ಯಾಟ್, ವಿಕೆಟ್ ಎಂಬ ಪದಗಳನ್ನ ಬಳಿಸಿ ಚರ್ಚೆ ಮಾಡಿದ್ದು ಕೂಡ ಇಲ್ಲಿ ಸ್ಮರಿಸಬಹುದು.

ಸಿನಿಮಾದಲ್ಲಿ ನೋಡಿ ಎಂಜಾಯ್ ಮಾಡಿ ಅಷ್ಟೇ

ಒಂದಂತೂ ನಿಜಾ. ಈ ಎಲ್ಲ ಡೈಲಾಗ್ ಗಳು ಸಿನಿಮಾಗೆ ಸಂಬಂಧಿಸಿದಂತೆ ಆ ಪಾತ್ರಗಳಿಗೆ ಅನ್ವಯವಾಗಿ ಮೂಡಿ ಬಂದಿರೋದು. ಅದನ್ನ ಫ್ಯಾನ್ಸ್ ಸಿನಿಮಾದಲ್ಲಿ ನೋಡಿ ಎಂಜಾಯ್ ಮಾಡಿ ಬಿಟ್ಟು ಬಿಡಿ. ಇದರಲ್ಲಿ ಯಾರು, ಯಾರಿಗೂ ಟಾಂಗ್, ಕೌಂಟರ್ ಕೊಟ್ಟರು ಎಂದು ಹೋಲಿಸದೇ ಹೋದರೆ, ಅದೇ ಒಳ್ಳೆಯ ಬೆಳವಣಿಗೆ.

'ಭರ್ಜರಿ' ಗೆದ್ರೂ, ಧ್ರುವ ಸರ್ಜಾ ಬೇಸರ ಆಗಿರುವುದೇಕೆ?

English summary
Dhruva sarja's dialogue in Bharjari Movie has created a huge debate on the social networking sites.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada