ಜೋಗಿ ಪ್ರೇಮ್- ಕೆವಿಎನ್ ಮಧ್ಯೆ ಕಿರಿಕ್? ಪೀಕಲಾಟಕ್ಕೆ ಸಿಲುಕಿದ್ರಾ 'KD' ಧ್ರುವ ಸರ್ಜಾ?

ಹಣದ ಮುಂದೆ ಯಾವುದಕ್ಕೂ ಬೆಲೆಯಿಲ್ಲ. 10 ರೂಪಾಯಿ ಬರುತ್ತೆ ಅಂದ್ರೆ ಏನು ಬೇಕಾದ್ರು ಮಾಡೋಣ ಅಂತಾರೆ. ಅದೇ 10 ರೂಪಾಯಿ ಹೋಗುತ್ತೆ ಅಂದ್ರೆ ಎಂತಹವರು ಹಿಂದೇಟು ಹಾಕುತ್ತಾರೆ. ಸದ್ಯ ಧ್ರುವ ಸರ್ಜಾ ನಟನೆಯ 'KD' ಅತಂತ್ರವಾಗಿದೆ. ಯಾವಾಗ ಸಿನಿಮಾ ತೆರೆಗೆ ಬರುತ್ತದೆ ಎನ್ನುವುದು ಸ್ವತಃ ನಿರ್ದೇಶಕ ಜೋಗಿ ಪ್ರೇಮ್‌ಗೂ ಗೊತ್ತಿಲ್ಲ.

ಕಳೆದ ವರ್ಷ ಸುದ್ದಿಗೋಷ್ಠಿ ಮಾಡಿ ಚಿತ್ರತಂಡ ಮಾತನಾಡಿತ್ತು. "ಡಿಸೆಂಬರ್‌ನಲ್ಲಿ ನಮ್ಮ ಸಿನಿಮಾ ರಿಲೀಸ್.. ಬೇರೆ ಯಾವುದೇ ಸಿನಿಮಾ ಎದುರು ಬಂದ್ರೂ ವಾರೇ" ಎಂದು ಪ್ರೇಮ್ ಘಂಟಾಘೋಷವಾಗಿ ಹೇಳಿದ್ದರು. ಆದರೆ ಆ ಡಿಸೆಂಬರ್ ಅಲ್ಲ, ಮತ್ತೊಂದು ಡಿಸೆಂಬರ್ ಬಂದ್ರು ಸಿನಿಮಾ ಮಾತ್ರ ತೆರೆಗೆ ಬರುವ ಸುಳಿವು ಸಿಕ್ತಿಲ್ಲ. ಇನ್ನು ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಕೂಡ ಬಣ್ಣ ಹಚ್ಚಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಅದು ಆನೆಬಲ ತಂದುಕೊಟ್ಟಿರುವುದು ಸುಳ್ಳಲ್ಲ. ಆದರೆ ಪೋಸ್ಟ್ ಪ್ರೊಡಕ್ಷನ್ ತಡವಾಗಿ ಸಿನಿಮಾ ರಿಲೀಸ್ ಸದ್ಯಕ್ಕಿಲ್ಲ ಎನ್ನುವಂತಾಗಿದೆ.

Dhruva Sarja s KD Faces Uncertain Future as Release Gets Delayed Yet Again

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. 400-500 ಕೋಟಿ ರೂ. ಬಂಡವಾಳ ಸುರಿಯುತ್ತಿದೆ. ಕನ್ನಡದಲ್ಲಿ 'ಟಾಕ್ಸಿಕ್' ಜೊತೆಗೆ ತಮಿಳಿನ 'ಜನನಾಯಗನ್' ಬಾಲಿವುಡ್‌ನಲ್ಲಿ 'ಹೈವಾನ್' ಎಂಬ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಮಲಯಾಳಂನಲ್ಲಿ 'ಬಾಲನ್' ಹಾಗೂ ತೆಲುಗಿನಲ್ಲಿ 'ಮೆಗಾ 158' ಹೀಗೆ ಕೆವಿಎನ್ ನಿರ್ಮಾಣದ ಸಿನಿಮಾಗಳ ಲಿಸ್ಟ್ ಬೆಳೆಯುತ್ತಲೇ ಇದೆ. ಹೀಗೆ ದೊಡ್ಡ ದೊಡ್ಡ ಸಿನಿಮಾಗಳ ನಡುವೆ 'KD' ಬಡವಾಗುತ್ತಿದ್ದಾನೆ.

ಪ್ರೇಮ್ ನಿರ್ದೇಶನದ 'KD' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಇತ್ತೀಚೆಗೆ ಟೀಸರ್ ರಿಲೀಸ್ ಮಾಡಿ ಪ್ಯಾನ್ ಇಂಡಿಯಾ ಟೂರ್ ಮಾಡಿ ಪ್ರಚಾರ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಹೀಗೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗ್ತಿದ್ದು ಬಜೆಟ್ 100 ಕೋಟಿ ರೂ. ದಾಟಿದೆ ಎನ್ನಲಾಗ್ತಿದೆ.

Dhruva Sarja s KD Faces Uncertain Future as Release Gets Delayed Yet Again

ಪಾತ್ರಕ್ಕಾಗಿ ಧ್ರುವ ಸರ್ಜಾ ಸಾಕಷ್ಟು ಶ್ರಮಿಸಿದ್ದರು. ದೇಹದ ತೂಕ ಹೆಚ್ಚಿಸಿ ಇಳಿಸಿ ರಿಸ್ಕ್ ತಗೊಂಡಿದ್ದರು. ಉದ್ದ ಕೂದಲು ಬಿಟ್ಟು 'KD' ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಬೇರೆ ಸಿನಿಮಾಗಳ ನಡುವೆ ಈ ಚಿತ್ರದ ಬಗ್ಗೆ ಕೆವಿಎನ್ ಸಂಸ್ಥೆ ತಾತ್ಸಾರ ಮಾಡ್ತಿದೆ ಎನ್ನುವ ಊಹಾಪೋಹ ಶುರುವಾಗಿದೆ. ಅದೇ ಕಾರಣಕ್ಕೆ ಪೋಸ್ಟ್ ಪ್ರೊಡಕ್ಷನ್ ತಡವಾಗಿ ರಿಲೀಸ್ ಮುಂದಕ್ಕೆ ಹೋಗ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. 'KD' ಸಿನಿಮಾ ಬಿಡುಗಡೆಯಾಗದೇ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಧ್ರುವ ಸರ್ಜಾ ಪೀಕಲಾಟಕ್ಕೆ ಸಿಲುಕಿದ್ದಾರೆ, ಇದೇ ಕಾರಣಕ್ಕೆ ಕೋಟಿ ಕೋಟಿ ಸಂಭಾವನೆ ನಷ್ಟವಾಗುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ.

ಕಾದು ಕಾದು ಸುಸ್ತಾದ ಧ್ರುವ ಸರ್ಜಾ ಅಂತೂ ಇಂತೂ 'KD' ಮರೆತು ಹೊಸ ಸಿನಿಮಾ ಆರಂಭಿಸಿದ್ದಾರೆ. ರಾಜ್‌ಗುರು ನಿರ್ದೇಶನದ 'ಕ್ರಿಮಿನಲ್' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಸಿನಿಮಾ ಸೆಟ್ಟೇರಿತ್ತು. ರಚಿತಾ ರಾಮ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'KD' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಯಾಕೋ ಧ್ರುವ ಸರ್ಜಾ ಟೈಮ್ ಸರಿಯಿಲ್ಲ ಅನಿಸುತ್ತಿದೆ.

ಧ್ರುವ ನಟನೆಯ ಎಲ್ಲಾ ಸಿನಿಮಾಗಳು ತೆರೆಗೆ ಬರುವುದು ತಡವಾಗುತ್ತದೆ ಎನ್ನುವ ಆರೋಪಯಿದೆ. ಅವರ ಪ್ರತಿ ಸಿನಿಮಾ ಬಿಡುಗಡೆಗೆ ಎರಡ್ಮೂರು ವರ್ಷ ಸಮಯ ತೆಗೆದುಕೊಳ್ತಿದೆ. 2022ರ ಏಪ್ರಿಲ್‌ನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ ನೆರವೇರಿಸಿ 'KD' ಚಿತ್ರಕ್ಕೆ ಚಾಲನೆ ಕೊಟ್ಟಿದ್ದರು. ಅಂದ್ರೆ ಬರೋಬ್ಬರಿ ಮೂರುವರೆ ವರ್ಷಗಳ ಹಿಂದೆ ಶುರುವಾಗಿದ್ದ ಸಿನಿಮಾ ಇದು. ಈವರೆಗೆ ಸಿನಿಮಾ ರಿಲೀಸ್ ಡೇಟ್ ಕೂಡ ಘೋಷಣೆ ಆಗಿಲ್ಲ. ಯಶ್ ನಟನೆಯ 'ಟಾಕ್ಸಿಕ್' ಬಳಿಕ 'KD' ಅಖಾಡಕ್ಕಿಳಿಯುವ ಸಾಧ್ಯತೆಯಿದೆ. ಅಂದರೆ ಹೆಚ್ಚು ಕಮ್ಮಿ 4 ವರ್ಷಗಳ ಬಳಿಕ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

ಸ್ಟಾರ್ ನಟರು, ನಿರ್ದೇಶಕರು ವರ್ಷಕ್ಕೆ 2 ಸಿನಿಮಾ ಮಾಡಬೇಕು ಎನ್ನುವ ಕೂಗು ಕೇಳಿಬರ್ತಿದೆ. ಆದರೆ ಹೀಗೆ ಒಂದೇ ಚಿತ್ರವನ್ನು 4 ವರ್ಷ ಎಳೆದಾಡುತ್ತಿರುವುದು ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. ಸರಿಯಾದ ಪ್ಲ್ಯಾನ್ ಮಾಡಿಕೊಂಡು ಸಿನಿಮಾ ಮಾಡಿ ಮುಗಿಸಬೇಕು. ಅದು ಬಿಟ್ಟು ಬಜೆಟ್ ಜಾಸ್ತಿ ಆಯ್ತು ಅಂತ ಅರ್ಧಕ್ಕೆ ನಿಂತು ಬಿಡೋದು ಸರೀನಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

Read more about: kd prem
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X