Exclusive: 'ಮಚ್ಚ್‌ಲಕ್ಷ್ಮಿ' ಸ್ವಾಗತಕ್ಕೆ ಕೌಂಟ್‌ಡೌನ್: ಜೋಗಿ ಪ್ರೇಮ್ 'KD'ಯ ಕಿ'ಲೇಡಿ' ಯಾರು?

ಜೋಗಿ ಪ್ರೇಮ್ ನಿರ್ದೇಶನದ 'KD' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಬೇಜಾನ್ ಸೌಂಡ್ ಮಾಡ್ತಿದೆ. ಈಗಾಗಲೇ ರವಿಚಂದ್ರನ್, ಸಂಜಯ್‌ ದತ್ ಹಾಗೂ ಶಿಲ್ಪಾ ಶೆಟ್ಟಿಯಂತಹ ಘಟಾನುಘಟಿಗಳು ತಂಡವನ್ನು ಸೇರಿಕೊಂಡಿದ್ದಾರೆ. ಇದೀಗ ನಾಯಕ ಸ್ವಾಗತಕ್ಕೆ ಸಿದ್ಧತೆ ನಡೀತಿದೆ. ಇದೇ ಶುಕ್ರವಾರ ಚಿತ್ರದ ನಾಯಕಿ ಮಚ್ಚ್‌ಲಕ್ಷ್ಮಿ ಯಾರು ಅನ್ನೋದನ್ನು ಚಿತ್ರತಂಡ ಘೋಷಿಸಲಿದೆ.

ಚಿತ್ರದ ನಾಯಕಿ ಫಸ್ಟ್ ಲುಕ್ ರಿವೀಲ್ ಬಗ್ಗೆ ಚಿತ್ರತಂಡ ಅಪ್‌ಡೇಟ್ ನೀಡಿದೆ. 'ರಾಜ ರಣರಂಗದಲ್ಲಿ ಪೆಟ್ಟು ತಿಂದು ಬಿದ್ದಾಗ, ರಾಣಿ ಆತನ ನೀವನ್ನು ಶಕ್ತಿಯಾಗಿ ಬದಲಿಸುತ್ತಾಳೆ. ಮಚ್ಚ್‌ಲಕ್ಷ್ಮಿ ಸ್ವಾಗತಕ್ಕೆ ಸಿದ್ಧರಾಗಿ" ಎಂದು ಸ್ಪೆಷಲ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಶುಕ್ರವಾ ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ಚಿತ್ರದ ನಾಯಕಿ ಮಚ್ಚ್‌ಲಕ್ಷ್ಮಿಯನ್ನು ಪರಿಚಯಿಸುವುದಾಗಿ ಹೇಳಿದ್ದಾರೆ. ಸದ್ಯ ಮಚ್ಚ್‌ಲಕ್ಷ್ಮಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಆಕೆ ಕನ್ನಡ ಹುಡುಗಿನಾ? ಪರಭಾಷೆ ನಟಿನಾ? ಎನ್ನುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

Dhruva Sarjas KD leading lady: Reeshma Nanaiah to appear as Machh Lakshmi in prems directional

ನಿರ್ದೇಶಕ ಪ್ರೇಮ್ ತಮ್ಮ ಸಿನಿಮಾಗಳಲ್ಲಿ ಕನ್ನಡ ನಟಿಯರನ್ನು ಪರಿಚಯಿಸಿದ್ದಾರೆ. ಪರಭಾಷೆಯ ನಟಿಯರನ್ನು ಕರೆಸಿ ಗಮನ ಸೆಳೆದಿದ್ದಾರೆ. 'KD' ಹೇಳಿಕೇಳಿ ಪ್ಯಾನ್ ಇಂಡಿಯಾ ಸಿನಿಮಾ. 5 ಭಾಷೆಗಳಲ್ಲಿ ಏಕಕಾಲಕ್ಕೆ ಬಹಳ ದೊಡ್ಡಮಟ್ಟದಲ್ಲಿ ಈ ಕಾಳಿದಾಸನ ಕಥೆ ಬರ್ತಿದೆ. ಈಗಾಗಲೇ ಟೈಟಲ್ ಟೀಸರ್‌ನಿಂದಲೇ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಧ್ರುವ ಸರ್ಜಾ ರಗಡ್ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

'KD' ಪರಭಾಷಾ ನಟಿ ಅಲ್ಲ, ಹೊಸ ಮುಖ ಕೂಡ ಅಲ್ಲ, ರೀಷ್ಮಾ ನಾಣಯ್ಯ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲೂ ಅವರು ಭಾಗಿ ಆಗಿದ್ಧಾರೆ. ಶುಕ್ರವಾರ ಫಸ್ಟ್ ಲುಕ್‌ ಸಮೇತ ಮಚ್ಚ್‌ಲಕ್ಷ್ಮಿಯ ದರ್ಶನ ಮಾಡಿಸಲಿದೆಯಂತೆ ಚಿತ್ರತಂಡ. ಜೋಗಿ ಪ್ರೇಮ್ ನಿರ್ದೇಶನದ 'ಏಕ್‌ಲವ್‌ ಯಾ' ಚಿತ್ರದಲ್ಲಿ ರೀಷ್ಮಾ ನಟಿಸಿದ್ದರು. ಮಡಿಕೇರಿ ಮೂಲದ ರೀಷ್ಮಾ ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದಾರೆ. ಮೊದಲ ಚಿತ್ರದಲ್ಲೇ ಆಕೆಯ ನಟನೆ ಗಮನ ಸೆಳೆದಿತ್ತು. ಹಾಗಾಗಿ 'KD' ಚಿತ್ರಕ್ಕೂ ಆಕೆನೇ ನಾಯಕಿ ಎನ್ನಲಾಗ್ತಿದೆ.

1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ಧಾರೆ. ಧ್ರುವ ನಟನೆಯ 'ಮಾರ್ಟಿನ್' ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗ್ತಿದೆ. ಅದರ ಬೆನ್ನಲ್ಲೇ ತೆರೆಮೇಲೆ 'KD' ಕರಾಮತ್ತು ಶುರುವಾಗಲಿದೆ.

Dhruva Sarjas KD leading lady: Reeshma Nanaiah to appear as Machh Lakshmi in prems directional

ಜೋಗಿ ಪ್ರೇಮ್‌ ಸಾರಥ್ಯದ 'ದಿ ವಿಲನ್' ಹಾಗೂ 'ಏಕ್‌ಲವ್‌ಯಾ' ಹೇಳಿಕೊಳ್ಳುವ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಹಾಗಾಗಿ 'KD' ಸಿನಿಮಾ ಮೂಲಕ ಭರ್ಜರಿ ಕಂಬ್ಯಾಕ್ ಮಾಡೋಕೆ ಪ್ರೇಮ್ ಮುಂದಾಗಿದ್ಧಾರೆ. 60-70 ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಿ ಚಿತ್ರೀಕರಣ ನಡೆಸಲಾಗ್ತಿದೆ. ಇನ್ನು ಚಿತ್ರದಲ್ಲಿ ರೀಷ್ಮಾ ಮಾತ್ರ ನಾಯಕಿ ಆಗಿ ಇರ್ತಾರಾ? ಇಲ್ಲ ಮತ್ತೊಬ್ಬ ನಾಯಕಿ ಕೂಡ ಬರ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಅರ್ಜುನ್ ಜನ್ಯಾ ಸಂಗೀತ, ಮೋಹನ್ ಬಿ ಕೆರೆ ಆರ್ಟ್ಸ್ ವರ್ಕ್‌, ರವಿವರ್ಮಾ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ರಾಜ್ಯ ವಿಧಾನಸಭೆ ಚುನಾವಣೆ ನಂತರ 'ಮಾರ್ಟಿನ್‌' ಸಿನಿಮಾ ರಿಲೀಸ್‌ಗೆ ಪ್ಲ್ಯಾನ್ ನಡೀತಿದೆ. 'KD' ಸಿನಿಮಾ ಮುಂದಿನ ವರ್ಷ ಸಮ್ಮರ್ ವೇಳೆಗೆ ತೆರೆಗೆ ಬರುವ ನಿರೀಕ್ಷೆ ಇದೆ. ಅದಕ್ಕು ಮುನ್ನ ಟೀಸರ್, ಟ್ರೈಲರ್, ಸಾಂಗ್ಸ್ ಅಂತ ಅಭಿಮಾನಿಗಳಿಗೆ ಟ್ರೀಟ್ ಕಾದಿರುತ್ತದೆ.

More from Filmibeat

English summary
Dhruva Sarja's KD leading lady: Reeshma Nanaiah to appear as Machh Lakshmi in prem's directional. The movie has been bankrolled by KVN Productions, will be released in 5 languages. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X