'ಪೊಗರು' ರಿಲೀಸ್ ದಿನಾಂಕ ಬಹಿರಂಗಪಡಿಸಿದ ನಿರ್ದೇಶಕ ನಂದ ಕಿಶೋರ್

ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ನಿಖರವಾದ ಸ್ಪಷ್ಟತೆ ಇಲ್ಲದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಆದಷ್ಟೂ ಬೇಗ ಪೊಗರು ನೋಡಬಹುದು ಎಂದು ಕಾಯುತ್ತಿದ್ದವರಿಗೆ ಕೊರೊನಾ ವೈರಸ್ ಬೇರೆ ಅಡ್ಡಗಾಲು ಹಾಕಿತ್ತು.

Recommended Video

ಧ್ರುವ ಸರ್ಜಾ ಗಡ್ಡ, ಕೂದಲಿಗೆ ನಂದಕಿಶೋರ್ ಹಾಕಲಿದ್ದಾರೆ ಕತ್ತರಿ | Dubari | Nandakishore | Dhruva Sarja

ಚಿತ್ರರಂಗ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿದೆ. ಆದ್ರೆ, ಸ್ಟಾರ್ ನಟರ ಚಿತ್ರಗಳು ಯಾವುದು ಮೊದಲು ತೆರೆಗೆ ಬರಲಿದೆ ಎಂಬ ಗೊಂದಲ ಉಂಟಾಗಿದೆ. ದರ್ಶನ್ ರಾಬರ್ಟ್, ಯುವರತ್ನ, ಕೋಟಿಗೊಬ್ಬ 3 ಚಿತ್ರಗಳ ಜೊತೆ ಪೊಗರು ಬಿಡುಗಡೆ ಬಗ್ಗೆ ಚಿಂತಿಸುತ್ತಿದೆ.

ಈ ಎಲ್ಲ ಗೊಂದಲಗಳ ನಡುವೆ ಪೊಗರು ಚಿತ್ರತಂಡ ರಿಲೀಸ್ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದೆ. ಎಲ್ಲ ಅಂದುಕೊಂಡಂತೆ ಆದರೆ ಡಿಸೆಂಬರ್ 25ಕ್ಕೆ ಪೊಗರು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಒಂದು ವೇಳೆ ಡಿಸೆಂಬರ್ 25ಕ್ಕೆ ಆಗಿಲ್ಲ ಅಂದ್ರೆ ಸಂಕ್ರಾಂತಿ ಹಬ್ಬವನ್ನು ಟಾರ್ಗೆಟ್ ಮಾಡಿದ್ದಾರೆ.

Dhruva Sarjas Pogaru Movie To Release On December 25th

ಈ ಕುರಿತು ಖುದ್ದು ನಿರ್ದೇಶಕ ನಂದಕಿಶೋರ್ ಅವರೇ ಮಾಹಿತಿ ನೀಡಿದ್ದಾರೆ. ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಮಾಡಲಿರುವ ದುಬಾರಿ ಚಿತ್ರ ಮುಹೂರ್ತ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡೈರೆಕ್ಟರ್ ನಂದ ಕಿಶೋರ್ ''ಡಿಸೆಂಬರ್ 25 ಅಥವಾ ಸಂಕ್ರಾಂತಿ ಹಬ್ಬಕ್ಕೆ ಪೊಗರು ಬರುತ್ತೆ'' ಎಂದಿದ್ದಾರೆ.

ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕೂಡ ಡಿಸೆಂಬರ್ 25ಕ್ಕೆ ಬರಲು ತಯಾರಿ ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ರಾಬರ್ಟ್ ಕ್ರಿಸ್‌ಮಸ್‌ಗೆ ಪ್ಲಾನ್ ಮಾಡಿದ್ರೆ ಪೊಗರು ಮುಂದಕ್ಕೆ ಹೋಗಲಿದೆ. ಇಲ್ಲವಾದಲ್ಲಿ ಪೊಗರು ಚಿತ್ರವೇ ಮೊದಲು ಬರಲಿದೆ.

More from Filmibeat

English summary
Action Prince Dhruva Sarja starrer Pogaru Movie set to release on December 25th says Director Nanda kishore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X