'ಪೊಗರು' ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಧೃವ ಸರ್ಜಾ

ಸಂಕ್ರಾಂತಿ ನಂತರ ಸಿನಿಮಾ ಸಂಕ್ರಮಣ ಪ್ರಾರಂಭವಾದಂತಿದೆ. ಇಷ್ಟು ದಿನ ಸಿನಿಮಾಗಳಿಲ್ಲದೇ ಬಿಕೋ ಎನ್ನುತ್ತಿದ್ದ ಚಿತ್ರಮಂದಿರಗಳಿಗೆ ಹಳೆಯ ಕಳೆ ನಿಧಾನಕ್ಕೆ ಮರಳುತ್ತಿದೆ.

Recommended Video

ಪೊಗರು ರಿಲೀಸ್ ದಿನಾಂಕ ಘೋಷಣೆ | Filmibeat Kannada

ಒಬ್ಬರಾದ ಬಳಿಕ ಒಬ್ಬ ಸ್ಟಾರ್ ನಟರು ತಮ್ಮ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್, ಪುನೀತ್ ರ 'ಯುವರತ್ನ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಬಳಿಕ ಇದೀಗ ಧೃವ ಸರ್ಜಾ ತಮ್ಮ 'ಪೊಗರು' ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

ಇಂದು (ಜನವರಿ 18) ರಂದು ಫೇಸ್‌ಬುಕ್ ಲೈವ್ ಬಂದ ಧ್ರುವ ಸರ್ಜಾ, ತಮ್ಮ ನಟನೆಯ 'ಪೊಗರು' ಸಿನಿಮಾ ಫೆಬ್ರವರಿ 19 ರ ರಥಸಪ್ತಮಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾರೆ.

'ಪೊಗರು ಸಿನಿಮಾವು ಫೆಬ್ರವರಿ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದು, ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡಬೇಕು' ಎಂದು ಮನವಿ ಮಾಡಿದ್ದಾರೆ ಧ್ರುವ ಸರ್ಜಾ.

'ಮೂರುವರೆ ವರ್ಷ ಕಷ್ಟಪಟ್ಟು ಮಾಡಿದ ಸಿನಿಮಾ 'ಪೊಗರು'

'ಮೂರುವರೆ ವರ್ಷ ಕಷ್ಟಪಟ್ಟು ಮಾಡಿದ ಸಿನಿಮಾ 'ಪೊಗರು'

'ಪೊಗರು ಸಿನಿಮಾವನ್ನು ನಾವು 3.5 ವರ್ಷದಿಂದಲೂ ಮಾಡಿದ್ದೇವೆ. ನಾನೂ ಸೇರಿದಂತೆ ನಟ-ನಟಿಯರು, ಎಲ್ಲಾ ತಂತ್ರಜ್ಞರು, ನಮ್ಮ ಸಿಬ್ಬಂದಿ ಹೀಗೆ ಎಲ್ಲರೂ ಬಹು ಕಷ್ಟಪಟ್ಟು ಮಾಡಿರುವ ಸಿನಿಮಾ ಇದು. ಇದು ಕೇವಲ ಆಕ್ಷನ್ ಸಿನಿಮಾ ಮಾತ್ರವಲ್ಲ, ಇದೊಂದು ಭಾವನಾತ್ಮಕ ಸಿನಿಮಾ ಸಹ ಹೌದು' ಎಂದಿದ್ದಾರೆ ಧ್ರುವ ಸರ್ಜಾ.

ಇದು ಕೇವಲ ಆಕ್ಷನ್ ಸಿನಿಮಾ ಮಾತ್ರವಲ್ಲ: ಧ್ರುವ ಸರ್ಜಾ

ಇದು ಕೇವಲ ಆಕ್ಷನ್ ಸಿನಿಮಾ ಮಾತ್ರವಲ್ಲ: ಧ್ರುವ ಸರ್ಜಾ

'ಈ ವರೆಗೆ ಬಿಡುಗಡೆ ಮಾಡಿರುವ ಪೋಸ್ಟರ್‌ಗಳಲ್ಲಿ ಕೇವಲ ಒಂದು ಶೇಡ್‌ ಅನ್ನಷ್ಟೆ ತೋರಿಸಲಾಗಿದೆ. ಗಡ್ಡ ಬಿಟ್ಟು ರಫ್ ಆಗಿರುವ ಲುಕ್ ಅನ್ನು ಅಷ್ಟೆ ತೋರಲಾಗಿದೆ. ಆದರೆ ಸಿನಿಮಾದಲ್ಲಿ ಇನ್ನೂ ಬೇರೆ-ಬೇರೆ ಶೇಡ್‌ಗಳಿವೆ. ಬಾಲ್ಯದ ದೃಶ್ಯಗಳು, ಭಾವನಾತ್ಮಕ ದೃಶ್ಯಗಳು ಇವೆ. ಹಲವು ಸರ್ಪ್ರೈಸ್‌ಗಳು ಸಿನಿಮಾದಲ್ಲಿ ಇವೆ' ಎಂದರು ಧ್ರುವ ಸರ್ಜಾ.

ಸಿನಿಮಾದಲ್ಲಿ ನಾಲ್ಕು ಫೈಟ್‌ಗಳಿವೆ: ಧ್ರುವ ಸರ್ಜಾ

ಸಿನಿಮಾದಲ್ಲಿ ನಾಲ್ಕು ಫೈಟ್‌ಗಳಿವೆ: ಧ್ರುವ ಸರ್ಜಾ

'ಸಿನಿಮಾದಲ್ಲಿ ನಾಲ್ಕು ಫೈಟ್‌ ದೃಶ್ಯಗಳಿವೆ. ಹಾಡುಗಳಲ್ಲಿ ಈಗಾಗಲೇ ಖರಾಬು ಹಾಡು ಸಖತ್ ಹಿಟ್ ಆಗಿದೆ. ಅದು ಬಿಟ್ಟು ಪೊಗರು, ಎಣ್ಣೆ ಹಾಡು ಒಂದು ಇದೆ. ಅದೂ ಸಹ ಚೆನ್ನಾಗಿದೆ ಎಂದ ಧ್ರುವ ಸರ್ಜಾ. ಸಿನಿಮಾದಲ್ಲಿ ನಟಿಸಿರುವ ನಟರು, ತಂತ್ರಜ್ಞರು ನಿರ್ಮಾಪಕ, ಸಹ ನಿರ್ಮಾಪಕರ ಎಲ್ಲರ ಹೆಸರನ್ನೂ ಹೇಳಿ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದೇವೆ' ಎಂದು ಹೇಳಿದರು ಧ್ರುವ ಸರ್ಜಾ.

ನಿರೀಕ್ಷೆ ಇಟ್ಟುಕೊಂಡು ಬಂದು ಸಿನಿಮಾ ನೋಡಿ: ಧ್ರುವ

ನಿರೀಕ್ಷೆ ಇಟ್ಟುಕೊಂಡು ಬಂದು ಸಿನಿಮಾ ನೋಡಿ: ಧ್ರುವ

'ನನ್ನ ಅದ್ಧೂರಿ, ಬಹದ್ಧೂರ್ ಸಿನಿಮಾವನ್ನು ನಿರೀಕ್ಷೆ ಇಟ್ಟುಕೊಂಡು ಬಂದು ನೋಡಬೇಡಿ ಎಂದಿದ್ದೆ. ಆದರೆ 'ಪೊಗರು' ನಲ್ಲಿ ಹಾಗಿಲ್ಲ, ನಿರೀಕ್ಷೆ ಇಟ್ಟುಕೊಂಡೇ ಬಂದು ಸಿನಿಮಾ ನೋಡಿ, ನಿಮ್ಮ ನಿರೀಕ್ಷೆಯನ್ನು ನಾವು ಹುಸಿಗೊಳಿಸುವುದಿಲ್ಲ. ಇದೊಂದು ಪಕ್ಕಾ ಕಂಟೆಂಟ್ ಹೊಂದಿರುವ ಸಿನಿಮಾ, ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ' ಎಂದರು ಧ್ರುವ ಸರ್ಜಾ.

More from Filmibeat

English summary
Dhruva Sarja's Pogaru movie will hit theaters on February 19. Dhruva Sarja request people to watch Pogaru movie in theaters only.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X