For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಗೆ ದಾಖಲಾದ ಪ್ರೇರಣಾ; ನೂತನ ಸದಸ್ಯನ ಆಗಮನದ ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್ ಬೆಂಗಳೂರಿನ ಕೆಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ನಿನ್ನೆ (ಅಕ್ಟೋಬರ್ 1) ದಾಖಲಾಗಿದ್ದಾರೆ. ಆಸ್ಪತ್ರೆಯ ವೈದ್ಯರು ಇಂದು ಪ್ರೇರಣಾ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ ಎಂದು ಹೇಳಿರುವ ಕಾರಣ ಇದೀಗ ಸರ್ಜಾ ಕುಟುಂಬ ಆಸ್ಪತ್ರೆ ಕಡೆ ತೆರಳಿದೆ.

  ಸದ್ಯ ತಮ್ಮ ಮಾರ್ಟಿನ್ ಹಾಗೂ ಪ್ರೇಮ್ ಜತೆಗಿನ ಚಿತ್ರಗಳ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡಿರುವ ಧ್ರುವ ಸರ್ಜಾ ಪತ್ನಿ ಜತೆ ಆಸ್ಪತ್ರೆಯಲ್ಲಿಯೇ ಇದ್ದಾರೆ. ಧ್ರುವ ಸರ್ಜಾ ಆಪರೇಷನ್ ಕೊಠಡಿ ಒಳಗೆ ಮೊಬೈಲ್ ಉಪಯೋಗಿಸುತ್ತಾ ಕುಳಿತಿರುವ ಚಿಕ್ಕ ತುಣುಕೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೀಘ್ರದಲ್ಲಿಯೇ ಧ್ರುವ ಸರ್ಜಾ ಮನೆಗೆ ನೂತನ ಸದಸ್ಯನ ಆಗಮನ ಆಗಲಿದೆ ಎಂಬ ಮಾಹಿತಿ ಖಚಿತವಾಗಿದೆ.

  ಇನ್ನು ಕಳೆದ ತಿಂಗಳಷ್ಟೇ ಧ್ರುವ ಸರ್ಜಾ ಪತ್ನಿ ಪ್ರೇರಣಾ ಧ್ರುವ ಸರ್ಜಾ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಹಾಗೂ ಇದಕ್ಕೂ ಮುನ್ನ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸುವುದರ ಮೂಲಕ ಧ್ರುವ ಸರ್ಜಾ ಆ ಫೋಟೋಗಳನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು ಹಾಗೂ ಆ ಫೋಟೋಗಳು ವೈರಲ್ ಆಗಿದ್ದವು. ಸದ್ಯ ಪತ್ನಿ ಹೆರಿಗೆ ಸಮಯ ಹತ್ತಿರ ಬಂದಿರುವ ಕಾರಣದಿಂದಾಗಿ ಎಲ್ಲ ರೀತಿಯ ಶೂಟಿಂಗ್ ಕೆಲಸಗಳಿಗೂ ಅಲ್ಪವಿರಾಮ ಇಟ್ಟಿರುವ ಧ್ರುವ ಸರ್ಜಾ ಪತ್ನಿ ಜತೆ ಸಮಯ ಕಳೆಯುತ್ತಿದ್ದಾರೆ.

  English summary
  Dhruva Sarja's wife Prerana admitted to Aksha Hospital
  Sunday, October 2, 2022, 10:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X