twitter
    For Quick Alerts
    ALLOW NOTIFICATIONS  
    For Daily Alerts

    'ಮಾರ್ಟಿನ್' ಪ್ರೆಸ್‌ಮೀಟ್: ಧ್ರುವ ಸರ್ಜಾ ಮೇಲಿರುವ ಟೀಕೆಗೆ ಉತ್ತರ ಇದು

    |

    ಧ್ರುವ ಸರ್ಜಾ ಆಕ್ಷನ್ ಹೀರೋ. ಮಾಸ್ ಪ್ರೇಕ್ಷಕರ ನೆಚ್ಚಿನ ನಟ. 'ಅದ್ಧೂರಿ'ಯ ಪ್ರೇಮಕಥೆಯೊಂದಿಗೆ ಜರ್ನಿ ಆರಂಭಿಸಿದ್ದ ಧ್ರುವ ಸರ್ಜಾ, ನಂತರ ಭರ್ಜರಿ, ಬಹುದ್ದೂರ್, ಪೊಗರು ಅಂತಹ ಸಿನಿಮಾಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದರು. ಕೊನೆಯ ಮೂರು ಚಿತ್ರಗಳಲ್ಲಿ ಧ್ರುವ ಸರ್ಜಾ ಹೆಚ್ಚು ಸದ್ದು ಮಾಡಿದ್ದು ಡೈಲಾಗ್‌ಗಳಿಂದ. ನಾನ್‌ಸ್ಟಾಪ್ ಡೈಲಾಗ್‌ಗಳು, ಉದ್ದುದ್ದ ಡೈಲಾಗ್‌ಗಳು ಧ್ರುವ ಸರ್ಜಾರನ್ನು ಡೈಲಾಗ್ ಕಿಂಗ್ ಎಂದು ಬಿಂಬಿಸಿತು.

    Recommended Video

    ಗಾಸಿಪ್ ಗಳಿಗೆ ಸರಿಯಾದ ಉತ್ತರ ಕೊಟ್ಟ ಧ್ರುವ, ನಂದಕಿಶೋರ್

    ಅತಿಯಾದ ಅಮೃತ ವಿಷ ಆಗಿಬಿಡುತ್ತದೆ ಎನ್ನುವಂತೆ ಉದ್ದುದ್ದ ಡೈಲಾಗ್‌ಗಳು, ಅತಿಯಾದ ಡೈಲಾಗ್‌ಗಳು, ಸುಖಾಸುಮ್ಮನೆ ಡೈಲಾಗ್‌ಗಳು ಕೆಲವೊಮ್ಮೆ ಆ ಚಿತ್ರಕ್ಕೆ ಹಾಗೂ ವೈಯಕ್ತಿಕವಾಗಿ ಆ ನಟನಿಗೆ ಮೈನಸ್ ಆಗುತ್ತದೆ. ಇಂತಹದೊಂದು ಆರೋಪ ನಟ ಧ್ರುವ ಸರ್ಜಾ ಅವರ ಮೇಲಿದೆ. ಧ್ರುವ ಸರ್ಜಾ ಸಿನಿಮಾಗಳು ಅಂದ್ರೆ ಉದ್ದುದ್ದ ಡೈಲಾಗ್ ಇರುತ್ತೆ ಅಷ್ಟೇ ಎನ್ನುವ ಟೀಕೆಯೂ ಇದೆ.

    'ಮಾರ್ಟಿನ್' ಲಾಂಚ್ ವೇಳೆ ಖುಷಿ ಸುದ್ದಿ ಕೊಟ್ಟ ನಂದಕಿಶೋರ್-ಧ್ರುವ ಸರ್ಜಾ'ಮಾರ್ಟಿನ್' ಲಾಂಚ್ ವೇಳೆ ಖುಷಿ ಸುದ್ದಿ ಕೊಟ್ಟ ನಂದಕಿಶೋರ್-ಧ್ರುವ ಸರ್ಜಾ

    ಈ ಆಪಾದನೆಯಿಂದ, ಈ ಟೀಕೆಯಿಂದ ಧ್ರುವ ಸರ್ಜಾ ಹೊರಬರಲು ಮುಂದಾಗಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಇಂತಹ ಸಂಭಾಷಣೆ ಇರಲ್ಲ ಎಂದು ಸುಳಿವು ಕೊಟ್ಟಿದ್ದಾರೆ. ಮುಂದೆ ಓದಿ...

    'ಮಾರ್ಟಿನ್' ಚಿತ್ರದಲ್ಲಿ ಮಾತು ಕಮ್ಮಿ

    'ಮಾರ್ಟಿನ್' ಚಿತ್ರದಲ್ಲಿ ಮಾತು ಕಮ್ಮಿ

    ಆಗಸ್ಟ್ 15 ರಂದು ಧ್ರುವ ಸರ್ಜಾ ಹೊಸ ಸಿನಿಮಾ 'ಮಾರ್ಟಿನ್' ಆರಂಭವಾಗಿದೆ. ಸುಮಾರು 9 ವರ್ಷದ ನಂತರ ಎಪಿ ಅರ್ಜುನ್ ಜೊತೆ ಧ್ರುವ ಸಿನಿಮಾ ಮಾಡ್ತಿದ್ದು, ಫಸ್ಟ್ ಲುಕ್ ಟೀಸರ್ ಸಹ ಬಿಡುಗಡೆಯಾಗಿದೆ. ಇದೀಗ, ಈ ಸಿನಿಮಾದಲ್ಲಿ ಉದ್ದುದ್ದ ಡೈಲಾಗ್‌ಗಳು ಇರಲ್ಲ ಎಂದು ಧ್ರುವ ಸರ್ಜಾ ಮಾಹಿತಿ ನೀಡಿದ್ದಾರೆ. 'ಈ ಹಿಂದಿನ ಸಿನಿಮಾಗಳಂತೆ ತುಂಬಾ ಕಿರುಚಾಡಿ, ಗಟ್ಟಿಯಾಗಿ ಹೇಳುವಂತಹ ಡೈಲಾಗ್ ಇರಲ್ಲ. ಎಷ್ಟು ಬೇಕು ಅಷ್ಟು ಮಾತಾಡುವಂತಹ ಪಾತ್ರ ಇದು' ಎಂದು ಧ್ರುವ ತಿಳಿಸಿದ್ದಾರೆ.

    ಡೈಲಾಗ್ ಬಿಡಿ, ಕಥೆ ಬಗ್ಗೆ ಫೋಕಸ್ ಮಾಡಿ

    ಡೈಲಾಗ್ ಬಿಡಿ, ಕಥೆ ಬಗ್ಗೆ ಫೋಕಸ್ ಮಾಡಿ

    ಈ ಬಗ್ಗೆ ಮಾರ್ಟಿನ್‌ ಪ್ರೆಸ್‌ಮೀಟ್‌ನಲ್ಲಿ ಧ್ರುವ ಸರ್ಜಾ ಮಾತನಾಡಿರುವ ವಿಡಿಯೋಣ ತುಣುಕನ್ನು 'ಕನ್ನಡ ಪಿಕ್ಚರ್' ಯೂಟ್ಯೂಬ್ ಚಾನಲ್ ಪ್ರಸಾರ ಮಾಡಿದೆ. ಅದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಡೈಲಾಗ್ ಬಿಟ್ಟು ಕಥೆ ಕಡೆ ಫೋಕಸ್ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ. ಕೆಲವು ಆಯ್ದು ಕಾಮೆಂಟ್‌ಗಳು ಇಲ್ಲಿವೆ.

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಅವತಾರಕ್ಕೆ ಅಭಿಮಾನಿಗಳು ಫಿದಾಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಅವತಾರಕ್ಕೆ ಅಭಿಮಾನಿಗಳು ಫಿದಾ

    - 'ಸಿನಿಮಾದಲ್ಲಿ ಅಲ್ಲಿ ಅಲ್ಲಿ ಡೈಲಾಗ್ ಇರ್ಬೇಕು, ಸಿನಿಮಾನೇ ಡೈಲಾಗ್ ಆಗಬಾರದು'.

    - 'ಉದ್ದುದ್ದ ಡೈಲಾಗ್ ನಿಮಗೆ ಸೆಟ್ ಆಗಲ್ಲ ಸರ್'.

    - 'ಒಂದು ಕಥೆಗೆ ...ಡೈಲಾಗಗಳು ತುಂಬಾ ಮುಖ್ಯ.... ಆದ್ರೆ ಅದು ಕಥೆಗೆ ತುಂಬಾ ಪೂರಕವಾಗಿ ಇದ್ರೆ ಕೇಳೋಕೆ ಮಾಜವಾಗಿ ಇರುತ್ತೆ'.

    - 'ಐದನೇ ಮೂವಿಗೆ ಅರ್ಥ ಮಾಡಿಕೊಂಡಿದ್ದಾರೆ..ಅರಚಾಟ, ಕಿರುಚಾಟ, ಅದೇ ಬಿಲ್ಡ್ ಅಪ್, ಅದೇ ಜಾತ್ರೆ ಸೆಟ್ ಬೇಡ ಸರಿ ಹೋಗೋಲ್ಲ ಅಂತ.. ಹೋಪ್‌ಫುಲಿ ಕಂಬ್ಯಾಕ್ ವಿತ್ ಗುಡ್ ಸ್ಟೋರಿ'' ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

    - 'ನೀವೊಬ್ಬ ಪ್ರತಿಭಾವಂತ ನಟ ಬೇಕಾಬಿಟ್ಟಿ ಡೈಲಾಗ್ ಬೇಡ,ಡೈಲಾಗ್ ನಲ್ಲಿ ತೂಕ ಇರಬೇಕು'.

    ಕಾಲೇಜ್ ಲವ್ ಸ್ಟೋರಿ

    ಕಾಲೇಜ್ ಲವ್ ಸ್ಟೋರಿ

    'ಮಾರ್ಟಿನ್' ಶೀರ್ಷಿಕೆ ಹೇಳುವಂತೆ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಕಾಲೇಜ್ ಲವ್ ಸ್ಟೋರಿ ಜೊತೆ ಆಕ್ಷನ್ ಮನರಂಜನೆ ನಿರೀಕ್ಷಿಸಬಹುದು ಎಂದು ಚಿತ್ರತಂಡ ಸುಳಿವು ಕೊಟ್ಟಿದೆ. 'ಗ್ಯಾಂಗ್‌ಸ್ಟರ್' ಪಾತ್ರದಲ್ಲಿ ಧ್ರುವ ನಟಿಸಲಿದ್ದಾರೆ ಎಂದು ಸ್ವತಃ ನಿರ್ದೇಶಕ ಎಪಿ ಅರ್ಜುನ್ ಮಾಹಿತಿ ನೀಡಿದರು. ಜೊತೆಗೆ ತಾಯಿಯ ಸೆಂಟಿಮೆಂಟ್ ಸಹ ಸಿನಿಮಾದಲ್ಲಿರಲಿದೆ.

    ಡಿಸೆಂಬರ್ ವೇಳೆ ರೆಡಿ ಮಾಡೋ ಪ್ಲಾನ್

    ಡಿಸೆಂಬರ್ ವೇಳೆ ರೆಡಿ ಮಾಡೋ ಪ್ಲಾನ್

    ಅದಾಗಲೇ 'ಮಾರ್ಟಿನ್' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಧ್ರುವ ಸರ್ಜಾ ಜೊತೆ 'ದುಬಾರಿ' ಮಾಡಬೇಕಿದ್ದ ಉದಯ್ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯದ ಲೆಕ್ಕಾಚಾರದಲ್ಲಿ ಡಿಸೆಂಬರ್‌ ವೇಳೆ ಈ ಸಿನಿಮಾ ಮುಗಿಸುವ ಚಿಂತನೆಯಲ್ಲಿದೆ ಚಿತ್ರತಂಡ. ಇನ್ನು ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

    English summary
    Action Prince Dhruva Sarja Says there will no lengthy dialogues in AP Arjun Directional Martin Movie.
    Monday, August 16, 2021, 15:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X