For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಅಂಗಳದಲ್ಲಿ ಧ್ರುವ ಸರ್ಜಾ ದ್ವಿಶತಕ

  By Rajendra
  |

  ನಟ ಧ್ರುವ ಸರ್ಜಾ ಎರಡನೇ ಶತಕ ಸಿಡಿಸಿದ್ದಾರೆ. ಅವರು ದ್ವಿಶತಕ ಸಿಡಿಸಿರುವುದು ಯಾವುದೇ ಮೈದಾನದಲ್ಲಿ ಅಲ್ಲವೇ ಅಲ್ಲ, ಸ್ಯಾಂಡಲ್ ವುಡ್ ಅಂಗಳದಲ್ಲಿ ಎಂಬುದು ವಿಶೇಷ. ಅವರ ಮೊದಲ ಶತಕ 'ಅದ್ದೂರಿ' ಮೂಲಕವಾದರೆ, ಎರಡನೇ ಶತಕವನ್ನು 'ಬಹದ್ದೂರ್' ಮೂಲಕ ಪೂರೈಸಿದ್ದಾರೆ.

  ಅಲ್ಲಿಗೆ ಧ್ರುವ ಸರ್ಜಾ ಶತಕ ವೀರನಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರ ನರ್ತಕಿ ಸೇರಿದಂತೆ ರಾಜ್ಯದ ಮೂವತ್ತಕ್ಕೂ ಹೆಚ್ಚು ಕೇಂದ್ರಗಳಲ್ಲಿ 'ಬಹದ್ದೂರ್' ಭರ್ಜರಿ ಪ್ರದರ್ಶನ ಮುಂದುವರೆದಿದೆ. ಈ ವರ್ಷದ ಮೊದಲ ಶತಕ ಬಾರಿಸಿದ ಚಿತ್ರವಾಗಿಯೂ 'ಬಹದ್ದೂರ್' ಮತ್ತೊಂದು ಗರಿಯನ್ನು ತನ್ನ ಮುಡಿಗೆ ಸಿಕ್ಕಿಸಿಕೊಂಡಿದೆ. [ಬಹದ್ದೂರ್ ಚಿತ್ರ ವಿಮರ್ಶೆ]

  ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದ್ದು ಕಳೆದ ವರ್ಷ ಅಕ್ಟೋಬರ್ 4ರಂದು ತೆರೆಗೆ ಅಪ್ಪಳಿಸಿತ್ತು. ಧ್ರುವ ಸರ್ಜಾ ಅವರ ಮೊದಲ ಚಿತ್ರ 'ಅದ್ದೂರಿ' ಬಹದ್ದೂರ್ ಚಿತ್ರವನ್ನು ನಿರೀಕ್ಷಿಸುವಂತೆ ಮಾಡಿತ್ತು. ಪ್ರೇಕ್ಷಕರ ನಿರೀಕ್ಷೆಗಳು ಸುಳ್ಳಾಗಲಿಲ್ಲ. ಬಹದ್ದೂರ್ ನೂರು ದಿನ ಪೂರೈಸಿ ಮುನ್ನುಗ್ಗುತ್ತಿದೆ.

  ಚಿತ್ರದ ನಿರ್ಮಾಪಕರಾದ ಕೆಪಿ ಶ್ರೀಕಾಂತ್ ಹಾಗೂ ಕನಕಪುರ ಶ್ರೀನಿವಾಸ್ ಅವರಿಗೆ ಸಹಜವಾಗಿಯೇ ಖುಷಿಯಾಗಿದೆ. ಬೆಂಗಳೂರಿನ ಓರಿಯನ್ ಮಾಲ್ ಹಾಗೂ ಫೋರಂ ಮಾಲ್ ನಲ್ಲಿನ ಪಿವಿಆರ್ ಚಿತ್ರಮಂದಿರಗಳಲ್ಲೂ ಚಿತ್ರ ಸೆಂಚುರಿ ಬಾರಿಸಿರುವುದು ವಿಶೇಷ.

  ಮತ್ತೊಂದು ಸ್ವಮೇಕ್ ಚಿತ್ರದ ಮೂಲಕ ಧ್ರುವ ಸರ್ಜಾ ಗೆದ್ದಿದ್ದಾರೆ. ಪರಭಾಷೆಯ ಯಾವುದೇ ಚಿತ್ರಗಳಿಗೆ ಕಮ್ಮಿ ಇಲ್ಲದಂತೆ 'ಬಹದ್ದೂರ್' ಚಿತ್ರವನ್ನು ತೆರೆಗೆ ತಂದಿರುವ ನಿರ್ಮಾಪಕ ಆರ್ ಶ್ರೀನಿವಾಸ್ ಅವರಿಗೆ ಕಂಪ್ಲೀಟ್ ಪೈಸಾ ವಸೂಲಿ ಚಿತ್ರ ಕೊಟ್ಟ ಖುಷಿ ಇದೆ.

  ಅತ್ಯುತ್ತಮ ಸೌಂಡ್ ಡಿಸೈನ್ ಟೆಕ್ನಾಲಜಿಯನ್ನ ಕನ್ನಡದಲ್ಲೇ ಮೊದಲ ಬಾರಿಗೆ ಬಳಸಿಕೊಂಡಿದೆ 'ಬಹದ್ದೂರ್' ಚಿತ್ರತಂಡ. ಬಾಲಿವುಡ್ ನಲ್ಲಿ ಬಳಸಿಕೊಂಡಿರೋ ಈ ಮುಂದುವರಿದ ತಂತ್ರಜ್ಞಾನದಿಂದ ಚಿತ್ರದ ಸೌಂಡ್ ಕ್ವಾಲಿಟಿ ಪ್ರೇಕ್ಷಕರನ್ನ ಥ್ರಿಲ್ಲಾಗಿಸಿದೆ. ಭೂಮಿಯಾಗ ಬೆಳೆ ಐತೆ, ಬಂದೂಕ್ ನಾಗ ಬುಲೆಟ್ ಐತೆ, ನನ್ ಮೈಯಾಗ ಪೊಗರೈತೇ ಎಂಬ ಡೈಲಾಗ್ ಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. (ಫಿಲ್ಮಿಬೀಟ್ ಕನ್ನಡ)

  English summary
  Kannada actor Dhruva Sarja completes second century in Sandalwood. His film second movie 'Bahaddur' completed 100 days of successful run on Friday. His first movie Addhuri also completed 100 days in many theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X