For Quick Alerts
  ALLOW NOTIFICATIONS  
  For Daily Alerts

  ಭಾವಿ ಪತ್ನಿಯ ಬಾಲ್ಯದ ಫೋಟೋ ಹಂಚಿಕೊಂಡ ಧ್ರುವ ಸರ್ಜಾ

  |
  ತನ್ನ ಭಾವಿ ಪತ್ನಿಯನ್ನ ಪ್ರಥಮ್ ಗೆ ಭೇಟಿ ಮಾಡಿಸಿದ ಧ್ರುವ ಸರ್ಜಾ | FILMIBEAT KANNADA

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಸಜ್ಜಾಗ್ತಿದ್ದಾರೆ. ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ಹಸೆಮಣೆ ಏರಲು ಎಲ್ಲ ತಯಾರಿ ನಡೆಸುತ್ತಿದ್ದಾರೆ. ಎರಡು ಮನೆಯವರು ಈ ಮದುವೆಗೆ ಒಪ್ಪಿಕೊಂಡಿದ್ದು, ಸಂಪ್ರದಾಯದಂತೆ ವಿವಾಹ ನೆರವೇರಿಸಲು ಸಿದ್ಧವಾಗ್ತಿದ್ದಾರೆ.

  ಸುಮಾರು ವರ್ಷಗಳಿಂದ ಪರಸ್ಪರ ಪರಿಚಯವಿದ್ದ ಧ್ರುವ ಮತ್ತು ಪ್ರೇರಣಾ ಕಳೆದ 14 ವರ್ಷದಿಂದ ಪ್ರೀತಿಸುತ್ತಿದ್ದರು. ಈ ಪ್ರೀತಿ ಈಗ ದಾಂಪತ್ಯಕ್ಕೆ ಬದಲಾಗುತ್ತಿದೆ. ಧ್ರುವ ಸರ್ಜಾ ಚಿತ್ರರಂಗಕ್ಕೆ ಬರುವ ಮೊದಲೇ ಪ್ರೇರಣಾ ಜೊತೆ ಪ್ರೀತಿಯಲ್ಲಿದ್ದರು.

  ಧ್ರುವಗೆ ಪ್ರೀತಿಯ ಪಾಠ ಮಾಡಿದ ಈ ಟೀಚರ್ ಯಾರು?

  ಈ ಬಗ್ಗೆ ಎಲ್ಲಿಯೂ ಮಾತನಾಡದ ಧ್ರುವ ಸರ್ಜಾ, ಈಗ ಟ್ವಿಟ್ಟರ್ ನಲ್ಲಿ ತಮ್ಮ ಭಾವಿ ಪತ್ನಿಯ ಬಾಲ್ಯದ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರು ಮುಖಕ್ಕೆ ಬಣ್ಣ ಹಚ್ಚಿಕೊಂಡು ಹೋಳಿ ಹಬ್ಬ ಆಚರಿಸಿದಂತಿದೆ.

  'ಬಹದ್ದೂರ್' ಗಂಡು ಧ್ರುವ ಸರ್ಜಾಗೆ ಕೂಡಿ ಬಂತು ಕಂಕಣ ಭಾಗ್ಯ

  ಅಂದ್ಹಾಗೆ, ಇದು 1997ನೇ ಇಸವಿಯ ಮಾರ್ಚ್ 24ರಂದು ತೆಗೆದಿದ್ದ ಫೋಟೋ ಎನ್ನಲಾಗಿದೆ. ಈ ಫೋಟೋವನ್ನ ಧ್ರುವ ಹಂಚಿಕೊಂಡು, ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಕೇಳಿಕೊಂಡಿದ್ದಾರೆ.

  ಸದ್ಯ, ಮದುವೆ ಮಾತುಕತೆ ಮಾತ್ರ ನಡೆದಿದ್ದು, ಮೊದಲು ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದಾರೆ. ನಂತರ ಅದ್ಧೂರಿಯಾಗಿ ಮದುವೆಯಾಗಲಿದ್ದಾರಂತೆ.

  English summary
  Kannada actor Dhruva sarja shares his girlfriend's childhood photo in twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X