ಮುಂದಿನ ಬರ್ತಡೇಯಷ್ಟರಲ್ಲಿ ಧ್ರುವ ಸರ್ಜಾ ಮದುವೆ.!
Recommended Video

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಕ್ಟೋಬರ್ 6 ರಂದು ತಮ್ಮ ಮೂವತ್ತನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಈ ವೇಳೆ ಎಲ್ಲರಲ್ಲೂ ಕಾಡಿದ ಪ್ರಶ್ನೆ ಧ್ರುವ ಅವರ ಮದುವೆ ಯಾವಾಗ.? ಈ ಕುತೂಹಲಕ್ಕೆ ಸ್ವತಃ ಧ್ರುವ ಸರ್ಜಾ ಉತ್ತರ ಕೊಟ್ಟಿದ್ದು, ಧ್ರುವ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಹೌದು, ಕಳೆದ ವರ್ಷ ಧ್ರುವ ಸರ್ಜಾ ಅವರ ಸಹೋದರ ಚಿರಂಜೀವಿ ಸರ್ಜಾ ಅವರ ಮದುವೆ ನಟಿ ಮೇಘನಾ ರಾಜ್ ಜೊತೆ ನೆರವೇರಿತ್ತು. ಈ ಮೂಲಕ ಧ್ರುವ ಸರ್ಜಾ ಗೆ ಮದುವೆ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು.
ಧ್ರುವ ಮದುವೆ ಯಾವಾಗ.? ಹುಡುಗಿ ಯಾರು,? ಲವ್ ಮ್ಯಾರೇಜ್ ಅಥವಾ ಆರೇಂಜ್ ಮ್ಯಾರೇಜ್ ಎಂದೆಲ್ಲಾ ಕುತೂಹಲ ಕಾಡಿತು. ಇದಕ್ಕೀಗ ಧ್ರುವ ನೇರವಾದ ಉತ್ತರ ನೀಡಿದ್ದಾರೆ.

ಸದ್ಯಕ್ಕೆ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಧ್ರುವ, 31 ನೇ ಬರ್ತಡೇಯಷ್ಟರಲ್ಲಿ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಲವ್ ಮ್ಯಾರೇಜ್ ಅಥವಾ ಆರೇಂಜ್ ಮ್ಯಾರೇಜ್ ಬಗ್ಗೆ ಸ್ಪಷ್ಟಪಡಿಸಿದ ಧ್ರುವ, ನಾನು ಪಕ್ಕಾ ಲವ್ ಮ್ಯಾರೇಜ್ ಆಗೋದು ಎಂದಿದ್ದಾರೆ.
ಲವ್ ಮ್ಯಾರೇಜ್ ಅಂದಾಕ್ಷಣ, ಧ್ರುವ ಸರ್ಜಾಗೆ ಹುಡುಗಿ ಇದ್ದಾರಾ.? ಯಾರು ಆ ಹುಡುಗಿ, ಲವ್ ಮ್ಯಾರೇಜ್ ಅಂತ ಬೇರೆ ಹೇಳ್ತಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಅದಕ್ಕೆ ಸ್ಪಷ್ಟನೆ ನೀಡಿದ ಧ್ರುವ ಹುಡುಗಿ ಯಾರೂ ಇಲ್ಲ. ಸೋ ಮುಂದೆ ನೋಡೋಣ ಎಂದು ಖಚಿತ ಪಡಿಸಿದ್ದಾರೆ.


Click it and Unblock the Notifications











