twitter
    For Quick Alerts
    ALLOW NOTIFICATIONS  
    For Daily Alerts

    ಬ್ರಾಹ್ಮಣರ ವಿರುದ್ದ 'ಪೊಗರು': ಕಟ್ಟಕಡೆಗೆ ಕಾಡುವ 2 ಪ್ರಶ್ನೆಗಳು

    |

    ಇದೊಂದು ಕಾಲ್ಪನಿಕ ಚಿತ್ರಕಥೆ, ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿಲ್ಲ, ಚಿತ್ರಕಥೆಗೆ ಆ ಸೀನ್ ಬೇಕಿತ್ತು ಎನ್ನುವ ಸ್ಟ್ಯಾಂಡರ್ಡ್ ಉತ್ತರವನ್ನು, ಚಿತ್ರ ವಿವಾದಕ್ಕೆ ಈಡಾದ ನಂತರ ಎಲ್ಲರೂ ಕೊಡುವಂತದ್ದೇ..

    ಆದರೆ, ಮನೋರಂಜನೆ ಎಂದು ಹೇಳಿಕೊಂಡು ಸಮುದಾಯವೊಂದನ್ನು ಅವಹೇಳನ ಮಾಡುವುದು ಎಷ್ಟು ಸರಿ? ಇಂದು ಬ್ರಾಹ್ಮಣರು ಇರಬಹುದು, ಸುಮ್ಮನಿದ್ದರೆ ಇನ್ನೊಂದು ಸಮುದಾಯವೂ ಇರಬಹುದು. ರಾಜ್ಯದ ಪ್ರಬಲ ಸಮುದಾಯಗಳ ತಂಟೆಗೇನಾದರೂ ಹೋಗಿದ್ದರೆ, ಚಿತ್ರತಂಡ ಪ್ರಮೋಶನ್ ಗೆ ಹೋಗುವ ಬದಲು, ವಿರೋಧವನ್ನು ಸಮಾಧಾನಿಸಲೆಂದೇ ಸಮಯ ವಿನಿಯೋಗಿಸಬೇಕಾಗಿತ್ತು.

    'ಪೊಗರು' ಸಿನಿಮಾದ ಪೊಗರು ಇಳಿಸಿದ ಬ್ರಾಹ್ಮಣ ಸಮುದಾಯ: ದೃಶ್ಯ ಕತ್ತರಿಗೆ ಒಪ್ಪಿಗೆ'ಪೊಗರು' ಸಿನಿಮಾದ ಪೊಗರು ಇಳಿಸಿದ ಬ್ರಾಹ್ಮಣ ಸಮುದಾಯ: ದೃಶ್ಯ ಕತ್ತರಿಗೆ ಒಪ್ಪಿಗೆ

    1999ರಲ್ಲಿ ಬಿಡುಗಡೆಯಾದ ಉಪೇಂದ್ರ ಸಿನಿಮಾದಲ್ಲೂ ಬ್ರಾಹ್ಮಣರ ಅವಹೇಳನವಾಗಿತ್ತು. ಆ ಚಿತ್ರದ ಹೀರೋ ಅದೇ ಸಮುದಾಯದವರು ಎಂದು ವಿರೋಧ ವ್ಯಕ್ತವಾಗಿಲ್ಲ ಎಂದೇನೂ ಇಲ್ಲ, ಆಗಲೂ ಆಗಿತ್ತು. ಆದರೆ, ಎರಡು ದಶಕಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾ ಆದಾಗಿದ್ದರಿಂದ ಈಗಿನಂತೆ ಟೆಕ್ನಾಲಜಿ, ಸೋಶಿಯಲ್ ಮಿಡಿಯಾ ಪವರ್ ಪುಲ್ ಆಗಿರಲಿಲ್ಲ.

    ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಿದ 'ಪೊಗರು' ನಿರ್ದೇಶಕ ನಂದ ಕಿಶೋರ್ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಿದ 'ಪೊಗರು' ನಿರ್ದೇಶಕ ನಂದ ಕಿಶೋರ್

    ಏನು ಇಂದು ಕನ್ನಡ ಮತ್ತು ತೆಲುಗು ಬಾಕ್ಸಾಫೀಸ್ ನಲ್ಲಿ ಮತ್ತು ಕಾಂಟ್ರವರ್ಸಿಯಿಂದ ಸದ್ದು ಮಾಡುತ್ತಿರುವ ಪೊಗರು ಸಿನಿಮಾದಲ್ಲಿ, ನಾಯಕ ಪವನಸುತ ಆಂಜನೇಯನ ಭಕ್ತ. ಚಿತ್ರದ ಸನ್ನಿವೇಶವೊಂದರಲ್ಲಿ ನಾಯಕ ಆಂಜನೇಯನ ಪ್ರತಿಮೆಯ ಮುಂದೆ ಕಣ್ಣೀರು ಹಾಕುತ್ತಾ ಡೈಲಾಗ್ ಮೇಲೆ ಡೈಲಾಗ್ ಹೊಡಿತಾನೆ. ನಾಯಕನ ಆರಾಧ್ಯದೈವ ಕೂಡಾ ಒಬ್ಬ ಜನಿವಾರ ಸೂತ್ರಧಾರಿ ಎನ್ನುವುದರ ಬಗ್ಗೆ ನಿರ್ದೇಶಕರಿಗೆ ತಿಳಿದಿಲ್ಲವೇನೋ? ಈ ಚಿತ್ರಕ್ಕೆ ಇಷ್ಟರ ಮಟ್ಟಿಗೆ ವಿರೋಧ ಎದುರಾಗುತ್ತಿರುವುದಕ್ಕೆ ಎರಡು ಕಾರಣಗಳು ಇರಬಹುದು.

    ರಾಜ್ಯದ ಮುಜರಾಯಿ ವ್ಯಾಪ್ತಿಯ ಸಿ-ಪ್ರವರ್ಗದ ದೇವಾಲಯ

    ರಾಜ್ಯದ ಮುಜರಾಯಿ ವ್ಯಾಪ್ತಿಯ ಸಿ-ಪ್ರವರ್ಗದ ದೇವಾಲಯ

    ಚಿತ್ರದಲ್ಲಿ ಕನಿಷ್ಠ ಹತ್ತರಿಂದ ಹನ್ನೆರಡು ಒಂದು ಸಮುದಾಯವನ್ನು ಅವಹೇಳನ ಮಾಡುವ ದೃಶ್ಯ/ಸಂಭಾಷಣೆಗಳಿವೆ. ಚಪ್ಪಲಿಯಿಂದ ಹಿಡಿದು ಮಂಗಳಾರತಿಯವರೆಗೆ ದುಡ್ಡು, ತಟ್ಟೆಕಾಸು ಎನ್ನುವ ಪದಗಳನ್ನು ಬಳಸಲಾಗಿದೆ. ರಾಜ್ಯದ ಮುಜರಾಯಿ ವ್ಯಾಪ್ತಿಯ ಸಿ-ಪ್ರವರ್ಗದ ದೇವಾಲಯಗಳ ಅರ್ಚಕರಿಗೆ ದೇವರಿಗೆ ಹೂವು/ತುಳಸಿ ಹಾಕಲು ತಟ್ಟೆಕಾಸು ಸಾಕಾಗುವುದಿಲ್ಲ, ಕುಟುಂಬ ನಿರ್ವಹಣೆ ನಂತರದ ವಿಚಾರ. ಅಲ್ಲದೇ, ಎಲ್ಲಾ ಸೇವೆಗೂ ದುಡ್ಡು ತೆಗೆದುಕೊಳ್ಳುವ ಪದ್ದತಿ ಬರೀ ಬ್ರಾಹ್ಮಣರ ಮೇಲ್ವಿಚಾರಿಕೆಯಲ್ಲಿ ನಡೆಯುವ ದೇವಾಲಗಳಲ್ಲಿ ಮಾತ್ರ ಇದೆಯಾ?

    ಬ್ರಾಹ್ಮಣರು ಏನು ಮಾಡಿಯಾರು

    ಬ್ರಾಹ್ಮಣರು ಏನು ಮಾಡಿಯಾರು

    ಬ್ರಾಹ್ಮಣರು ಏನು ಮಾಡಿಯಾರು ಎಂದು ಚಿತ್ರತಂಡ ಯೋಚಿಸಿದ್ದಿರಬಹುದು ಮತ್ತು ಈ ಮಟ್ಟಿನ ವಿರೋಧವನ್ನು ನಿರೀಕ್ಷಿಸಿರಲಿಕ್ಕಿಲ್ಲ. ಆದರೆ, ಅತ್ಯಂತ ಗಂಭೀರವಾಗಿ ಆಲೋಚಿಸಬೇಕಾದ ವಿಚಾರ ಏನಂದರೆ, ಸೆನ್ಸಾರ್ ಮಂಡಳಿ ಏನು ಮಾಡುತ್ತಿತ್ತು. ಅದ್ಯಾವ ಆಧಾರದ ಮೇಲೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿತು. ಚಿತ್ರದಲ್ಲಿ ಬರುವ ಅಶ್ಲೀಲ ದೃಶ್ಯ/ಸಂಭಾಷಣೆ/ಹಿಂಸಾತ್ಮಕ ಸನ್ನಿವೇಶಗಳು ಮಾತ್ರ ಸೆನ್ಸಾರ್ ವ್ಯಾಪ್ತಿಗೆ ಬರುತ್ತದಾ?

    ಸೆನ್ಸಾರ್ ಮಂಡಳಿ ಏನು ಮಾಡುತ್ತಿತ್ತು?

    ಸೆನ್ಸಾರ್ ಮಂಡಳಿ ಏನು ಮಾಡುತ್ತಿತ್ತು?

    ಯಾವುದೇ ಒಂದು ಸಮುದಾಯವನ್ನು ಲೇವಡಿ ಮಾಡುವ ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಲು ಸೂಚಿಸುವುದು ಸೆನ್ಸಾರ್ ಕೆಲಸವಲ್ಲವೇ? ಇಂದು ಪೊಗರು ಸಿನಿಮಾ ಈ ಮಟ್ಟಿನ ವಿರೋಧ ಎದುರಿಸುತ್ತಿದೆ ಎಂದರೆ ಅದಕ್ಕೆ ಮೊದಲು ಜವಾಬ್ದಾರಿ ವಹಿಸಬೇಕಾಗಿರುವುದು ಸೆನ್ಸಾರ್ ಮಂಡಳಿ. ಚಿತ್ರ ವೀಕ್ಷಣೆಯ ಸಮಯದಲ್ಲೇ ಆಕ್ಷೇಪಾರ್ಹ ಸನ್ನಿವೇಶಗಳನ್ನು ಬ್ಲರ್/ಮ್ಯೂಟ್/ತೆಗೆದು ಹಾಕಲು ಸೂಚಿಸಿದ್ದರೆ, ಇಂದು ಒಂದು ಸಮುದಾಯಕ್ಕೂ ನೋವಾಗುತ್ತಿರಲಿಲ್ಲ, ಚಿತ್ರತಂಡಕ್ಕೂ ತೊಂದರೆಯಾಗುತ್ತಿರಲಿಲ್ಲ.

    Recommended Video

    ಸೆನ್ಸಾರ್ ನವರು ಸರಿಯಾಗಿ ಇದ್ದಿದ್ರೆ ಎಲ್ಲವೂ ಸರಿ ಆಗ್ತಾ ಇತ್ತು |Sa Ra Govindu|Karnataka Film Chamber|Pogaru
    ಚಿತ್ರದ ನಿರ್ದೇಶಕರು

    ಚಿತ್ರದ ನಿರ್ದೇಶಕರು

    ಇನ್ನೊಂದು, ಚಿತ್ರದ ನಿರ್ದೇಶಕರು ಮತ್ತು ಸಂಭಾಷಣೆಕಾರರು ಒಂದು ಸಮುದಾಯದ ವಿರೋಧಿಗಳಾ ಎನ್ನುವ ಪ್ರಶ್ನೆ ಕಾಡದೇ ಇರದು. ಚಿತ್ರಕಥೆಯನ್ನು ಹಣೆಯುವಾಗ ಸಮುದಾಯವೊಂದನ್ನು ಲೇವಡಿ ಮಾಡುತ್ತಿರುವುದು ಸರಿಯಾ, ಚಿತ್ರ ಬಿಡುಗಡೆಯಾದ ನಂತರ ವಿರೋಧ ವ್ಯಕ್ತವಾದರೆ ಎನ್ನುವ ಕನಿಷ್ಠ ತಿಳುವಳಿಕೆ ಇವರಿಗೆ ಇಲ್ಲದಾಯಿತೇ? ಒಟ್ಟಿನಲ್ಲಿ, ಸೆನ್ಸಾರ್ ಮಂಡಳಿ ಮತ್ತು ನಿರ್ದೇಶಕರೇ ಈಗಿನ ವಿದ್ಯಮಾನಕ್ಕೆ ಹೊಣೆಗಾರರಾಗಬೇಕಿದೆ. ಸಿನಿಮಾ ಎನ್ನುವುದು ಒಂದು ಪ್ರಬಲ ಮಾಧ್ಯಮ, ಹೊಣೆಗಾರಿಕೆಯಿಂದ ಇರಬೇಕಾಗುತ್ತದೆ ಎನ್ನುವುದನ್ನು ಇನ್ನಾದರೂ ಅರಿತುಕೊಳ್ಳಲಿ, ಆಂಜನೇಯ ಎಲ್ಲರಿಗೂ ಸದ್ಭುದ್ದಿಯನ್ನು ನೀಡಲಿ.

    English summary
    Dhruva Sarja Starer Pogaru Movie Controversy: Who Has To Take The Responsibility.
    Wednesday, February 24, 2021, 10:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X