ಅಭಿಮಾನಿಗಳು ಏನಂದ್ರು? 'ಮಾರ್ಟಿನ್' ಮುಂದಿನ ನಡೆ ಏನು?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಕುತೂಹಲ ಮೂಡಿಸಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಪ್ರಚಾರಕ್ಕೆ ಚಾಲನೆ ಕೊಡಲು ಸಿದ್ಧತೆ ನಡೀತಿದೆ.

ಮುಂಬೈನಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಎ. ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಾರ್ಟಿನ್' ಸಿನಿಮಾ ಮೂಡಿ ಬರಲಿದೆ. ಕಳೆದ ವರ್ಷ ಬಂದಿದ್ದ ಟೀಸರ್ ಹಿಟ್ ಆಗಿತ್ತು.

Dhruva Sarja starrar Martin Movie Poll Final Result is here

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ 'ಮಾರ್ಟಿನ್' ಟೀಸರ್ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಪರಭಾಷಾ ಪತ್ರಕರ್ತರನ್ನು ಆಹ್ವಾನಿಸಲಾಗಿತ್ತು. ಇದೀಗ ಮುಂಬೈ ಸುದ್ದಿಗೋಷ್ಠಿ ವಿದೇಶದ ಮಾಧ್ಯಮದವರನ್ನು ಕರೆಸುವ ಪ್ರಯತ್ನ ನಡೀತಿದೆ. ಇನ್ನು ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸುಕೃತಾ ವಾಗ್ಲೆ, ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಚಿಕ್ಕಣ್ಣ, ನವಾಬ್ ಶಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸತ್ಯಾ ಹೆಗಡೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಇನ್ನು ಟೀಸರ್ ಬಳಿಕ ಟ್ರೈಲರ್, ಸಾಂಗ್ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಪೋಲ್ ನಡೆಸಿತ್ತು. ಅಭಿಮಾನಿಗಳು ಮುಂದೆ ಯಾವ ಕಂಟೆಂಟ್ ರಿಲೀಸ್ ಮಾಡಬೇಕು ಎಂದು ನಿರ್ಧರಿಸುವ ಅವಕಾಶ ನೀಡಲಾಗಿತ್ತು.

'ಮಾರ್ಟಿನ್' ಚಿತ್ರತಂಡ ನಡೆಸಿದ ಪೋಲ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 60 ಲಕ್ಷಕ್ಕೂ ಹೆಚ್ಚು ಜನ ವೋಟ್ ಮಾಡಿದ್ದಾರೆ. 46% ರಷ್ಟು ಜನ ಟ್ರೈಲರ್ ಬಿಡುಗಡೆ ಮಾಡುವಂತೆ ಕೇಳಿದ್ದಾರೆ. 33% ರಷ್ಟು ಇಂಟ್ರೊಡಕ್ಷನ್ ಸಾಂಗ್ ಕೇಳಿದ್ರೆ, 11% ರಷ್ಟು ಮಂದಿ ಥಿಯೇಟ್ರಿಕಲ್ ಟ್ರೈಲರ್ ರಿಲೀಸ್ ಮಾಡಿ ಎಂದಿದ್ದಾರೆ.

ಅಭಿಮಾನಿಗಳ ಆಸೆಯಂತೆ 'ಮಾರ್ಟಿನ್' ಜುಲೈ 28ಕ್ಕೆ ಟ್ರೈಲರ್ ರಿಲೀಸ್ ಮಾಡುವ ಪ್ರಯತ್ನ ಶುರುವಾಗುತ್ತಿದೆ. 240 ದಿನಗಳ ಕಾಲ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಗ್ರಾಫಿಕ್ಸ್ ಕೆಲಸಗಳು ಸಾಕಷ್ಟು ಇದೆ. ಇನ್ನು ಚಿತ್ರದ ಹಾಡುಗಳಿಗೆ ಮಣಿಶರ್ಮ ಟ್ಯೂನ್ ಹಾಕಿದ್ದಾರೆ. 'ಪೊಗರು' ಬಳಿಕ ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದಲ್ಲಿ ನಟಿಸಿದ್ದಾರೆ. 3 ವರ್ಷಗಳ ಬಳಿಕ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

More from Filmibeat

English summary
Dhruva Sarja's Martin film Trailer on July 28th;
Read more about: martin dhruva sarja sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X