For Quick Alerts
  ALLOW NOTIFICATIONS  
  For Daily Alerts

  ವಿಐಪಿಗಳಿಗೆ ಭರ್ಜರಿ ನ್ಯೂಸ್: 'ಪುಷ್ಪ' ಅಲ್ಲ 'ಪುಷ್ಪರಾಜ್' ಲುಕ್‌ನಲ್ಲಿ ಟಾಲಿವುಡ್‌ಗೆ ಧ್ರುವ ಎಂಟ್ರಿ!

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶೀಘ್ರದಲ್ಲೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದೇ ತಿಂಗಳು ಧ್ರುವ ನಟ ನಟನೆಯ ಭರ್ಜರಿ ಸಿನಿಮಾ ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದೆ. 'ಮಾರ್ಟಿನ್‌'ಗೂ ಮೊದಲೇ ಸಿಲ್ವರ್‌ ಸ್ಕ್ರೀನ್‌ ಮೇಲೆ 'ಬಹದ್ದೂರ್ ಗಂಡು' ಆರ್ಭಟ ಶುರುವಾಗಲಿದೆ.

  ನಾಲ್ಕೇ ನಾಲ್ಕು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ನಟ ಧ್ರುವ ಸರ್ಜಾ. ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್‌ ಬಿರುದು ಪಡೆದ ಧ್ರುವ ಪೊಗರಿನ ಹುಡುಗನಾಗಿ ನಾಲ್ಕನೇ ಬಾರಿಯೂ ಗೆದ್ದಿದ್ದಾರೆ. 'ಮಾರ್ಟಿನ್' ಅನ್ನುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅದ್ಧೂರಿ ಹುಡುಗ ಬಣ್ಣ ಹಚ್ಚಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾ ರಿಲೀಸ್ ಡೇಟ್ ತಡವಾಗ್ತಿದೆ. ಇಂತಹ ಹೊತ್ತಲ್ಲೇ ಧ್ರುವ ತೆಲುಗು ಸಿಲ್ವರ್‌ ಸ್ಕ್ರೀನ್‌ ಮೇಲೆ ದರ್ಬಾರ್ ನಡೆಸೋ ಸುದ್ದಿ ಬಂದಿದೆ.

  ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದ ರಿಲೀಸ್ ಮುಂದೂಡಿಕೆ?ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದ ರಿಲೀಸ್ ಮುಂದೂಡಿಕೆ?

  ಧ್ರುವ ಸರ್ಜಾ ನಟನೆಯ ಮಸಾಲಾ ಎಂಟರ್‌ಟೈನರ್ 'ಭರ್ಜರಿ' ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಆಗಸ್ಟ್ 27ಕ್ಕೆ ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ತೆರಗಪ್ಪಳಿಸಲಿದೆ. ಈಗಾಗಲೇ ತೆಲುಗು ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದ್ದು, ಇಂದು(ಆಗಸ್ಟ್ 8) ಹೈದರಾಬಾದ್‌ನ ಪ್ರಸಾದ್ ಲ್ಯಾಬ್‌ನಲ್ಲಿ ಸಿನಿಮಾ ಟ್ರೈಲರ್ ಕಾರ್ಯಕ್ರಮ ನಡೀತು. ನಿರ್ಮಾಪಕ ರವೀಂದ್ರ ಕಲ್ಯಾಣ್ ನೇತೃತ್ವದಲ್ಲಿ ಸಿನಿಮಾ ತೆಲುಗು ಪ್ರೇಕ್ಷಕರು ಮುಂದೆ ಹೋಗುತ್ತಿದೆ.

   'ಪುಷ್ಪರಾಜ್- ದಿ ಸೋಲ್ಜರ್' ಟೈಟಲ್

  'ಪುಷ್ಪರಾಜ್- ದಿ ಸೋಲ್ಜರ್' ಟೈಟಲ್

  ಬಹದ್ಧೂರ್ ಚೇತನ್ ಕುಮಾರ್ ನಿರ್ದೇಶನದ 'ಭರ್ಜರಿ' ಸಿನಿಮಾ 2017ರಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಈ ಚಿತ್ರವನ್ನು 'ಪುಷ್ಪರಾಜ್- ದಿ ಸೋಲ್ಜರ್' ಹೆಸರಿನಲ್ಲಿ ತೆಲುಗಿಗೆ ಡಬ್‌ ಮಾಡಲಾಗಿದೆ. ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಆ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಹೆಸರು 'ಪುಷ್ಪರಾಜ್'. ಇದೀಗ ಇದೇ ಹೆಸರಿನಲ್ಲಿ ಧ್ರುವ ಸರ್ಜಾ 'ಭರ್ಜರಿ' ಸಿನಿಮಾ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದು ವಿಶೇಷ.

   'ಭರ್ಜರಿ' ಶತದಿನೋತ್ಸವ

  'ಭರ್ಜರಿ' ಶತದಿನೋತ್ಸವ

  ಸೈನಿಕನಾಗಬೇಕು ಎಂದು ಕನಸು ಕಂಡ ನಾಯಕ ಸೂರ್ಯ ಚಿಕ್ಕಂದಿನಲ್ಲೇ ಕೈ ಮೇಲೆ ಸೋಲ್ಜರ್ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಹಾಗಾಗಿ ತೆಲುಗಿನಲ್ಲಿ ಚಿತ್ರಕ್ಕೆ 'ಪುಷ್ಪರಾಜ್- ದಿ ಸೋಲ್ಜರ್' ಅನ್ನೋ ಟೈಟಲ್‌ ಫೈನಲ್ ಮಾಡಿದ್ದಾರೆ. ವಿ. ಹರಿಕೃಷ್ಣ ಮ್ಯೂಸಿಕ್‌ನಲ್ಲಿ 'ಭರ್ಜರಿ' ಆಲ್ಬಮ್ ಹಿಟ್ ಆಗಿತ್ತು. ಇದೀಗ ತೆಲುಗು ವರ್ಷನ್ ಆಡಿಯೋ ಲಾಂಚ್ ಆಗಿದೆ. ಕನ್ನಡದಲ್ಲಿ ಸಿನಿಮಾ ಶತದಿನೋತ್ಸವ ಅಚರಿಸಿಕೊಂಡಿತ್ತು. ಹಾಗಾಗಿ ಟಾಲಿವುಡ್‌ನಲ್ಲೂ ಕುತೂಹಲ ಕೆರಳಿಸಿದೆ.

   ತೆಲುಗು ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಚಿತ್ರ

  ತೆಲುಗು ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಚಿತ್ರ

  ಮಾಸ್ ಸಬ್ಜೆಕ್ಟ್, ಭರ್ಜರಿ ಫೈಟ್ಸ್, ಬಿಂದಾಸ್ ಸಾಂಗ್ಸ್, ಮೂವರು ನಾಯಕಿಯರು. ಹೀಗೆ 'ಭರ್ಜರಿ' ಪಕ್ಕಾ ಮಾಸ್ ಮಾಸಾಲಾ ಎಂಟರ್‌ಟೈನರ್‌ ಸಿನಿಮಾ. ತೆಲುಗು ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತಹ ಸಿನಿಮಾ ಅನ್ನಬಹುದು. ಅದೇ ಕಾರಣಕ್ಕೆ ಚಿತ್ರವನ್ನು ಡಬ್ ಮಾಡಿ ಅಲ್ಲಿನ ನಿರ್ಮಾಪಕರು ಬಿಡುಗಡೆಗೆ ಮಾಡಲು ಸಿದ್ಧತೆ ನಡೆಸಿದ್ದಾರೆ. ದೊಡ್ಡ ಮಟ್ಟದಲ್ಲೇ ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ ದೀಪಕ್ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.

   ದಸರಾ ಹಬ್ಬಕ್ಕಿಲ್ಲ 'ಮಾರ್ಟಿನ್‌' ಅಬ್ಬರ

  ದಸರಾ ಹಬ್ಬಕ್ಕಿಲ್ಲ 'ಮಾರ್ಟಿನ್‌' ಅಬ್ಬರ

  ಇನ್ನು ಧ್ರುವ ಸರ್ಜಾ ಸಿನಿಮಾಗಳ ಬಗ್ಗೆ ಹೇಳುವುದಾದರೆ 'ಮಾರ್ಟಿನ್‌' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ ಪೋನ್ ಆಗಿದೆ. ಉದಯ್ ಮೆಹ್ತಾ ನಿರ್ಮಾಣದ ಈ ಚಿತ್ರವನ್ನು ಎ. ಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ ಶೂಟಿಂಗ್ ತಡವಾಗುತ್ತಿರುವುದರಿಂದ ರಿಲೀಸ್ ಮುಂದೂಡಲಾಗಿದೆ.

  Recommended Video

  ಅಕ್ಷತಾ ಕುಕ್ಕಿ ನಿಜ ಜೀವನ ಹೇಗೆ? | Bigg Boss OTT| Akshatha Kukki *Bigg Boss
  English summary
  Dhruva Sarja Starrer Bharjari Movie Dubbed To Telugu Releasing Soon. Know More.
  Tuesday, August 9, 2022, 10:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X