ಹ್ಯಾಟ್ರಿಕ್ ಹಿಟ್ ಮೂಲಕ ಶತದಿನೋತ್ಸವ ಪೂರೈಸಿದ 'ಭರ್ಜರಿ'ಯ ಧ್ರುವ ಸರ್ಜಾ
'ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ ಶತದಿನೋತ್ಸವ ಪೂರೈಸಿದೆ. 'ಬಹದ್ದೂರ್' ಚಿತ್ರದ ನಂತರ ನಿರ್ದೇಶಕ ಚೇತನ್ ಹಾಗೂ ಧ್ರುವ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಎರಡನೇ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಹರಿಪ್ರಿಯ ನಾಯಕಿಯರಾಗಿ ಅಭಿನಯಿಸಿದ್ದರು.
ಕೆ ಜಿ ರಸ್ತೆಯಲ್ಲಿರುವ ನರ್ತಕಿ ಥಿಯೇಟರ್ ಬಳಿ 'ಅಖಿಲ ಕರ್ನಾಟಕ "ಧ್ರುವ ಸರ್ಜಾ"' ಅಭಿಮಾನಿಗಳ ಸಂಘ ವತಿಯಿಂದ ಶತದಿನೋತ್ಸವದ ಸಂಭ್ರಮವನ್ನ ಆಚರಣೆ ಮಾಡಲಾಯಿತು. 'ಡೊಳ್ಳು ಕುಣಿತ'ದ ಮೂಲಕ ನಟ ಧ್ರುವ ಸರ್ಜಾ ಅವರನ್ನ ಚಿತ್ರಮಂದಿರಕ್ಕೆ ಕರೆತರಲಾಯ್ತು. 75 ಅಡಿ ಎತ್ತರದ ಕಟೌಟ್ ಗೆ ಬೃಹತ್ ಗಾತ್ರದ ಹಾರವನ್ನ ಹಾಕಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂತಸವನ್ನ ವ್ಯಕ್ತ ಪಡಿಸಿದರು.

'ಭರ್ಜರಿ' ಸಿನಿಮಾ ಬಿಡುಗಡೆ ಆಗಿ ಇಂದಿಗೆ 102 ದಿನಗಳು ಕಳೆದಿವೆ. ಆದ್ದರಿಂದ ಥಿಯೇಟರ್ ಮುಂದೆ 102 ಕೆಜಿ ತೂಕದ ಕೇಕ್ ಕತ್ತರಿಸಲಾಯಿತು. ಧ್ರುವ ಸರ್ಜಾ ಕಟೌಟ್ ಮುಂದೆ 102 ತೆಂಗಿನಕಾಯಿಗಳನ್ನ ಹೊಡೆದರು ಭರ್ಜರಿ ಸಂಭ್ರಮಕ್ಕೆ ಚಾಲನೆ ನೀಡಿದರು.

ರಾಜ್ಯದ ಸಾಕಷ್ಟು ಥಿಯೇಟರ್ ಗಳಲ್ಲಿ 'ಭರ್ಜರಿ' ಚಿತ್ರ ತುಂಬು ಪ್ರದರ್ಶನ ಕಾಣುತ್ತಿದೆ. ಭರ್ಜರಿ ಶತದಿನೋತ್ಸವ ಆಚರಣೆ ಮಾಡುವ ಮೂಲಕ ಧ್ರುವ ಸರ್ಜಾ ಕನ್ನಡ ಸಿನಿಮಾರಂಗಕ್ಕೆ ಹ್ಯಾಟ್ರಿಕ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಸದ್ಯ ನಂದಕಿಶೋರ್ ನಿರ್ದೇಶನದ ಪೂಗರು ಚಿತ್ರದಲ್ಲಿ ಧ್ರುವ ಸರ್ಜಾ ಆಕ್ಟ್ ಮಾಡುತ್ತಿದ್ದಾರೆ.


Click it and Unblock the Notifications











