»   » 'ಟೀಸರ್'ನಲ್ಲೇ ಘರ್ಜಿಸಿದ 'ಆಕ್ಷನ್ ಪ್ರಿನ್ಸ್' ಧ್ರುವ

'ಟೀಸರ್'ನಲ್ಲೇ ಘರ್ಜಿಸಿದ 'ಆಕ್ಷನ್ ಪ್ರಿನ್ಸ್' ಧ್ರುವ

Posted By:
Subscribe to Filmibeat Kannada

'ಅದ್ಧೂರಿ', 'ಬಹುದ್ದೂರ್' ನಂತರ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾದ ಬಗ್ಗೆ ನಿರೀಕ್ಷೆ, ಕುತೂಹಲ, ಕಾತುರ ಎಲ್ಲವೂ ಹೆಚ್ಚಾಗಿದೆ. ಆಕ್ಷನ್ ಹುಡುಗನ ಅಬ್ಬರ ನೋಡಲು ಪ್ರೇಕ್ಷಕರು ಕಾದು ಕುಂತಿದ್ದಾರೆ. ಹೀಗಿರುವಾಗ, ಚಿತ್ರದ ಟೀಸರ್ ರಿಲೀಸ್ ಮಾಡಿರುವ 'ಭರ್ಜರಿ' ಚಿತ್ರದ ಬಗ್ಗೆ ಇದ್ದ ಎಕ್ಸ್ ಪೆಕ್ಟೇಶನ್ ಡಬಲ್ ಮಾಡಿದೆ.

ಬಿಡುಗಡೆಗೆ ಸಜ್ಜಾಗಿರುವ 'ಭರ್ಜರಿ' ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡಲಿದೆ. ಅದರ ಜೊತೆಗೆ ಡೈಲಾಗ್ ಟೀಸರ್ ವೊಂದನ್ನ ಕೂಡ ಲಾಂಚ್ ಮಾಡಲಿದೆ. ಈ ಮಧ್ಯೆ ಒಂದು ನಿಮಿಷದ ಟೀಸರ್ ರಿಲೀಸ್ ಮಾಡಿದ್ದು, ಧ್ರುವ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Dhruva sarja starrer Bharjari New Teaser out

ಅಂದ್ಹಾಗೆ, ಈ ಚಿತ್ರವನ್ನ 'ಬಹುದ್ದೂರ್' ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಧ್ರುವ ಸರ್ಜಾಗೆ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಚಿತ್ರದ ಮುಖ್ಯಪಾತ್ರವೊಂದರಲ್ಲಿ ಹರಿಪ್ರಿಯಾ ಕೂಡ ಕಾಣಿಸಿಕೊಂಡಿದ್ದಾರೆ.

ವಿ.ಹರಿಕೃಷ್ಣ ಅವರ ಸಂಗೀತವಿರುವ ಈ ಚಿತ್ರವನ್ನ ಕನಕಪುರ ಶ್ರೀನಿವಾಸ್ ಅವರು ನಿರ್ಮಾಣ ಮಾಡಿದ್ದಾರೆ. ಬಹುತೇಕ ಸಿನಿಮಾ ಮುಗಿಸಿರುವ ಭರ್ಜರಿ ಆದಷ್ಟೂ ಬೇಗ ತೆರೆಗೆ ಬರಲಿದೆ.

English summary
action prince Dhruva sarja starrer Kannada Movie 'Bharjari' Teaser is out and looks Dashing/Rocking. Watch Teaser here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada