ಗ್ಯಾಂಗ್‌ಸ್ಟರ್ ಕಥೆ, ವಿಲನ್ ಹೆಸರೇ 'ಮಾರ್ಟಿನ್'? ಅದ್ಕೆ ಟ್ರೈಲರ್ ಬಿಟ್ಟಿಲ್ವಾ?

ಎ.ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈ ವರ್ಷದ ಅತಿದೊಡ್ಡ ಕನ್ನಡ ಸಿನಿಮಾ ಇದು. ಉದಯ್ ಕೆ ಮೆಹ್ತಾ ಚಿತ್ರಕ್ಕೆ ಹಣ ಹೂಡಿದ್ದು ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ದಸರಾ ಸಂಭ್ರಮದಲ್ಲಿ ಬರ್ತಿರೋ 'ಮಾರ್ಟಿನ್'ಗೆ ಬಾಕ್ಸಾಫೀಸ್‌ನಲ್ಲಿ 'ವೆಟ್ಟೆಯಾನ್' ಪೈಪೋಟಿ ಎದುರಾಗುತ್ತಿದೆ. ಆಕ್ಷನ್ ಪ್ರಿನ್ಸ್ ಆಕ್ಷನ್ ಧಮಾಕ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಈಗಾಗಲೇ ಕೆಲವರು ಟಿಕೆಟ್ ಬುಕ್ ಮಾಡಿಕೊಂಡು ಮೊದಲ ದಿನವೇ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಫ್ಯಾನ್ಸ್ ಶೋ ಏರ್ಪಡಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿರುವುದು ವಿಶೇಷ.

Dhruva sarja starrer Martin film plot and star cast advance booking

ಬಹುಕೋಟಿ ವೆಚ್ಚದ 'ಮಾರ್ಟಿನ್' ಸಿನಿಮಾ ಕಥೆಯೇನು? ಎನ್ನುವ ಬಗ್ಗೆ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿಲ್ಲ. ಭಾರತೀಯನೊಬ್ಬ ಪಾಕಿಸ್ತಾನದ ದಾಟಿ ಹೋಗುತ್ತಾನೆ. ಪಾಕಿಸ್ತಾನ ಸೈನ್ಯದ ಕೈಗೆ ಸಿಕ್ಕಿಬೀಳುವ 'ಮಾರ್ಟಿನ್' ಹೇಗೆಲ್ಲಾ ಅಬ್ಬರಿಸುತ್ತಾನೆ ಎನ್ನುವ ಕಥೆ ಚಿತ್ರದಲ್ಲಿದೆ. ಅಷ್ಟಕ್ಕೂ ಆತ ಪಾಕಿಸ್ತಾನದ ಗಡಿ ದಾಟಿ ಹೋಗುವುದು ಯಾಕೆ? ಮುಂದೇನಾಗುತ್ತದೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

'ಮಾರ್ಟಿನ್' ಟ್ರೈಲರ್ ಬಿಡಗಡೆ ಮಾಡಿಲ್ಲ ಎನ್ನುವ ಬೇಸರ ಕೆಲವರಲ್ಲಿದೆ. ಟ್ರೈಲರ್ ಚಿತ್ರಕ್ಕೆ ಹೈಪ್ ತಂದು ಕೊಡುವ ಸಾಧ್ಯತೆ ಇರುತ್ತದೆ. ಆದರೆ ಯಾಕೆ ಚಿತ್ರತಂಡ ಈ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಿದೆ ಎಂದು ಕೆಲವರು ಕೇಳುತ್ತಿದ್ದಾರೆ. ಟ್ರೈಲರ್ ಬಿಡುಗಡೆ ಆದರೆ ಚಿತ್ರದ ಕಥೆ ರಿವೀಲ್ ಆಗುವ ಸಾಧ್ಯತೆಯಿದೆ. ಆ ಕುತೂಹಲವನ್ನು ಬೆಳ್ಳಿ ಪರದೆವರೆಗೂ ಉಳಿಸಿಕೊಳ್ಳಲು ಚಿತ್ರತಂಡ ಈ ನಿರ್ಣಯಕ್ಕೆ ಬಂದಿರುವ ಸಾಧ್ಯತೆಯಿದೆ.

ಇದೊಂದು ಗ್ಯಾಂಗ್‌ಸ್ಟರ್ ಕಥೆ ಎಂದು ನಿರ್ದೇಶಕರು ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಯಾರು? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಇನ್ನು ಚಿತ್ರದ ಟೈಟಲ್ 'ಮಾರ್ಟಿನ್'. ಸಾಮಾನ್ಯವಾಗಿ ನಾಯಕನ ಹೆಸರನ್ನೇ ಚಿತ್ರದ ಟೈಟಲ್ ಆಗಿ ಇಡಲಾಗುತ್ತದೆ. ಈ ಚಿತ್ರದಲ್ಲಿ ಆ ರೀತಿ ಮಾಡಿಲ್ಲ. ಇಲ್ಲಿ ನಾಯಕನ ಹೆಸರು ಅರ್ಜುನ್. ಹಾಗಿದ್ರೆ 'ಮಾರ್ಟಿನ್' ಯಾರು ಎನ್ನುವ ಕುತೂಹಲಕ್ಕೆ ತೆರೆಮೇಲೆ ಬ್ರೇಕ್ ಬೀಳಲಿದೆ.

ಸಂದರ್ಶನವೊಂದರಲ್ಲಿ ಧ್ರುವ ಸರ್ಜಾ ಈ ಬಗ್ಗೆ ಮಾತನಾಡಿದ್ದಾರೆ. 'ಗಜಿನಿ' ಚಿತ್ರದಲ್ಲಿ ವಿಲನ್ ಹೆಸರನ್ನೇ ಟೈಟಲ್ ಆಗಿ ಇಡಲಾಗಿತ್ತು. ಅದೇ ರೀತಿ ಈ ಚಿತ್ರದಲ್ಲಿ 'ಮಾರ್ಟಿನ್' ಯಾರು ಎನ್ನುವುದನ್ನು ಕಾದು ನೋಡಿ ಎಂದಿದ್ದಾರೆ. ಇನ್ನು ವಿದೇಶದ ಬಾಡಿ ಬಿಲ್ಡರ್‌ಗಳ ಜೊತೆ ಚಿತ್ರದಲ್ಲಿ ಧ್ರುವ ಸರ್ಜಾ ಕಾದಾಡಿದ್ದಾರೆ.

ಅಡ್ವಾನ್ಸ್ ಬುಕ್ಕಿಂಗ್ ವಿಚಾರಕ್ಕೆ ಬಂದರೆ ಮೊದಲ ದಿನ ಬೆಂಗಳೂರಿನಲ್ಲಿ 450ಕ್ಕೂ ಅಧಿಕ ಶೋಗಳು ನಿಗದಿಯಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. 20ಕ್ಕೂ ಅಧಿಕ ಶೋಗಳು ಸೋಲ್ಡೌಟ್ ಹಾಗೂ ಫಾಸ್ಟ್‌ ಫಿಲ್ಲಿಂಗ್ ಇದೆ. ನಿಧಾನವಾಗಿ ಟಿಕೆಟ್ ಬುಕ್ಕಿಂಗ್ ಜೋರಾಗುತ್ತಿದೆ. ನಿನ್ನೆಗಿಂತ ಇವತ್ತು ಬುಕ್ಕಿಂಗ್ ಚೆನ್ನಾಗಿದೆ. ನಾಳೆ ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆ ಮೇಲೆ 'ಮಾರ್ಟಿನ್' ಚಿತ್ರದ ಭವಿಷ್ಯ ನಿರ್ಧಾರವಾಗಲಿದೆ. ಉತ್ತಮ ಪ್ರತಿಕ್ರಿಯೆ ಸಿಕ್ಕರೆ ದಸರಾ ಸಂಭ್ರಮದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಲಿದೆ.

ಕನ್ನಡ ಮಾತ್ರವಲ್ಲದೇ 10ಕ್ಕೂ ಅಧಿಕ ಭಾಷೆಗಳಿಗೆ 'ಮಾರ್ಟಿನ್' ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ವೈಭವಿ ಶಾಂಡಿಲ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್‌ ಕುಮಾರ್, ಸಾಧು ಕೋಕಿಲ, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರವಿ ಬಸ್ರೂರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸತ್ಯಾ ಹೆಗಡೆ ಛಾಯಾಗ್ರಹಣ ಹಾಗೂ ಮಣಿಶರ್ಮ ಸಂಗೀತ(ಹಾಡುಗಳು) ಚಿತ್ರಕ್ಕಿದೆ.

More from Filmibeat

English summary
Why Martin film makers decided to not release trailer?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X