ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಅವತಾರಕ್ಕೆ ಅಭಿಮಾನಿಗಳು ಫಿದಾ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾದ ಫೋಸ್ಟರ್ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ ಈಗಾಗಲೇ ವೈರಲ್ ಆಗಿರುವ ಹಾಗೆ ಚಿತ್ರಕ್ಕೆ 'ಮಾರ್ಟಿನ್' ಎನ್ನುವ ಹೆಸರೇ ಫೈನಲ್ ಆಗಿದೆ. ಧ್ರುವ ಸರ್ಜಾ ಮಾರ್ಟಿನ್ ಲುಕ್ ಭರ್ಜರಿಯಾಗಿದ್ದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಧ್ರುವ ಹೊಸ ಸಿನಿಮಾದಲ್ಲಿ ಕೈಗೆ ಬೇಡಿ ಹಾಕಿದ್ದರೂ, ಸಿಗರೇಟು ಸೇದುತ್ತಾ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಧ್ರುವ ಸಿಕ್ಸ್ ಪ್ಯಾಕ್ ಬಾಡಿ ಪೋಸ್ಟರ್ ನ ತೂಕವನ್ನು ಹೆಚ್ಚಿಸಿದೆ.

ಅಂದಹಾಗೆ 'ಮಾರ್ಟಿನ್' ಎಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. ರೊಮ್ಯಾಂಟಿಕ್ ಸಿನಿಮಾಗಳನ್ನು ಹೆಚ್ಚಾಗಿ ಮಾಡುತ್ತ ಎಪಿ ಅರ್ಜುನ್ ಮಾರ್ಟಿನ್ ಮೂಲಕ ಮಾಸ್ ಕಥೆ ಹೇಳಲು ಹೊರಟಿದ್ದಾರೆ. ಇನ್ನು ವಿಶೇಷ ಎಂದರೆ ಮಾರ್ಟಿನ್ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ. ಇಂದು ಬಿಡುಗಡೆಯಾಗಿರುವ ಫಸ್ಟ್ ಲುಕ್ ಎಲ್ಲಾ ಭಾಷೆಯಲ್ಲೂ ಇದೆ.

Dhruva Sarja starrer Martin Movie First look teaser release For Independence Day special

ಅಂದಹಾಗೆ ಎಪಿ ಅರ್ಜುನ್, ಧ್ರುವ ಸರ್ಜಾ ಚೊಚ್ಚಲ ಸಿನಿಮಾಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕ. ಮೊದಲ ಸಿನಿಮಾದಲ್ಲೇ ಬ್ರೇಕ್ ಕೊಟ್ಟ ನಿರ್ದೇಶಕರ ಜೊತೆ ಮತ್ತೆ ಸಿನಿಮಾ ಮಾಡುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ ಫಸ್ಟ್ ಲುಕ್ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಅಂದಹಾಗೆ ಮಾರ್ಟಿನ್ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಆರಂಭದಲ್ಲೇ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ಚಿತ್ರದ ಹೊ ವೋಲ್ಟೇಜ್ ಆಕ್ಷನ್ ದೃಶ್ಯವನ್ನು ದಕ್ಷಿಣ ಭಾರತದ ಖ್ಯಾತ ಸಾಹಸ ಕಲಾವಿದರಾದ ರಾಮ್-ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆಯೂ ಮೊದಲೇ ಆಡಿಯೋ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ.

ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗುವ ಮೊದಲೇ ಆಡಿಯೋ ಹಕ್ಕು ಮಾರಾಟವಾಗಿದೆ. ಮಾರ್ಟಿನ್ ಸಿನಿಮಾದ ಆಡಿಯೋವನ್ನು ದಕ್ಷಿಣ ಭಾರತದ ಪ್ರಸಿದ್ಧ ಆಡಿಯೋ ಸಂಸ್ಥೆ ಲಹರಿ ಮ್ಯೂಸಿಕ್ ತನ್ನದಾಗಿಸಿಕೊಂಡಿದೆ. ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇತ್ತೀಚಿಗಷ್ಟೆ ಕೆಜಿಎಫ್-2 ಮತ್ತು ಆರ್ ಆರ್ ಆರ್ ಸಿನಿಮಾದ ಆಡಿಯೋ ಖರೀದಿ ಮಾಡಿದ ಬೆನ್ನಲ್ಲೇ ಮಾರ್ಟಿನ್ ಆಡಿಯೋವನ್ನು ಖರೀದಿ ಮಾಡಿದೆ.

Dhruva Sarja starrer Martin Movie First look teaser release For Independence Day special

ಧ್ರುವ ಸರ್ಜಾ ನಟನೆಯ 5ನೇ ಸಿನಿಮಾ ಇದಾಗಿದೆ. ಈ ಸಿನಿಮಾದೂ ಮೊದಲು ಧ್ರುವ ದುಬಾರಿ ಸಿನಿಮಾಗೆ ಸಹಿ ಮಾಡಿದ್ದರು. ನಿರ್ದೇಶಕ ಸಾರಥ್ಯದಲ್ಲಿ ಸಿನಿಮಾ ಮೂಡಿಬರಬೇಕಿತ್ತು. ಆದರೆ ಸಿನಿಮಾ ಪ್ರಾರಂಭದಲ್ಲೇ ನಿಂತುಹೋಗಿದೆ. ಸದ್ಯಕ್ಕೆ ಆಸಿನಿಮಾವನ್ನು ಬಿದಿಗಿಟ್ಟು ಮಾರ್ಟಿನ್ ಕೈಗೆತ್ತಿಕೊಂಡಿದ್ದಾರೆ.

ಧ್ರುವ ಮತ್ತು ಎಪಿ ಅರ್ಜುನ್ ಕಾಂಬಿನೇಷ್ ನ ಮೊದಲ ಸಿನಿಮಾ 'ಅದ್ದೂರಿ' ಬಿಡುಗಡೆಯಾಗಿ 9 ವರ್ಷಗಳು ಕಳೆದಿವೆ. 2012ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಮತ್ತೆ ಒಂದಾಗಿರುವ ಧ್ರುವ-ಅರ್ಜುನ್ ಸಿನಿಮಾಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇನ್ನು ಧ್ರುವ ಸರ್ಜಾ ಬಳಿ ಈ ಸಿನಿಮಾ ಜೊತೆಗೆ 'ಜೋಗಿ' ಪ್ರೇಮ್ ಜೊತೆಯೂ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಪ್ರೇಮ್ ತಮ್ಮ ಮುಂದಿನ ಸಿನಿಮಾವನ್ನು ಆಗಸ್ಟ್ 24 ರಂದು ಘೋಷಣೆ ಮಾಡಲಿದ್ದಾರೆ. ಅದಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿ ಪೂಜೆ ಸಹ ಮಾಡಿದ್ದರು. ಈ ಚಿತ್ರಕ್ಕೆ ಹೀರೋ ಯಾರಾಗ್ತಾರೆ ಎನ್ನುವ ಕುತೂಹಲ ಹೆಚ್ಚಿದ್ದು, ಧ್ರುವ ಸರ್ಜಾ ಹೆಸರು ಜೋರಾಗಿ ಚರ್ಚೆಯಲ್ಲಿದೆ. ಇನ್ನು ಜಗ್ಗುದಾದ ನಿರ್ದೇಶನ ಮಾಡಿದ್ದ ರಾಘವೇಂದ್ರ ಹೆಗ್ಡೆ ಜೊತೆಯೂ ಧ್ರುವ ಸಿನಿಮಾವೊಂದಕ್ಕೆ ಕಮಿಟ್ ಆಗಿದ್ದಾರೆ ಎನ್ನಲಾಗಿದೆ.

More from Filmibeat

English summary
Kannada Actor Dhruva Sarja starrer Martin Movie First look teaser release For Independence Day special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X