ಧ್ರುವ ಸರ್ಜಾ-ಎಪಿ ಅರ್ಜುನ್ ಜೋಡಿಯ 'ಮಾರ್ಟಿನ್‌' ರಿಲೀಸ್‌ ಡೇಟ್‌ ಫಿಕ್ಸ್

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮತ್ತೆ ಗಾಂಧಿನಗರದಲ್ಲಿ ಸೌಂಡ್ ಮಾಡಲು ಬರುತ್ತಿದ್ದಾರೆ. ಈಗಾಗಲೇ 'ಪೊಗರು' ಸಿನಿಮಾದಲ್ಲಿ ಅದ್ಧೂರಿಯಾಗಿ ನಟಿಸಿ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಧ್ರುವ ಈಗ 'ಮಾರ್ಟಿನ್' ಅವತಾರವೆತ್ತಿ ಮತ್ತೆ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ.

'ಬಹದ್ದೂರ್ ಗಂಡು' ಧ್ರುವ ಸರ್ಜಾ ಮತ್ತೆ ಭರ್ಜರಿಯಾಗಿ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾರೆ. 'ಪೊಗರು' ಬಳಿಕ ಈಗ ಮಾರ್ಟಿನ್‌ ಅವತಾರದಲ್ಲಿ ಕ್ರೈಂ ಲೋಕದ ಕಥೆ ಹೇಳಲು ಸಿದ್ದರಾಗಿದ್ದಾರೆ. ಸದ್ಯ 'ಮಾರ್ಟಿನ್‌' ಸಿನಿಮಾದ ಬಿಡುಗಡೆ ಡೇಟ್ ಫಿಕ್ಸ್ ಆಗಿದ್ದು, ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾ ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ.

ಧ್ರುವ ಸರ್ಜಾ ಅಭಿನಯದ 5ನೇ ಸಿನಿಮಾ 'ಮಾರ್ಟಿನ್'. ಈ ಸಿನಿಮಾದ ರಿಲೀಸ್ ಡೇಟ್ ಅನ್ನು ಇಂದು (ಮೇ 5) ಅನೌನ್ಸ್ ಮಾಡಿದ್ದು, ಅಭಿಮಾನಿಗಳಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸೆಪ್ಟೆಂಬರ್‌ 30 ರಂದು ಸಿನಿಮಾವನ್ನು ತೆರೆ ಮೇಲೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದು, ಅಂದು ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಹಬ್ಬ ಆಚರಣೆ ಮಾಡಲಿದ್ದಾರೆ.

Dhruva Sarja Starrer Martin Movie Releasing on September 30th

ನಿರ್ದೇಶಕ ಎಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್‌ ಅಲ್ಲಿ 'ಮಾರ್ಟಿನ್‌' ಚಿತ್ರ ಬರುತ್ತಿದ್ದು, ಈ ಬಾರಿಯೂ ತೆರೆ ಮೇಲೆ ಮೋಡಿ ಮಾಡಲು ಅದ್ದೂರಿಯಾಗಿಯೇ ಸಿದ್ದತೆ ಮಾಡಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ಅದ್ದೂರಿ ಚಿತ್ರ ಕೂಡ ಭರ್ಜರಿ ಯಶಸ್ಸು ಕಂಡಿತ್ತು. ಧ್ರುವ ಸರ್ಜಾಗೆ ಈ ಸಿನಿಮಾ ಭಾರೀ ಯಶಸ್ಸು ತಂದು ಕೊಟ್ಟಿತ್ತು. ಇದಾದ ಬಳಿಕ ಬಂದ 'ಬಹುದ್ಧೂರ್ ಗಂಡು', 'ಭರ್ಜರಿ', 'ಪೊಗರು' ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. ಸದ್ಯ ಈಗ 'ಮಾರ್ಟಿನ್‌' ಕೂಡ ಅಬ್ಬರಿಸಲು ರೆಡಿಯಾಗಿದ್ದು, ಸೆಪ್ಟೆಂಬರ್‌ 30 ಕ್ಕೆ ಬೆಳ್ಳಿತೆರೆ ಮೇಲೆ ಬರ್ತಿದ್ದೇವೆ ಅಂತ ನಿರ್ಮಾಪಕ ಉದಯ್ ಕೆ ಮೆಹ್ತಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಒಟ್ನಲ್ಲಿ 'ಪೊಗರು' ಸಿನಿಮಾ ಬಳಿಕ ಲಾಂಗ್‌ ಗ್ಯಾಪ್‌ ತೆಗೆದುಕೊಂಡಿದ್ದ ಧ್ರುವ ಸರ್ಜಾ ಈಗ ಮತ್ತೆ ಮಾರ್ಟಿನ್‌ ಆಗಿ ಜನರನ್ನು ರಂಜಿಸಲು ಬರ್ತಿದ್ದಾರೆ. ಇದೇ ಮೊದಲ ಬಾರಿಗೆ ಕ್ರೈಂ ಲೋಕದ ಸುತ್ತ ಹೆಣೆದಿರುವ ಸಿನಿಮಾದಲ್ಲಿ ಧ್ರುವ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾದಲ್ಲಿ ಡೈಲಾಗ್ ಕಮ್ಮಿಯಿದೆ.

Dhruva Sarja Starrer Martin Movie Releasing on September 30th

ಫೈಟಿಂಗ್ ಹಾಗೂ ಮಾಸ್ ಎಲಿಮೆಂಟ್‌ಗಳು ಜಾಸ್ತಿ ಇರಲಿವೆ. ಹೀಗಾಗಿ ಧ್ರುವ ಅಭಿಮಾನಿಗಳಿಗೆ ಈ ಸಿನಿಮಾ ಭರ್ಜರಿ ರಸದೌತಣ ಬಡಿಸಲಿದೆ. ಸೆಪ್ಟೆಂಬರ್‌ನಲ್ಲಿ ಆಕ್ಷನ್ ಪ್ರಿನ್ಸ್ ಅಬ್ಬರಕ್ಕೆ ಡೇಟ್‌ ಫಿಕ್ಸ್ ಆಗಿದ್ದು, ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

More from Filmibeat

English summary
Martin Release Date: Martin A film starring Dhruva sarja directed by AP arjun film and backed by producer uday k mehta film to hit the theatres on september 30th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X