Don't Miss!
- Finance
Masked ಆಧಾರ್ ಕಾರ್ಡ್ ಎಂದರೇನು? Download ಮಾಡುವುದು ಹೇಗೆ?
- Sports
IPL 2022 ಫೈನಲ್: ಬಟ್ಲರ್ ಬದಲಿಗೆ ಓಪನರ್ ಆಗಿದ್ದರೆ 1600 ರನ್ ಗಳಿಸುತ್ತಿದ್ದೆ ಎಂದ ಚಹಲ್
- News
ರಾಯಚೂರು; ಕರ್ನಾಟಕ ಪಬ್ಲಿಕ್ ಶಾಲೆಗೆ ಶಂಕು ಸ್ಥಾಪನೆ
- Automobiles
ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು
- Technology
ಪ್ರಸ್ತುತ ನೀವು ಖರೀದಿಸಬಹುದಾದ ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
- Lifestyle
ಮೇ 29 ರಿಂದ ಜೂನ್ 4ರ ವಾರ ಭವಿಷ್ಯ: ಮಿಥುನ, ಸಿಂಹ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಾರ್ಟಿನ್' ಅಡ್ಡಾದಲ್ಲಿ ನಡೀತಿರೋದೇನು: ಧ್ರುವ ಸರ್ಜಾ ಲುಕ್ ಬದಲಿಸಿದ್ದು ಯಾಕ?
ನಟ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾ ಕನ್ನಡದ ಬಹುನಿರೀಕ್ಷೆ ಚಿತ್ರಗಳಲ್ಲಿ ಒಂದು. ಪೊಗರು ನಂತರ ಧ್ರುವ ಸರ್ಜಾ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಮಾರ್ಟಿನ್ ಲುಕ್ ಈಗಾಗಲೇ ಬಿಡುಗಡೆ ಆಗಿದೆ. ಚಿತ್ರದ ಟೈಟಲ್ ಟೀಸರ್‌ನಲ್ಲಿ ಧ್ರುವ ಸರ್ಜಾ ಲುಕ್ ಅನಾವರಣ ಆಗಿದೆ.
ಧ್ರುವ ಸರ್ಜಾ ಅವರ ಸಿನಿಮಾಗಳು ರಿಲೀಸ್ ನಡುವೆ ಒಂದರಿಂದ ಮತ್ತೊಂದಕ್ಕೆ ಹೆಚ್ಚು ಗ್ಯಾಪ್ ಇರುತ್ತದೆ. ಸಿನಿಮಾದಿಂದ ಸಿನಿಮಾಗೆ ಧ್ರುವ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ತಡ ಮಾಡುವುದಿಲ್ಲ ವರ್ಷಕ್ಕೆ ಒಂದು ಸಿನಿಮಾ ಬರುತ್ತೆ ಎಂದು ಧ್ರುವ ಸರ್ಜಾ ಹೇಳಿ ಕೊಂಡಿದ್ದರು.
ಅಂತೆಯೇ ಈಗ ಮಾರ್ಟಿನ್ ಚಿತ್ರದಲ್ಲಿ ಧ್ರುವ ಬ್ಯೂಸಿಯಾಗಿದ್ದಾರೆ. ಸಿನಿಮಾ ಯಾವಾಗ ಹಂತದಲ್ಲಿ ಇದೆ. ಧ್ರುವ ಲುಕ್‌ನಲ್ಲಿ ಬದಲಾವಣೆ ಇರುತ್ತಾ ಎನ್ನುವ ಬಗ್ಗೆ ನಿರ್ದೇಶಕ ಎ.ಪಿ.ಅರ್ಜುನ್ ಏನ್ ಹೇಳುತ್ತಾರೆ ಎನ್ನುವುದನ್ನು ಮುಂದೆ ಓದಿ...

ಆ್ಯಕ್ಷನ್ ಮುಗಿಸಿದ ಆ್ಯಕ್ಷನ್ ಪ್ರಿನ್ಸ್!
ಮಾರ್ಟಿನ್ ಸಿನಿಮಾ ಈಗಾಗೇ ಕೆಲವು ಹಂತದ ಚಿತ್ರೀಕರಣವನ್ನು ಮಾಡಿ ಮುಗಿಸಿದೆ. ಹಾಗಾಗಿ ಬಹುತೇಕ ಸಿನಿಮಾ ಕೊನೆ ಹಂತದ ಚಿತ್ರೀಕರಣಕ್ಕೆ ತಲುಪಿದೆ. ಚಿತ್ರದಲ್ಲಿ ಅದ್ಭುತ ಆ್ಯಕ್ಷನ್ ದೃಶ್ಯಗಳು ಇರಿವೆ. ಅದಕ್ಕಾಗಿಯೇ ಧ್ರುವ ಅವರು ತಮ್ಮ ಬಾಡಿ ಬಿಲ್ಡ್ ಮಾಡಿ ಲುಕ್ ಬದಲಿಸಿ ಕೊಂಡಿದ್ದಾರೆ. ಕೇಲವ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣಕ್ಕಾಗಿಯೇ ಪತ್ಯೇಕ ಶೆಡ್ಯೂಲ್ ಮಾಡಿಕೊಂಡು ಶೂಟಿಂಗ್ ಮುಗಿಸಿದೆ ಚಿತ್ರ ತಂಡ. ಈ ವಿಚಾರವನ್ನು ಫಿಲ್ಮೀ ಬೀಟ್‌ಗೆ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟ ಪಡಿಸಿದ್ದಾರೆ.

ಧ್ರುವ ಎರಡನೇ ಶೇಡ್‌ನಲ್ಲಿ ಚಿತ್ರೀಕರಣ ಆರಂಭ!
ಸಿನಿಮಾದಲ್ಲಿ ನಟ ಧ್ರುವ ಅವರನ್ನು ವಿಭಿನ್ನ ಲುಕ್‌ಗಳಲ್ಲಿ ನೋಡ ಬಹುದು. ಆ್ಯಕ್ಷನ್ ದೃಶ್ಯಗಳಲ್ಲಿ ಧ್ರುವ ಸರ್ಜಾ ಸಿಕ್ಕಾಪಟ್ಟೆ ರಗಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಹಾಗೆ ಸೆಂಟಿಮೆಂಟ್ ಹಾಗು ಲವ್ ಎಪಿಸೋಡ್‌ಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಿದ್ದಾರೆ. ಸದ್ಯ ಆ್ಯಕ್ಷನ್ ದೃಶ್ಯದ ಚಿತ್ರೀಕರಣ ಮುಗಿದಿರುವ ಕಾರಣಕ್ಕೆ ಧ್ರುವ ಸರ್ಜಾ ಅವರು ಲುಕ್ ಬದಲಿಸಿಕೊಂಡು ಶೂಟಿಂಗ್‌ಗೆ ತೆರಳಿದ್ದಾರಂತೆ.

ಕಾಶ್ಮೀರದ ನಂತರ ಮಲೇಷಿಯಾಗೆ ಹಾರಲಿರುವ ಮಾರ್ಟಿನ್!
ಮಾರ್ಟಿನ್ ಚಿತ್ರದ ಮುಂದಿನ ಪಯಣ ಕಾಶ್ಮೀರ. ಇನ್ನು ಕೆಲವೇ ದಿನಗಳಲ್ಲಿ ಮುಂದಿನ ಹಂತದ ಶೂಟಿಂಗ್ ಶುರುಮಾಡಲಿದೆ ಮಾರ್ಟಿನ್ ಚಿತ್ರ ತಂಡ. ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯಲಿದೆ. ಅದಾದ ಬಿಳಿಕ ಚಿತ್ರ ತಂಡ ನಂತರದ ಶೂಂಟಿಂಗ್‌ಗಾಗಿ ಮಲೇಷಿಯಾಗೆ ಹಾರಲಿದೆ. ಚಿತ್ರದ ನಾಯಕಿಯಾಗಿ ವೈಭವಿ ಶಾಂಡಿಲ್ಯ ಅವರು ಆಯ್ಕೆ ಆಗಿದ್ದಾರೆ. ಅವರು ಕೂಡ ಚಿತ್ರೀಕರಣದಲ್ಲಿ ಭಾಗಿ ಅಗಿದ್ದಾರೆ.

ಅದ್ದೂರಿ ಬಳಿಕ ಒಂದಾದ ಧ್ರುವ-ಎಪಿ ಅರ್ಜುನ್!
ನಟ ಧ್ರುವ ಸರ್ಜಾ ಅಭಿನಯದ ಮೊದಲ ಚಿತ್ರ ಅದ್ದೂರಿ ಸಿನಿಮಾ ಅದ್ದೂರಿ ಯಶಸ್ಸು ಕಂಡು, ಅದ್ದೂರಿ ದಾಖಲೆ ಬರೆದ ಚಿತ್ರ. ಈ ಚಿತ್ರಕ್ಕೆ ಎಪಿ ಅರ್ಜುನ್ ನಿರ್ದೇಶನ ಇತ್ತು. ಹಾಗಾಗಿ ಈ ಹಿಟ್ ಕಾಂಬಿನೇಷನ್ ಯಾವಾಗ ಮತ್ತೆ ಒಂದಾಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಈಗ ಮಾರ್ಟಿನ್ ಚಿತ್ರದ ಮೂಲಕ ಒಂದಾದ ಈ ಜೋಡಿ ಸಿನಿಮಾ ಮೇಲೆ ನಿರೀಕ್ಷೆ ಹುಟ್ಟು ಹಾಕಿದೆ.