For Quick Alerts
  ALLOW NOTIFICATIONS  
  For Daily Alerts

  4 ಕೋಟಿ ರೂ. ಚೇಸ್‌ ಸೀನ್ ಮಾಡ್ತಾ ಮಾಡ್ತಾ ಮಂಗಳೂರಿಗೆ ಮಾಸ್ 'ಮಾರ್ಟಿನ್'!

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ. ಮೇಕಿಂಗ್ ಹಂತದಲ್ಲೇ ಈ ಸಿನಿಮಾ ಸಿಕ್ಕಾಪಟ್ಟೆ ಹೈಲ್ ಕ್ರಿಯೇಟ್ ಮಾಡಿದೆ. ಎ. ಪಿ ಅರ್ಜುನ್ ನಿರ್ದೇಶನದ ಈ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಮೂರು ಶೆಡ್ಯೂಲ್ ಶೂಟಿಂಗ್ ಮುಗಿಸಿರೋ ಟೀಂ, ಇಂದಿನಿಂದ(ಆಗಸ್ಟ್ 26) ಮಂಗಳೂರಿನಲ್ಲಿ ನಾಲ್ಕನೇ ಶೆಡ್ಯೂಲ್ ಶೂಟಿಂಗ್ ಆರಂಭಿಸಿದೆ.

  ಸೆಪ್ಟೆಂಬರ್ 30ಕ್ಕೆ 'ಮಾರ್ಟಿನ್' ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಶೂಟಿಂಗ್ ತಡವಾಗುತ್ತಿರುವ ಹಿನ್ನೆಲೆಯಲ್ಲಿ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಇನ್ನು 28 ದಿನಗಳ ಚಿತ್ರೀಕರಣ ಬಾಕಿಯಿದೆ. ಆಗಸ್ಟ್ ಮೊದಲ ವಾರದಲ್ಲೇ ಹೊಸ ಶೆಡ್ಯೂಲ್‌ಗೆ ಸಿದ್ಧತೆ ನಡೆಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕೊಂಚ ತಡವಾಗಿದ್ದು, ಇದೀಗ ಮತ್ತೆ ಧ್ರುವ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಇನ್ನಯ ಕ್ಲೈಮ್ಯಾಕ್ಸ್‌ ಎಪಿಸೋಡ್ ಶೂಟಿಂಗ್ ಕೂಡ ನಡೆಯಬೇಕಿದೆ. ಈ ಹಿಂದೆ ಚಿತ್ರತಂಡ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಿ ಬಂದಿತ್ತು.

  ಭಾನುವಾರದ ಬಾಡೂಟ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಧಮ್ ಬಿರಿಯಾನಿ ವಿಡಿಯೊ ವೈರಲ್ಭಾನುವಾರದ ಬಾಡೂಟ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಧಮ್ ಬಿರಿಯಾನಿ ವಿಡಿಯೊ ವೈರಲ್

  ಈಗಾಗಲೇ ಧ್ರುವ ಸರ್ಜಾ ನಟನೆಯ 4 ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ 4ನೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ. ಈಗಾಗಲೇ 'ಮಾರ್ಟಿನ್' ಚಿತ್ರದ ಪೋಸ್ಟರ್‌ಗಳು, ಸಣ್ಣ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಒನ್ಸ್ ಅಗೇನ್ ಧ್ರುವ ಆಕ್ಷನ್ ಹೀರೊ ಆಗಿ ಅಬ್ಬರಿಸೋಕೆ ಬರುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಪಕ ಉದಯ್ ಕೆ. ಮೆಹ್ತಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಣಿಶರ್ಮಾ ಸಂಗೀತ, ಸತ್ಯಾ ಹೆಗಡೆ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.

  ಮಂಗಳೂರಿನಲ್ಲಿ 'ಮಾರ್ಟಿನ್' ಚಿತ್ರೀಕರಣ

  ಮಂಗಳೂರಿನಲ್ಲಿ 'ಮಾರ್ಟಿನ್' ಚಿತ್ರೀಕರಣ

  ಮಂಗಳೂರಿನಲ್ಲಿ ಬಹಳ ದೊಡ್ಡಮಟ್ಟದಲ್ಲೇ ಚಿತ್ರತಂಡ ನಾಲ್ಕನೇ ಶೆಡ್ಯೂಲ್ ಪ್ಲ್ಯಾನ್ ಮಾಡಿದೆ. ಧ್ರುವ ಸರ್ಜಾ ಹಾಗೂ ಹಾಸ್ಯ ನಟ ಚಿಕ್ಕಣ್ಣ ಸೇರಿದಂತೆ ಸಾಕಷ್ಟು ಜನ ಕಲಾವಿದರು ಇಂದಿನಿಂದ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. 'ಮಾರ್ಟಿನ್' ಸಿನಿಮಾ ಕಥೆಯ ಪ್ರಕಾರ ನಾಯಕಿಯ ಊರು ಮಂಗಳೂರು. ಹಾಗಾಗಿ ಅಲ್ಲಿ ನಡೆಯುವ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿದೆ. ಮಂಗಳೂರು ಬಂದರು ಸೇರಿದಂತೆ ಸಾಕಷ್ಟು ಚಿತ್ರೀಕರಣ ನಡೆಯಲಿದೆ.

  ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳಿವು: ನಿಮ್ಮ ಆಯ್ಕೆ ಯಾವುದು?ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳಿವು: ನಿಮ್ಮ ಆಯ್ಕೆ ಯಾವುದು?

  ಶೀಘ್ರದಲ್ಲೇ ಮುಗಿಯಲಿದೆ ಮಾತಿನ ಭಾಗದ ಚಿತ್ರೀಕರಣ

  ಶೀಘ್ರದಲ್ಲೇ ಮುಗಿಯಲಿದೆ ಮಾತಿನ ಭಾಗದ ಚಿತ್ರೀಕರಣ

  ಈಗಾಗಲೇ ಸಿನಿಮಾ ಶೂಟಿಂಗ್ ತಡವಾಗುತ್ತಾ ಸಾಗಿದೆ. ಹಾಗಾಗಿ ಅಕ್ಟೋಬರ್ 15ರ ವೇಳೆಗೆ ಮಾತಿನ ಭಾಗದ ಚಿತ್ರೀಕರಣ ಮುಗಿಸುವ ಪ್ರಯತ್ನದಲ್ಲಿದೆ ಚಿತ್ರತಂಡ. ಇನ್ನು ಮಂಗಳೂರು ಶೆಡ್ಯೂಲ್ ನಂತರ ಹೈದರಾಬಾದ್‌ಗೆ ಹೊರಡಲಿದ್ದಾರೆ. ಅಲ್ಲಿ ಮಾತಿನ ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಿ, ಆಮೇಲೆ 4 ಸಾಂಗ್ಸ್‌ ಶೂಟಿಂಗ್‌ಗೆ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.

  ಫಾರಿನ್‌ನಲ್ಲಿ 'ಮಾರ್ಟಿನ್' ಸಾಂಗ್ ಶೂಟಿಂಗ್

  ಫಾರಿನ್‌ನಲ್ಲಿ 'ಮಾರ್ಟಿನ್' ಸಾಂಗ್ ಶೂಟಿಂಗ್

  ಧ್ರುವ ಸರ್ಜಾ ಸಿನಿಮಾ ಅಂದರೆ ಸಾಂಗ್ಸ್‌ ಸ್ಪೆಷಲ್ ಅಟ್ರಾಕ್ಷನ್. ಧ್ರುವ ಡ್ಯಾನ್ಸ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಮಾತಿನ ಭಾಗದ ಚಿತ್ರೀಕರಣ ಮುಗಿದ ಮೇಲೆ ಸೆಟ್‌ ಹಾಕಿ 3 ಸಾಂಗ್‌ಗಳನ್ನು ಸೆರೆಹಿಡಿಯುವ ಲೆಕ್ಕಾಚಾರದಲ್ಲಿದ್ದಾರೆ ಎ. ಪಿ ಅರ್ಜುನ್. ಫಾರಿನ್‌ ಲೊಕೇಶನ್‌ಗಳಲ್ಲಿ ಮತ್ತೊಂದು ಸಾಂಗ್‌ ಸೆರೆ ಹಿಡಿದರೆ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಲಿದೆ.

  4.8 ಕೋಟಿ ರೂ. ವೆಚ್ಚದ ಚೇಸಿಂಗ್ ಸೀನ್

  4.8 ಕೋಟಿ ರೂ. ವೆಚ್ಚದ ಚೇಸಿಂಗ್ ಸೀನ್

  ಮೊದಲ ಶೆಡ್ಯೂಲ್‌ನಲ್ಲೇ ಭರ್ಜರಿ ಚೇಸಿಂಗ್ ಸೀನ್‌ವೊಂದನ್ನು ಚಿತ್ರತಂಡ ಸೆರೆ ಹಿಡಿದಿದೆ. ಈಗಾಗಲೇ ಅದರ ಸಿಜಿ ವರ್ಕ್‌ ಕೂಡ ಕಂಪ್ಲೀಟ್ ಆಗಿದೆ. ಅದೊಂದು ಎಪಿಸೋಡ್‌ಗಾಗಿ 4.8 ಕೋಟಿ ರೂ. ವ್ಯಯಿಸಲಾಗಿದ್ದು, ಇದು 'ಮಾರ್ಟಿನ್' ಚಿತ್ರದ ಹೈಲೆಟ್ ಎಂದು ಹೇಳಲಾಗುತ್ತಿದೆ. ತೆರೆಮೇಲೆ ಪ್ರೇಕ್ಷಕರಿಗೆ ಈ ಸೀಕ್ವೆನ್ಸ್ ಸಖತ್ ಕಿಕ್ ಕೊಡಲಿದೆಯಂತೆ. ಇನ್ನು ಮುಂದಿನ ತಿಂಗಳು ಹೈದರಾಬಾದ್‌ನಲ್ಲಿ ಭರ್ಜರಿ ಕ್ಲೈಮ್ಯಾಕ್ಸ್‌ ಎಪಿಸೋಡ್‌ಗೆ ಚಿತ್ರತಂಡ ತಯಾರಿ ನಡೆಸುತ್ತಿದೆ.

  'ಮಾರ್ಟಿನ್' ಸಿನಿಮಾ ಬಜೆಟ್ ಎಷ್ಟು?

  'ಮಾರ್ಟಿನ್' ಸಿನಿಮಾ ಬಜೆಟ್ ಎಷ್ಟು?

  ಕೆಲ ಮಾಹಿತಿ ಪ್ರಕಾರ ಧ್ರುವ ಸರ್ಜಾ ಕರಿಯರ್‌ನಲ್ಲೇ ಬಹಳ ದುಬಾರಿ ಸಿನಿಮಾ 'ಮಾರ್ಟಿನ್' ಎಂದು ಹೇಳಲಾಗುತ್ತಿದೆ. ಅಂದಾಜು 60ರಿಂದ 70 ಕೋಟಿ ರೂ. ಬಜೆಟ್‌ನಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲೇ ತೆರೆಮೇಲೆ 'ಮಾರ್ಟಿನ್' ಧ್ರುವ ಆರ್ಭಟ ಶುರುವಾಗಲಿದೆ.

  English summary
  Dhruva Sarja Starrer Martin new shooting schedule Begins in Mangalore. Know More.
  Friday, August 26, 2022, 13:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X