Martin Teaser: ದುಡ್ಟು ಕೊಟ್ಟು 'ಮಾರ್ಟಿನ್' ಟೀಸರ್ ನೋಡಲು ಮುಗಿಬಿದ್ದ ವಿಐಪಿಗಳು: ಶೋ ಟಿಕೆಟ್ಸ್ ಸೋಲ್ಡೌಟ್

ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಟೀಸರ್ ಲಾಂಚ್‌ಗೆ ಇನ್ನೊಂದೇ ದಿನ ಬಾಕಿಯಿದೆ. ಎ. ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು. ಸಿನಿಮಾ ಟೀಸರ್ ಪ್ರದರ್ಶನಕ್ಕೆ ಅಭಿಮಾನಿಗಳಿಗಾಗಿ ಥಿಯೇಟರ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಗುರುವಾರ ಸಂಜೆ 'ಮಾರ್ಟಿನ್' ಟೀಸರ್ ರಿಲೀಸ್ ಈವೆಂಟ್ ನಡೆಯಲಿದೆ. ಅದಕ್ಕೂ ಮುನ್ನ ಮಾಗಡಿ ರಸ್ತೆಯ ವೀರೇಶ್ ಥಿಯೇಟರ್‌ನಲ್ಲಿ ಟೀಸರ್ ಪ್ರೀಮಿಯರ್ ಶೋ ನಡೆಯಲಿದೆ. ಅಭಿಮಾನಿಗಳು ಟಿಕೆಟ್ ಖರೀದಿಸಿ ಯೂಟ್ಯೂಬ್‌ನಲ್ಲಿ ಬರುವುದಕ್ಕೂ ಮೊದಲೇ ಟೀಸರ್ ನೋಡಬಹುದು. ಇದೇ ಮೊದಲ ಬಾರಿಗೆ ಇಂತಾದೊಂದು ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ತಿದ್ದು, ಟೀಸರ್ ಪ್ರೀಮಿಯರ್ ಶೋವೊಂದರ ಟಿಕೆಟ್ಸ್ ಸೋಲ್ಡೌಟ್ ಆಗಿದೆ.

ಉದಯ್ ಕೆ. ಮೆಹ್ತಾ ನಿರ್ಮಾಣದ ಬಹುಕೋಟಿ ವೆಚ್ಚದ ಸಿನಿಮಾ 'ಮಾರ್ಟಿನ್'. ಧ್ರುವ ಸರ್ಜಾ ಮತ್ತೊಮ್ಮೆ ಆಕ್ಷನ್ ಹೀರೊ ಆಗಿ ಚಿತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಗಮನ ಸೆಳೆದಿದೆ.

ಟೀಸರ್ ಪ್ರೀಮಿಯರ್ ಶೋ ಸೋಲ್ಡೌಟ್

ಟೀಸರ್ ಪ್ರೀಮಿಯರ್ ಶೋ ಸೋಲ್ಡೌಟ್

ಧ್ರುವ ಸರ್ಜಾ ವಿಐಪಿಗಳು(ಅಭಿಮಾನಿಗಳು) 'ಮಾರ್ಟಿನ್' ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸಿನಿಮಾ ಟೀಸರ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಮಾಗಡಿ ರಸ್ತೆಯ ವೀರೇಶ್ ಥಿಯೇಟರ್‌ನಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆಗೆ ಟೀಸರ್ ಪ್ರೀಮಿಯರ್ ಶೋ ಇದೆ. ಅದಕ್ಕೆ ಟಿಕೆಟ್ ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೆಲವೇ ಸಿನಿಮಾಗಳಲ್ಲಿ ಟಿಕೆಟ್ ಸೋಲ್ಡೌಟ್ ಆಗಿದೆ. ರೆಸ್ಪಾನ್ಸ್ ನೋಡಿ ಖುಷಿಯಾದ ಚಿತ್ರತಂಡ 2 ಗಂಟೆಗೆ ಮತ್ತೊಂದು ಶೋ ಆಯೋಜಿಸಿದೆ.

ಗೋಶಾಲೆಗೆ ಟೀಸರ್ ಶೋ ಹಣ

ಗೋಶಾಲೆಗೆ ಟೀಸರ್ ಶೋ ಹಣ

ವೀರೇಶ್ ಥಿಯೇಟರ್‌ನಲ್ಲಿ ಬಾಲ್ಕನಿ 100 ರೂ, ಫಸ್ಟ್ ಕ್ಲಾಸ್ ಟಿಕೆಟ್‌ಗೆ 80 ರೂ. ನಿಗದಿಪಡಿಸಲಾಗಿದೆ. ಟೀಸರ್ ಕೂಡ ಹಣ ಕೊಟ್ಟ ನೋಡಬೇಕಾ? ಎನ್ನುವ ಪ್ರಶ್ನೆ ಏಳಬಹುದು. ಆದರೆ ಈ ಶೋಗಳಿಂದ ಬಂದ ಹಣವನ್ನು ಗೋಶಾಲೆಗೆ ನೀಡುವುದಾಗಿ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಈಗಾಗಲೇ ಘೋಷಿಸಿದ್ದಾರೆ. ಸಾಕಷ್ಟು ಅಭಿಮಾನಿಗಳು ಥಿಯೇಟರ್‌ನಲ್ಲಿ ಟೀಸರ್ ನೋಡಬೇಕು ಎಂದು ಉತ್ಸುಕರಾಗಿದ್ದಾರೆ. ಎಲ್ಲರಿಗೂ ಥಿಯೇಟರ್‌ನಲ್ಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ರೀತಿ ಟಿಕೆಟ್ ಖರೀದಿಸಿ ನೋಡಲು ಅನುವು ಮಾಡಿಕೊಡಲಾಗಿದೆ.

ಹೈವೋಲ್ಟೇಜ್ ಆಕ್ಷನ್ ಸಿನಿಮಾ

ಹೈವೋಲ್ಟೇಜ್ ಆಕ್ಷನ್ ಸಿನಿಮಾ

ಖಡಕ್ ಟೈಟಲ್‌ಗೆ ತಕ್ಕಂತೆ ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಇದು. ಎ. ಪಿ ಅರ್ಜುನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ. ಬೆಂಗಳೂರು, ಹೈದರಾಬಾದ್, ಕಾಶ್ಮೀರ, ಮಂಗಳೂರು ಸೇರಿದಂತೆ ಹಲವೆಡೆ ಸಿನಿಮಾ ಚಿತ್ರೀಕರಣ ನಡೆದಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 'ಮಾರ್ಟಿನ್' ಆರ್ಭಟ ಶುರುವಾಗಲಿದೆ.

ಚುನಾವಣೆ ನಂತರ ಸಿನಿಮಾ ರಿಲೀಸ್

ಚುನಾವಣೆ ನಂತರ ಸಿನಿಮಾ ರಿಲೀಸ್

5 ಭಾಷೆಗಳಲ್ಲಿ 'ಮಾರ್ಟಿನ್' ಸಿನಿಮಾ ನಿರ್ಮಾಣವಾಗ್ತಿದೆ. ಅಂದಾಜು 50 ಕೋಟಿ ಬಜೆಟ್‌ನಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ಕಟ್ಟಿಕೊಡಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಶೂಟಿಂಗ್ ತಡವಾಗಿತ್ತು. ಇದೀಗ ಬಹುತೇಕ ಶೂಟಿಂಗ್ ಮುಗಿದಿದೆ. ಚುನಾವಣೆ ನಂತರ ಜೂನ್‌ ವೇಳೆಗೆ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.

More from Filmibeat

English summary
Dhruva Sarja Starrer Martin Teaser Premier Show Tickets are Sold out. Action entertainer Martin teaser releasing on 23rd February. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X