Martin Teaser : ಧ್ರುವ ಸರ್ಜಾ - ಎಪಿ ಅರ್ಜುನ್ ಕಾಂಬಿನೇಶನ್‌ನ 'ಮಾರ್ಟಿನ್' ಟೀಸರ್ ಬಿಡುಗಡೆ ದಿನಾಂಕ ಘೋಷಣೆ

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿಯನ್ನು ಪಡೆದಿರುವ ನಟ ಧ್ರುವ ಸರ್ಜಾ ನಟನೆಯ ಮುಂದಿನ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್ ಕುರಿತಾದ ಮೆಗಾ ಅಪ್‌ಡೇಟ್ ಒಂದು ಹೊರಬಿದ್ದಿದೆ. ಚಿತ್ರತಂಡ ತಮ್ಮ ಚಿತ್ರದ ಟೀಸರ್ ಅನ್ನು ಇದೇ ತಿಂಗಳ 23ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.

ಹೌದು, ಮಾರ್ಟಿನ್ ಚಿತ್ರದ ಟೀಸರ್ ಇದೇ ತಿಂಗಳ 23ರಂದು ಯುಟ್ಯೂಬ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಇಂಡಿಯಾದ ಬಿಗ್ಗೆಸ್ಟ್ ಆಕ್ಷನ್ ಸಾಗಾ ಎಂದು ಹೇಳಿಕೊಳ್ಳುತ್ತಿದೆ ಚಿತ್ರತಂಡ. ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಹೆತೇಚ್ಛವಾಗಿ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಚಿತ್ರತಂಡ ಈಗಾಗಲೇ ಹಂಚಿಕೊಂಡಿರುವ ಚಿತ್ರದ ಪೋಸ್ಟರ್‌ಗಳಲ್ಲೂ ಸಹ ಧ್ರುವ ಸರ್ಜಾರ ಆಕ್ಷನ್ ದೃಶ್ಯದ ಲುಕ್‌ಗಳೇ ಹೆಚ್ಚಿದೆ.

Dhruva Sarja starrer Martin teaser releasing on 23rd February

ಇನ್ನು ಟೀಸರ್ ದಿನಾಂಕ ಘೋಷಿಸಲು ಚಿತ್ರತಂಡ ಹಂಚಿಕೊಂಡಿರುವ ಪೋಸ್ಟರ್‌ನಲ್ಲೂ ಸಹ ಧ್ರುವ ಸರ್ಜಾ ದೊಡ್ಡ ಗನ್ ಒಂದನ್ನು ಹಿಡಿದು ರಗಡ್ ಆಗಿ ಕಾಣಿಸಿಕೊಂಡಿದ್ದು, ಬ್ಯಾಕ್‌ಗ್ರೌಂಡ್‌ನಲ್ಲಿ ಯುದ್ಧದ ಪ್ಯಾಂಜರ್ ಸಹ ಇದೆ. ಚಿತ್ರದಲ್ಲಿ ನಾಯಕಿಯಾಗಿ ಗಾಳಿಪಟ 2 ಚಿತ್ರದಲ್ಲಿ ನಟಿಸಿದ್ದ ವೈಭವಿ ಶಾಂಡಿಲ್ಯ ನಟಿಸಿದ್ದು, ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು.

ಇತ್ತೀಚೆಗಷ್ಟೆ ಕಬ್ಜ ಚಿತ್ರದ ಟೀಸರ್‌ಗೆ ಭರ್ಜರಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ನೀಡುವ ಮೂಲಕ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದ ರವಿ ಬಸ್ರೂರು ಮಾರ್ಟಿನ್ ರೀತಿಯ ಕಂಪ್ಲೀಟ್ ಆಕ್ಷನ್ ಚಿತ್ರಕ್ಕೂ ಸಹ ಅಂತಹದ್ದೇ ರೋಮಾಂಚನಕಾರಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ನೀಡಲಿದ್ದಾರೆ ಎನ್ನಬಹುದಾಗಿದೆ.

More from Filmibeat

English summary
Dhruva Sarja starrer Martin teaser releasing on 23rd February. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X